
ಕೆಜಿಎಫ್. ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್. ಈ ಚಿತ್ರದ ಪ್ರತಿ ಪಾತ್ರ, ಪ್ರತಿ ಡೈಲಾಗ್, ಪ್ರತಿ ಲೊಕೇಶನ್, ಸೆಟ್ ಎಲ್ಲವೂ ಸಿನಿರಸಿಕರ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಅದರಲ್ಲೂ ನಾರಾಚಿ ಅನ್ನೋ ಚಿನ್ನದ ಗಣಿಯ ಚಿತ್ರಣವನ್ನ ಮರೆಯೋಕ್ಕೆ ಸಾಧ್ಯವಿಲ್ಲ. ಸೂರ್ಯವರ್ಧನ್ ಕಟ್ಟಿಕೊಂಡಿದ್ದ ನಾರಾಚಿ ಅನ್ನೋ ಚಿನ್ನದ ಸಾಮ್ರಾಜ್ಯ, ಅದನ್ನ ವಶಪಡಿಸಿಕೊಳ್ಳೋಕ್ಕೆ ಹವಣಿಸುವ ರಾಕ್ಷಸರು. ಆ ರಾಕ್ಷಸರಿಗೆ ಬುದ್ದಿ ಕಲಿಸೋಕ್ಕೆ ಬರೋ ರಾಕಿ. ಹೀಗೆ ಎಲ್ಲವೂ ಪ್ರೇಕ್ಷಕರಿಗೆ ಅದ್ಭುತ ಅನುಭವ ಕೊಟ್ಟಿತ್ತು.
ನಾರಾಚಿ ಅನ್ನೋ ನರಕದಲ್ಲಿ 20 ಸಾವಿರ ಕಾರ್ಮಿಕರು ಚಿನ್ನ ಅಗೆಯುತ್ತಾ ಗುಲಾಮರಂತೆ ಬದುಕು ನಡೆಸ್ತಿರ್ತಾರೆ. ಸೂರ್ಯವರ್ಧನ್ ಮತ್ತವರ ಅಣ್ಣ ತಮ್ಮಂದಿರು, ಅವರ ಅಕ್ರಮ, ಅನ್ಯಾಯ ಎಲ್ಲವನ್ನ ಕಣ್ಣಿಗೆ ಕಟ್ಟಿದಂತೆ ತೆರೆಮೇಲೆ ತರಲಾಗಿತ್ತು. ಅದೆಲ್ಲದಕ್ಕೂ ನಾರಾಚಿ ಅನ್ನೋ ಗಣಿಯೇ ಕೇಂದ್ರಬಿಂದುವಾಗಿತ್ತು. ಕೆಜಿಎಫ್ ಗಣಿಯಲ್ಲೇ ಆರ್ಟ್ ಡೈರೆಕ್ಟರ್ ಶಿವಕುಮಾರ್ ಅಂಡ್ ಟೀಂ ನಾರಾಚಿ ಸೆಟ್ ಹಾಕಿ, ಮ್ಯಾಜಿಕ್ ಮಾಡಿತ್ತು. ಕೆಜಿಎಫ್ ಚಾಪ್ಟರ್ ಟೂನಲ್ಲೂ ನಾರಾಚಿ ಸೆಟ್ಗೆ ಸಿಕ್ಕಾಪಟ್ಟೆ ಇಂಪಾರ್ಟೆನ್ಸ್ ಇದೆ.
ಈಗಾಗಲೇ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಭರದಿಂದ ಸಾಗ್ತಿದೆ.. ಈ ಬಾರಿ ಕೆಜಿಎಫ್ನಲ್ಲಿ ನಾರಾಚಿ ಸೆಟ್ ಹಾಕಿ ಶೂಟಿಂಗ್ ಮಾಡೋಕ್ಕು ಮುನ್ನ ನಗರದಲ್ಲೇ ಸೆಟ್ ಹಾಗಿ ಶೂಟಿಂಗ್ ನಡೆಸಲಾಗ್ತಿದೆ. ಮಿನರ್ವ ಮಿಲ್ನ ಹಳೇ ಕಟ್ಟಡಗಳನ್ನೇ ಬಳಸಿಕೊಂಡು ಶಿವಕುಮಾರ್ ಅಂಡ್ ಟೀಂ ನಾರಾಚಿ ಮಾದರಿಯ ಸೆಟ್ ನಿರ್ಮಾಣ ಮಾಡಿದೆ.
ಕೆಜಿಎಫ್ ಕಾರ್ಮಿಕರ ಕುರಿತಾದ ಒಂದಷ್ಟು ಸನ್ನಿವೇಶಗಳನ್ನ ಮಿನರ್ವ ಮಿಲ್ನಲ್ಲಿ ಹಾಕಿರೋ ಸೆಟ್‌ನಲ್ಲಿ ಶೂಟ್ ಮಾಡಲಾಗ್ತಿದೆ. ಸದ್ಯ ಸಿಕ್ಕಿರೋ ಫೋಟೋಗಳಲ್ಲಿ ನಾರಾಚಿ ಗಣಿ ಸೆಟ್ನ ನೋಡ್ಬೋದು. ಸದ್ಯ ಕೆಜಿಎಫ್ನಲ್ಲಿ ಹಾಕಿದ್ದ ಗಣಿ ಸೆಟ್ ಅನ್ನ ತೆರವು ಮಾಡಲಾಗಿದೆ. ಇದೀಗ ನಗರದ ಅಂತಹ ಸೆಟ್ ಹಾಕಿ, ದೃಶ್ಯಗಳನ್ನ ಸೆರೆಹಿಡಿಯಲಾಗ್ತಿದೆ. ಗಣಿ ಕಾರ್ಮಿಕರ ವೇಷಭೂಷಣಗಳಲ್ಲಿ ಒಂದಷ್ಟು ಸಹ ಕಲಾವಿದರು ಸೆಟ್‌ನಲ್ಲಿ ಇರೋದನ್ನ ನೋಡ್ಬೋದು.
ಕೆಲ ದಿನಗಳ ಹಿಂದೆ ನೈಸ್ ರೋಡ್ನಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಸ್ಟಾರ್ಟ್ ಆಗಿತ್ತು. ನಂತರ ರಾಮನಗರದಲ್ಲೂ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿದ ಸುದ್ದಿ ಕೇಳಿಬಂದಿತ್ತು. ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ನಡೆದ ಶೂಟಿಂಗ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿದ್ದರು. ಸದ್ಯ ಮಿನರ್ವ ಮಿಲ್ನಲ್ಲಿ KGF ಟೀಮ್ ಬೀಡು ಬಿಟ್ಟಿದೆ. ಯಶ್ ಕೂಡ ಚಿತ್ರೀಕರಣದಲ್ಲಿ ಭಾಗವಹಿಸೋ ಸಾಧ್ಯತೆಯಿದೆ.
ಗರುಡ ಸಾವಿನ ನಂತರ ನಾರಾಚಿಯಲ್ಲಿ ಏನೆಲ್ಲಾ ಆಗುತ್ತೆ ಅನ್ನೋದನ್ನು ಚಾಪ್ಟರ್ ಟೂನಲ್ಲಿ ಹೇಳಲಾಗ್ತಿದೆ. ಸೀಕ್ವೆಲ್ನಲ್ಲಿ ನರಾಚಿ ಗಣಿಯನ್ನ ಮತ್ತಷ್ಟು ಅದ್ಭುತವಾಗಿ ತೋರಿಸೊ ಪ್ರಯತ್ನ ನಡೀತಿದೆ ಅನ್ನಿಸುತ್ತೆ. ಕೆಜಿಎಫ್ ಗಣಿ ಧೂಳಿನಲ್ಲಿ ಶೂಟಿಂಗ್ ಕಷ್ಟ ಅನ್ನೋ ಕಾರಣಕ್ಕೂ ಇಲ್ಲೇ ಸೆಟ್ ನಿರ್ಮಾಣ ಮಾಡಿರಬಹುದು..ಮುಂದಿನ ದಿನಗಳಲ್ಲಿ ಕೆಜಿಎಫ್ನಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತೆ.
Comments are closed.