ಮನೋರಂಜನೆ

ಸಿಂಗ’ನ ಆರ್ಭಟಕ್ಕೆ ಬೆಚ್ಚಿಬಿದ್ದ ಗಾಂಧಿನಗರ

Pinterest LinkedIn Tumblr


ಬೆಂಗಳೂರು: ಮಾಸ್​​ ಟ್ರೈಲರ್​ ಮತ್ತು ಬಿಂದಾಸ್​​​ ಸಾಂಗ್ಸ್​ನಿಂದ ರಿಲೀಸ್​ಗೂ ಮೊದ್ಲೆ ಕುತೂಹಲ ಕೆರಳಿಸಿದ್ದ ಸಿನಿಮಾ ಸಿಂಗ. ಯುವಸಾಮ್ರಾಟ್​​ ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಅಭಿನಯದ ಈ ಮಾಸ್ ಎಂಟ್ರಟ್ರೈನರ್ ರಾಜ್ಯಾದ್ಯಂತ ತೆರೆಗಪ್ಪಳಿದ್ದು, ಸಿನಿಮಾ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.

ಸಿಂಗ, ಪ್ರೀತ್ಸೋರಿಗೆ ಭಕ್ತ ಪ್ರಹ್ಲಾದ, ಕೆಣಕಿದವರಿಗೆ ಹಿರಣ್ಯಕಶಿಪು. ಈ ಸಾಲಿಗೆ ತಕ್ಕಂತೆ ಸಿಂಗನ ಕಥೆ ಹೆಣೆದು ಚಿತ್ರಮಂದಿರಕ್ಕೆ ಕರೆತಂದಿದ್ದಾರೆ ನಿರ್ದೇಶಕ ವಿಜಯ್ ಕಿರಣ್. ಸೌಂಡಿಂಗ್ ಟೈಟಲ್, ರಗಡ್​ ಹೀರೋ, ಜಬರ್ದಸ್ತ್​ ಆ್ಯಕ್ಷನ್, ಬಿಂದಾಸ್ ಸಾಂಗ್ಸ್, ಶಿಳ್ಳೆಗಿಟ್ಟಿಸುವ ಡೈಲಾಗ್ಸ್, ಸಿಂಪಲ್​ ಲವ್​ ಸ್ಟೋರಿ, ಒಂಚೂರಿ ಕಾಮಿಡಿ ಹಾಗೂ ಎಮೋಷನ್​​​ ಇವಿಷ್ಟನ್ನು ಹದವಾಗಿ ಬೆರೆಸಿ, ಸಿಂಗ ಚಿತ್ರವನ್ನ ಕಟ್ಟಿಕೊಟ್ಟಿದ್ದಾರೆ. ಮಾಸ್​ ಪ್ರೇಕ್ಷಕರಿಗಂತೂ ಸಿನಿಮಾ ಭರ್ಜರಿ ಭೋಜನವಾಗಿದೆ.

ಚಿತ್ರ: ಸಿಂಗ
ನಿರ್ದೇಶನ: ವಿಜಯ್​ ಕಿರಣ್
ನಿರ್ಮಾಣ: ಉದಯ್​ ಕೆ. ಮೆಹ್ತಾ
ಸಂಗೀತ: ಧರ್ಮವಿಶ್
ಛಾಯಾಗ್ರಹಣ: ಕಿರಣ್​ ಹಂಪಾಪುರ
ತಾರಾಗಣ: ಚಿರಂಜೀವಿ ಸರ್ಜಾ, ಅಧಿತಿ ಪ್ರಭುದೇವ, ತಾರಾ, ಆರ್ಮುಗ ರವಿಶಂಕರ್, ಶಿವರಾಜ್​. ಕೆ ಆರ್​ ಪೇಟೆ ಇತರರು.

ಸಿಂಗ ಸ್ಟೋರಿಲೈನ್

ಊರಿನ ಜನರ ಕಷ್ಟಕ್ಕೆ ಮಿಡಿಯುವ ನಾಯಕ ಸಿಂಗ, ತಂದೆಯನ್ನ ಕಳೆದುಕೊಂಡ ಅವನಿಗೆ ತಾಯಿ ಜಾನಕಿಯೇ ಪ್ರಪಂಚ, ಜಾನಕಿಗೆ ಮಗ ಅಂದ್ರೆ ಪಂಚಪ್ರಾಣ, ಕೋಪಾನೇ ಅವನ ವೀಕ್​ನೆಸ್ಸು, ಪೊಗರೇ ಅವನ ಸ್ಟ್ರೆಂತು. ಒರಟ, ಕೋಪಿಷ್ಟ ಆದ್ರು, ಸಿಂಗನಲ್ಲಿರೋ ಮಾನವೀಯ ಗುಣಕ್ಕೆ ನಾಯಕಿ ಗೀತಾ ಮರುಳಾಗ್ತಾಳೆ. ಊರಿನಲ್ಲಿ ಕಂಟ್ರಾಕ್ಟರ್​​ ರುದ್ರ ಮತ್ತು ಆತನ ಮಗ, ಎಂಪಿ ಸಹಾಯದಿಂದ ದಬ್ಬಾಳಿಕೆ ನಡೆಸ್ತಿರ್ತಾರೆ ಅವರ ಅನ್ಯಾಯ ಅಕ್ರಮಗಳಿಗೆಲ್ಲಾ ಸಿಂಗ ಪದೇ ಪದೇ ಬ್ರೇಕ್​ ಹಾಕ್ತಿರ್ತಾನೆ.
ಸಿಂಗ ಮತ್ತು ರುದ್ರ ನಡುವಿನ ಕಾದಾಟವೇ ಈ ಸಿನಿಮಾದ ಕಥೆ. ರುದ್ರನನ್ನ ಎದುರಾಕಿಕೊಂಡು ಸಿಂಗ ಏನೆಲ್ಲಾ ಸಮಸ್ಯೆ ಎದುರಿಸ್ತಾನೆ, ಕೊನೆಗೆ ಏನಾಗುತ್ತೆ ಅನ್ನೋದನ್ನು ನೀವು ತೆರೆಮೇಲೆ ನೋಡ್ಬೇಕು.

ಸಿಂಗ ಆರ್ಟಿಸ್ಟ್​ ಪರ್ಫಾಮೆನ್ಸ್​

ಕೆಂಪೇಗೌಡ ರೀತಿ ಗಿರಿಜಾ ಮೀಸೆ ಬಿಟ್ಟು, ಹೀರೋ ಚಿರಂಜೀವಿ ಸರ್ಜಾ ಸಿಂಗನ ಅವತರಾದಲ್ಲಿ ಇಡೀ ಸಿನಿಮಾ ಅಬ್ಬರಿಸಿದ್ದಾರೆ. ಆ್ಯಕ್ಷನ್, ಡೈಲಾಗ್ ಡೆಲಿವರಿ ಎಲ್ಲದ್ರಲ್ಲೂ ಕಮಾಲ್ ಮಾಡಿದ್ದಾರೆ. ಇಲ್ಲಿವರೆಗೆ ಭಿನ್ನ ವಿಭಿನ್ನ ಚಿತ್ರಗಳಲ್ಲಿ ಮಿಂಚಿರೋ ಚಿರು ಮೊದಲ ಬಾರಿಗೆ ಕಂಪ್ಲೀಟ್​ ಆ್ಯಕ್ಷನ್​ ಸಿನಿಮಾದಲ್ಲಿ ನಟಿಸಿ, ಸೈ ಅನ್ನಿಸಿಕೊಂಡಿದ್ದಾರೆ. ಖಳನಾಯಕ ರುದ್ರನ ಪಾತ್ರದಲ್ಲಿ ಆರ್ಮುಗ ರವಿಶಂಕರ್​ ಆರ್ಭಟಿಸಿದ್ದು, ಇವರಿಬ್ಬರ ಜಟಾಪಟಿ ಸಿಂಗ ಚಿತ್ರದ ಹೈಲೆಟ್.

ಸಿಂಗನ ತಾಯಿ ಪಾತ್ರದಲ್ಲಿ ತಾರಾ ಸೊಗಸಾಗಿ ಅಭಿನಯಿಸಿದ್ರೆ, ಸಿಂಗನ ಸಹೋದರ ಹಾವಳಿ ಆಗಿ ಶಿವರಾಜ್​, ಕೆ ಆರ್​ ಪೇಟೆ ಇಡೀ ಸಿನಿಮಾದಲ್ಲಿ ಚಿರು ಜೊತೆ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಜೊತೆಗೆ ಹೀರೋ ಬಿಲ್ಡಪ್​ ಡೈಲಾಗ್​ಗಳನ್ನ ಹೊಡೆದು ಚಪ್ಪಾಳೆ ಗಿಟ್ಟಿಸ್ತಾರೆ. ಲಂಗ ದಾವಣಿಯಲ್ಲಿ ಹಳ್ಳಿಯ ಘಾಟಿ ಹುಡುಗಿಯಾಗಿ ಇಷ್ಟವಾಗೋ ಅದಿತಿ ಪ್ರಭುದೇವ, ಸಾಂಗ್ಸ್​ನಲ್ಲೂ ಚೆಂದವಾಗಿ ಕಾಣಿಸ್ತಾರೆ.

ಸಿಂಗ ಪ್ಲಸ್ ಪಾಯಿಂಟ್ಸ್

⦁ ಕಥೆ, ಚಿತ್ರಕಥೆ
⦁ ಕಲಾವಿದರ ನಟನೆ
⦁ ಡೈಲಾಗ್ಸ್ ಮತ್ತು ಸಾಂಗ್ಸ್

ಸಿಂಗ ಮೈನಸ್​ ಪಾಯಿಂಟ್

ಸಿಂಗ ಸಿನಿಮಾ ಕ್ಲೈಮ್ಯಾಕ್ಸ್​​ ನಾಟಕೀಯವಾಗಿದೆ ಅನ್ನೋದು ಬಿಟ್ರೆ, ಎಲ್ಲಾ ಕಮರ್ಷಿಯಲ್​ ಎಲಿಮೆಂಟ್ಸ್​ ಇರೋ ಕಂಪ್ಲೀಟ್​​ ಪ್ಯಾಕೇಜ್ ಸಿಂಗ. ಮಾಸ್​ ಪ್ರೇಕ್ಷಕರಿಗಂತೂ ಸಿಂಗ ಮಸ್ತ್ ಎಂಟ್ರಟ್ರೈನರ್​ ಸಿನಿಮಾ.

Comments are closed.