ಕರ್ನಾಟಕ

ನಾವು ಅಧಿಕಾರ ತ್ಯಜಿಸಲು ಸಿದ್ಧರಿದ್ದೇವೆ’ ಎಂದಿದ್ದು ಯಾರು ಗೊತ್ತಾ?

Pinterest LinkedIn Tumblr


ಬೆಂಗಳೂರು: ಸಿದ್ಧ ಭಾಷಣ ಓದಲು ತಡಕಾಡಿದ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಗಣೇಶ್ ಅವರು, ಸದನದಲ್ಲಿ ಎದ್ದು ನಿಂತು ಮಹಮ್ಮದ್ ಘಜ್ನಿ ಹಾಗೂ ತುಘಲಕ್ ಬಗ್ಗೆ ಪ್ರಸ್ತಾಪ ಮಾಡಿದರು.

ಈ ವೇಳೆ ಇಬ್ಬರನ್ನೂ ಒಂದೇ ಎಂಬಂತೆ ಭಾಷಣ ಮಾಡಲು ಮುಂದಾಗಿ ತಪ್ಪು ತಪ್ಪಾಗಿ ಭಾಷಣ ಮಾಡಿದ ಗಣೇಶ್ ಅವರು ನಂತರ ಮುಸಲೋನಿ ಹಾಗೂ ಹಿಟ್ಲರ್ ಬಗ್ಗೆ ಪ್ರಸ್ತಾಪ ಮಾಡಿದರು. ಇಲ್ಲಿ ಸಹ ಹಿಟ್ಲರ್ ಬಗ್ಗೆಯೂ ತಪ್ಪು ಭಾಷಣ ಮಾಡಿದರು. ಈ ವೇಳೆ ಸ್ಪೀಕರ್​ ರಮೇಶ್ ಕುಮಾರ್ ಅವರು ಪದೇ ಪದೇ ಮಧ್ಯೆ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಎದುರಾಯ್ತು. ಆದರೆ ಸ್ಪೀಕರ್ ಅವರು ಗಣೇಶ್ ಅವರ ತಪ್ಪು ಸರಿಪಡಿಸಿ ಮಾತನಾಡಲು ಅವಕಾಶ ಕಲ್ಪಿಸಿದರು.

ಇಟಲಿಯಲ್ಲಿ ಆಡಳಿಯ ಮಾಡಿದ್ದು ಹಿಟ್ಲರ್ ಮತ್ತು ಜರ್ಮನಿಯಲ್ಲಿ ಆಡಳಿತ ಮಾಡಿದ್ದು ಮುಸಲೋನಿ, ನೀವು ಇಬ್ಬರೂ ಸರ್ವಾಧಿಕಾರಿಗಳು, ನೀನು ಯಾರ ಬಗ್ಗೆ ಮಾತನಾಡುತ್ತಿದ್ದೀಯಾ(?) ಎಂದು ಕೇಳಿ ಅದಕ್ಕೆ ಸ್ಪೀಕರ್​ ರಮೇಶ್ ಕುಮಾರ್​ ಅವರು ಸ್ಪಷ್ಟನೆ ನೀಡಿದರು. ಗಣೇಶ್ ಅವರು ಎರಡು ದೇಶಕ್ಕೆ ಒಬ್ಬರೇ ಎಂಬ ಅರ್ಥದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ.

ಬಳಿಕ ನೀವು ಮೊದಲ ಬಾರಿ ಶಾಸಕನಾಗಿದ್ದೀಯಾ, ಮುಂದೆ ಹೇರಳ ಅವಕಾಶ ಸಿಗುತ್ತೆ, ಸರಿಯಾಗಿ ಓದಿಕೊಂಡು ಬಂದರೆ ಒಳ್ಳೆಯದು. ಕಡತಕ್ಕೆ ತಪ್ಪು ಮಾಹಿತಿ ಹೋಗಬಾರದು ಅಂತ ನಾನು ತಿದ್ದಿದ್ದೇನೆ. ಸಮಯ ಇದ್ದಾಗ ನನ್ನ ಬಳಿ ಬನ್ನಿ. ನಾನು ನಿಮ್ಮ ಭಾಷಣಕ್ಕೆ ಸಲಹೆ ನೀಡುತ್ತೇನೆ ಎಂದು ಸ್ಪೀಕರ್​ ರಮೇಶ್ ಕುಮಾರ್ ಕಂಪ್ಲಿ ಶಾಸಕ ಗಣೇಶ್​​ಗೆ ಸೂಚನೆ ಕೊಟ್ಟರು.

ಅಲ್ಲದೇ ಇನ್ನು ಕೆಲವು ಮೈತ್ರಿ ಶಾಸಕರು ಸದನದಲ್ಲಿ ನಮಗೆ ಮಾತನಾಡಲು ಇನ್ನೂ ಅವಕಾಶ ಕೊಡಿ ಎಂದು ಆಗ್ರಹ ಮಾಡಿದರು. ನಾವು ಖುರ್ಚಿ ಬಿಟ್ಟು ಕೊಡಲು ಸಿದ್ಧರಿದ್ದೇವೆ. ಆದರೆ, ಅದಕ್ಕೂ ಮುನ್ನ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್​ ರಮೇಶ್ ಕುಮಾರ್​ ಬಳಿ ಮನವಿ ಮಾಡಿಕೊಂಡರು ಇದಕ್ಕೆ ಸ್ಪೀಕರ್​ 10 ನಿಮಿಷದ ಬಳಿಕ ಮತ್ತೆ ಸದನದ ಕಲಾಪ ಮುಂದುವರೆಯುತ್ತದೆ ಎಂದರು.

Comments are closed.