ಕರ್ನಾಟಕ

ಜೆಡಿಎಸ್ ಯುವಘಟಕದ ನೂತನ ಅಧ್ಯಕ್ಷರಾದ ನಿಖಿಲ್ ಕುಮಾರ್

Pinterest LinkedIn Tumblr


ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿದ್ದಾರೆಂಬ ವಿಷಯ ಹರಿದಾಡಿತ್ತು. ಆದ್ರೆ ನಿಖಿಲ್‌ರನ್ನ ಜೆಡಿಎಸ್ ಯುವಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ನಿಖಿಲ್ ಕುಮಾರ್, ಇವತ್ತು ಬೆಳಗ್ಗೆ 11 ಗಂಟೆಗೆ ಪಕ್ಷದ ವರಿಷ್ಠರ ಕರೆ ಬಂದಿತ್ತು. ನನಗೆ ಇಷ್ಟು ಬೇಗ ಈ ಸ್ಥಾನ ಸಿಗುತ್ತೆ ಅನ್ನೋ ಭರವಸೆ ಇರಲಿಲ್ಲ. ಕಾರ್ಯಕರ್ತನಾಗಿ ದುಡಿದು ಈ ಹುದ್ದೆ ಸ್ವೀಕರಿಸಿದ್ದರೆ ಖುಷಿ ಇರುತ್ತಿತ್ತು ಎಂದಿದ್ದಾರೆ.

ಅಲ್ಲದೇ, ನಿನ್ನೆ ಶರಣಗೌಡ ಕಂದಕೂರಿಗೆ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಶರಣಗೌಡ ನನ್ನ ಹೆಸರನ್ನು ಸೂಚಿಸಿದ್ದಾರೆ. ಪಕ್ಷ ಈ ಮಟ್ಟಕ್ಕೆ ಬರಲು ದೇವಗೌಡರೇ ಕಾರಣ. ನಿತ್ಯ ದೇವೇಗೌಡರ ಜತೆ 4-5 ಗಂಟೆ ಕೂರುತ್ತೇನೆ. ಸಂಘಟನೆ ಬಗ್ಗೆ ಅವರಿಂದ ಕಲಿಯುತ್ತಿದ್ದೇನೆ. ನಾನು ದೇವೇಗೌಡರ ಹಾದಿಯಲ್ಲಿ ಮುಂದುವರಿಯುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Comments are closed.