
ಸ್ಯಾಂಡಲ್ವುಡ್ನ ಕೋಟಿ ಕೋಟಿ ಅಭಿಮಾನಿಗಳ ಆರಾಧ್ಯ ದೈವ ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್. 56ರ ಹರೆಯದಲ್ಲೂ ಕರುನಾಡ ಚಕ್ರವರ್ತಿಯದ್ದು ಯಂಗ್ ಅಂಡ್ ಎನರ್ಜಿಟಿಕ್ ಆ್ಯಕ್ಟಿಂಗ್. ಆದ್ರೆ ಇತ್ತೀಚೆಗೆ ಅದ್ಯಾಕೋ ಚಂದನವನದ ಈ ದೊಡ್ಮನೆ ದೊರೆಗೆ ಬಿಟ್ಟು ಬಿಡದೆ ಆ ನೋವೊಂದು ಕಾಡ್ತಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಶಿವಣ್ಣ ಆ ನೋವಿಗೆ ಮದ್ದು ಹುಡುಕಲು ಲಂಡನ್ಗೆ ಹೊರಟಿದ್ದಾರೆ. ಅಷ್ಟಕ್ಕೂ ಶಿವಣ್ಣನಿಗೆ ಕಾಡ್ತಿರೋ ನೋವಿನ ಕಹಾನಿ ಹೇಳ್ತೀವಿ ಜಸ್ಟ್ ಫಾಲೋ ಮೀ.
ವಯಸ್ಸು 56…. ಉತ್ಸಾಹ 20ರ ಯುವಕನದ್ದು. ನಟಿಸಿದ ಚಿತ್ರಗಳು ನೂರಕ್ಕೂ ಹೆಚ್ಚು… ಆದರೆ ಸೆಟ್ಗೆ ಬರುವಾಗ ಮೊದ್ಲ ಚಿತ್ರ ಮಾಡುವಾಗಿದ್ದ ಶ್ರದ್ಧೆ… ಅದು ಹ್ಯಾಟ್ರಿಕ್ ಹೀರೋ ಸ್ಯಾಂಡಲ್ವುಡ್ ಕಿಂಗ್ ಶಿವರಾಜ್ಕುಮಾರ್.
ಹೊಸ ಹೊಸ ಹೀರೋಗಳ ಎಂಟ್ರಿ ಮತ್ತು ಎಗ್ಸಿಟ್ಗಳ ಮಧ್ಯೆ 30 ವರ್ಷಗಳ ಕಾಲ ಸಿನಿಮಾರಂಗದಲ್ಲಿದ್ದು 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಾಯಕ ನಟನಾಗೋದು ಅಂದ್ರೆ ಅದು ಸಣ್ಣ ವಿಷ್ಯ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾಗಳು ಸೋತ್ರೂ, ಗೆದ್ರೂ ಶಿವಣ್ಣನಿಗಿರುವ ಸೆನ್ಸೇಶನಲ್ ಮಾರ್ಕೇಟ್ ಮಾತ್ರ ಯಾವತ್ತೂ ಕಮ್ಮಿ ಆಗಿಲ್ಲ. ಶಿವಣ್ಣನಿಗಿರೋ ಎನರ್ಜಿ ಕನ್ನಡದ ಮತ್ಯಾವ ಸ್ಟಾರ್ಗೂ ಇಲ್ಲ.
ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ಗೆ ಬಲ ಭುಜ ನೋವು ಕಾಣಿಸಿಕೊಂಡಿರೋದು ಯಾವುದೋ ಫಿಲ್ಮಂ ಶೂಟಿಂಗ್ ಟೈಮ್ನಲ್ಲಿ ಮಾಡಿರೋ ಸ್ಟಂಟ್ನಿಂದ ಅಂತಾ ಎಲ್ಲರೂ ಭಾವಿಸಿದ್ದಾರೆ. ಆದ್ರೆ ಆ ನೋವಿಗೆ ರೀಸನ್ ಬೇರೆಯೇ ಇದೆ. ಶಿವಣ್ಣ ನ್ಯೂಯರ್ಕ್ಗೆ ಫ್ಯಾಮಿಲಿ ಟ್ರಿಪ್ಗೆ ಹೋಗಿದ್ದ ವೇಳೆಯಲ್ಲಿ ಹಿಮದ ಮೇಲೆ ನಡೆಯುವಾ ಶಿವಣ್ಣ ಕಾಲು ಜಾರಿ ಬಿದಿದ್ದಾರೆ. ಅಷ್ಟೇ ನೋಡಿ ಅಲ್ಲಿಂದ ಶಿವಣ್ಣನಿಗೆ ಭುಜದ ನೋವು ಕಾಣಿಸಿಕೊಂಡಿದೆ.
ಶಿವಣ್ಣ ಜುಲೈ 6ಂದು ಚಿಕಿತ್ಸೆಗೆ ಲಂಡನ್ಗೆ ಪ್ರಯಾಣ ಬೆಳಸಲಿದ್ದಾರೆ. ಲಂಡನ್ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹ್ಯಾಟ್ರಿಕ್ ಹಿರೋಗೆ ಜುಲೈ 10 ರಂದು ಬಲಭುಜದ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತೆ. ಬಳಿಕ ಅಲ್ಲಿಯೇ ಶಿವಣ್ಣ 20 ದಿನಗಳ ಕಾಲ ರೆಸ್ಟ್ ಮಾಡಿ ಇಂಡಿಯಾಗೆ ರಿರ್ಟನ್ ಆಗಲಿದ್ದಾರೆ.
ಸದ್ಯ ಶಿವಣ್ಣನ ರುಸ್ತುಂ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇದರ ನಡುವೆ ದ್ರೋಣಾ, ಭಜರಂಗಿ-2, ಆನಂದ್ ಸಿನಿಮಾಗಳಲ್ಲಿ ಹ್ಯಾಟ್ರಿಕ್ ಹಿರೋ ಅಭಿನಯಿಸ್ತಿದ್ದಾರೆ. ಆದ್ರೆ ಚಿಕಿತ್ಸೆ ಬಳಿಕ ಶಿವಣ್ಣ ರೆಸ್ಟ್ ಮಾಡ್ಲೇಬೇಕು. ರೆಸ್ಟ್ ಬಳಿಕ ಈ ಸಿನಿಮಾಗಳಲ್ಲಿ ಆ್ಯಕ್ಷನ್ ಸೀನ್ಸ್ ಮಾಡೋದಿಲ್ಲ ಅನ್ನೋ ಟಾಕ್ ಶುರುವಾಗಿದೆ.
ಆದ್ರೆ ಇವೆಲ್ಲದಕ್ಕೂ ಬ್ರೇಕ್ ಹಾಕಿರೋ ಕರುನಾಡ ಚಕ್ರವರ್ತಿ ಸಿನಿಮಾ ಅಂತಾ ಒಪ್ಪಿಕೊಂಡಾಗ ಎಲ್ಲಾ ಸೀನ್ಸ್ ಮಾಡೋದಾಗಿ ಹೇಳಿದ್ದಾರೆ. ಎನೀ ವೇ ಕೋಟಿ ಕೋಟಿ ಅಭಿಮಾನಿಗಳ ಆರಾಧ್ಯ ದೈವ ಹ್ಯಾಟ್ರಿಕ್ ಹಿರೋ ಅದಷ್ಟು ಬೇಗ ಹುಷಾರಾಗಿ ಬರಲಿ ಅನ್ನೋದು ಅವರ ಅಭಿಮಾನಿಗಳ ಆಶಯ.
Comments are closed.