
ಭಾರತ ಮಾತ್ರವಲ್ಲದೆ, ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ಬಾಲಿವುಡ್ ಕಿಂಗ್ ಖಾನ್ ನಾಯಕನಾಗಿ ಮಿಂಚಿದ್ದಾಗಿದೆ,ಇದೀಗ ಖಳ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ.
ಹೌದು ತಮಿಳಿನ ತಲಪತಿ ವಿಜಯ್ ಅವರ ಬಹು ನಿರೀಕ್ಷಿತ ಸಿನಿಮಾ ‘ಬಿಗಿಲ್’ನಲ್ಲಿ ಅತಿಥಿಪಾತ್ರದಲ್ಲಿ ಕೇವಲ ಹದಿನೈದು ನಿಮಿಷದ ಪಾತ್ರದಲ್ಲಿ ಅವರು ಒಂದು ಹಾಡಿಗೂ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಕಾಲಿವುಡ್ ಅಂಗಳದಿಂದ ಕೇಳಿ ಬರುತ್ತಿದೆ.
ಇನ್ನು ಶಾರುಖ್ ಎಂಟ್ರಿ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಆಗಲಿದ್ದು, ಅದೇ ಚಿತ್ರದ ಟರ್ನಿಂಗ್ ಪಾಯಿಂಟ್ ಆಗಲಿದೆಯಂತೆ. ಜತೆಗೆ ಕಿಂಗ್ ಖಾನ್ ವಿಜಯ್ ಜತೆ ಸಾಹಸ ದೃಶ್ಯವೊಂದರಲ್ಲಿ ಕೈ ಮಿಲಾಯಿಸಲಿದ್ದಾರಂತೆ.
ಈಗೇ ತಮಿಳಿನಲ್ಲಿ ಶಾರುಖ್ ಎಂಟ್ರಿ ಆಗುತ್ತಿರುವುದು ಶಾರುಕ್ ಆಭಿಮಾನಿಗಳಿಗೆ ಮತ್ತು ಕಾಲಿವುಡ್ ಪ್ರೇಕ್ಷಕರಿಗೆ ಖುಷಿ ತಂದಿದೆ .
ಇನ್ನು ಶಾರುಖ್ ಬಾಲಿವುಡ್ನಲ್ಲಿ ನೆಲೆಕಂಡುಕೊಳ್ಳುವಂತೆ ಮಾಡಿದ ಪಾತ್ರವೇ ಖಳನಟನ ಪಾತ್ರ. ಅವರು ‘ಬಾಜಿಗರ್’ ಹಾಗೂ ‘ಡರ್’ ಸಿನಿಮಾಗಳಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಅನ್ನೇ ಆಳುವ ಮಟ್ಟಕ್ಕೆ ಬೆಳೆದದ್ದು ಕಿಂಗ್ ಖಾನ್.
Comments are closed.