ಮನೋರಂಜನೆ

ವಯಸ್ಸಾದಂತೆ ಕಾಣುವ ಫೇಸ್‌ಆ್ಯಪ್ ಬಳಕೆ ಎಷ್ಟು ಅಪಾಯಕಾರಿ ಗೊತ್ತಾ..?

Pinterest LinkedIn Tumblr


ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿರುವ ಆ್ಯಪ್ ಅಂದ್ರೆ ಅದು ಫೇಸ್ ಆ್ಯಪ್. ತಾವು ವಯಸ್ಸಾದ ಮೇಲೆ ಹೇಗೆ ಕಾಣ್ತೀವಿ ಅನ್ನೋ ಕುತೂಹಲ ಹಲವರಿಗಿರತ್ತೆ. ಅಂಥವ್ರು ಈ ಆ್ಯಪ್ ಡೌನ್‌ಲೋಡ್ ಮಾಡಿ, ತಮ್ಮ ಫೋಟೋ ಹಾಕಿ, ತಾವು 50 ವರ್ಷದ ನಂತರ ಹೇಗೆ ಕಾಣ್ತೀವಿ ಅಂತಾ ನೋಡ್ತಾರೆ. ಆದ್ರೆ ಈ ಆ್ಯಪ್ ಡೇಂಜರಸ್ ಅನ್ನೋ ಮಾತು ಕೇಳಿಬಂದಿದೆ.

2050ರಲ್ಲಿ ನೀವು ಹೇಗಿರ್ತಿರಾ ಅಂತಾ ತೋರಿಸೋ ಈ ಆ್ಯಪ್‌ನಾ ಬಳಸಿ ತೆಗೆದ ಫೋಟೋವನ್ನ, ಫೇಸ್‌ಬುಕ್ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂನಲ್ಲಿ ಹಾಕ್ತಾರೆ. ಆದ್ರೆ ನೀವು ಕೂಡ ಈ ಆ್ಯಪ್ ಡೌನ್‌ಲೋಡ್ ಮಾಡೋ ಮುನ್ನ ಈ ಸ್ಟೋರಿ ಓದಿ.

ಈ ಫೇಸ್‌ಆ್ಯಪ್ ರಷ್ಯಾ ಮೂಲದ ಕಂಪನಿಯೊಂದರ ಅಪ್ಲಿಕೇಶನ್ ಆಗಿದ್ದು, ಇದನ್ನ 150 ದಶಲಕ್ಷಕ್ಕೂ ಹೆಚ್ಚು ಜನ ಬಳಸುತ್ತಿದ್ದಾರೆ. 100,000 ಮಿಲಿಯನ್ ಜನರು ಗೂಗಲ್ ಪ್ಲೇನಿಂದ ಫೇಸ್‌ಆಪ್ ಡೌನ್‌ಲೋಡ್ ಮಾಡಿದ್ದಾರೆ ಮತ್ತು ಆಪಲ್‌ನ ಐಒಎಸ್ ಸೇರಿದಂತೆ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ 50 ಮಿಲಿಯನ್ ಜನರು ಡೌನ್‌ಲೋಡ್ ಮಾಡಿದ್ದಾರೆ.

ಆದ್ರೆ ಈ ಆ್ಯಪ್ ಉಪಯೋಗಿಸಿದ್ರೆ ನಿಮ್ಮ ವೈಯಕ್ತಿಕ ಮಾಹಿತಿ ಕೂಡ ಸೋರಿಕೆಯಾಗುವ ಸಾಧ್ಯತೆಗಳಿಗೆ. ಆದ್ದರಿಂದ ಈ ಆ್ಯಪ್ ಬಳಸುವ ಮುನ್ನ ಎಚ್ಚರಿಕೆ ವಹಿಸಿ.

Comments are closed.