
ಬೆಂಗಳೂರು: ನಾವೇನು ಪ್ರಜಾಪ್ರಭುತ್ವದಲ್ಲಿದ್ದೇವಾ(?) ಎಂದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲಿ ಪ್ರಶ್ನೆ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸದನದಲ್ಲಿ ಮಾತನಾಡಿದ ಅವರು, ನಾವು ಹೋಟೆಲ್ನಲ್ಲಿ ಕೊಠಡಿ ಬುಕ್ ಮಾಡಿದ್ದರು. ನಮಗೆ ಕೊಠಡಿಗೆ ಹೋಗಿ ಸ್ನಾನ ಮಾಡುವುದಕ್ಕೂ ಅವಕಾಶ ನೀಡಲಿಲ್ಲ, ಅಲ್ಲಿ ನಮ್ಮನ್ನು ಬಹಳ ನಿಷ್ಠುರವಾಗಿ ನಡೆಸಿಕೊಂಡರು ಎಂದು ಅವರು ನಡೆದ ಘಟನೆಯನ್ನು ಪ್ರಸ್ತಾಪಿಸಿದರು.
ಅಲ್ಲದೇ ನಮ್ಮ ಮೇಲೆ 144 ಸೆಕ್ಷನ್ ಜಾರಿ ಮಾಡಿದರು. ಅಲ್ಲಿ ಬಿಜೆಪಿ ಸರ್ಕಾರ ಇರುವುದಕ್ಕೆ ತಲಾ ಇಬ್ಬರು ಸಚಿವರು ಮತ್ತು ಶಾಸಕರನ್ನು ಹೀಗೆನಾ ನಡೆಸುಕೊಳ್ಳೋದು ಇದನ್ನ ನಾವು ಯಾರ ಬಳಿ ಕೇಳಬೇಕು ಎಂದು ಶಾಸಕ ಶಿವಲಿಂಗೇಗೌಡ ಅವರು ತಮ್ಮ ನೋವನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೆ ಹೇಳಿಕೊಂಡರು.
ಇನ್ನು ಹೋಟೆಲ್ ಏನು ಸರ್ಕಾರದ ಸ್ವತ್ತೇ. ನಾವು ಬೀದಿಯಲ್ಲಿ ಕುಳಿತ್ತಿದ್ದಾಗ ಆ ಸ್ಥಳದಲ್ಲಿ ಇದ್ದವರು ಸೌಜನ್ಯಕ್ಕೂ ಮಾತನಾಡಿಸಲಿಲ್ಲ, ಅಲ್ಲಿ 50 ಗೂಂಡಾಗಳನ್ನು ನೇಮಕ ಮಾಡಿದ್ದರು ಜೊತೆಗೆ ಬಿಜೆಪಿ ನಾಯಕರು ಕೂಡ ಹೋಟೆಲ್ನ ಒಳಗಿದ್ದರು. ನಿಮ್ಮ ಕುತಂತ್ರಕ್ಕೆ ಕನ್ನಡಿ ಬೇರೆ ಬೇಕಾ(?) ಎಂದು ಬಿಜೆಪಿ ಶಾಸಕರ ವಿರುದ್ಧ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲಿ ತಮಗೆ ಆದ ಅನುಭವನ್ನು ವಿವರಿಸಿದರು.
Comments are closed.