ಕರ್ನಾಟಕ

ಎರಡೆರಡು ಲವ್ ಮಾಡಿ ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ!

Pinterest LinkedIn Tumblr

ಕಾಲೇಜು ಲೈಫ್ ಅಂದ್ಮೇಲೆ ಯುವಕ ಯುವತಿಯರು ಸುತ್ತಾಡೋದೇನು ಹೊಸದಲ್ಲ ಕಣ್ರಿ, ಆದ್ರೆ ಇಲ್ಲೊಬ್ಳು ಯುವತಿ ಯುವಕನ ಜೊತೆ ಸುತ್ತಾಡಿ ಬಳಿಕ ಮತ್ತೊಂದು ಮದುವೆಯಾಗಿ ತಮ್ಮ ಜೀವನವನ್ನೇ ಬರ್ಬಾದ್ ಮಾಡಿಕೊಂಡಿದ್ದಾರೆ. ಹೊಸ ಬದುಕು ಕಟ್ಟಿಕೊಳ್ತೇನೆ ಎಂದು ಸಂಸಾರ ಆರಂಭಿಸಿದ್ದ ಯುವತಿ ನೇಣಿಗೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡಿದ್ದಾಳೆ.

 

ಎಲ್ಲರಂತೆ ತಾನೂ ಕೂಡ ಪದವಿ ಓದಿ ಒಂದೊಳ್ಳೆ ಲೈಫ್ ನಡೆಸ್ತೇನೆ ಅಂತಾ ಇದ್ದ ದಿವ್ಯಜ್ಯೋತಿ ಎಂಬ ಯುವತಿ ನೇಣಿಗೆ ಕೊರಳೊಡ್ಡಿ ಬದುಕು ಕಳೆದುಕೊಂಡಿದ್ದಾಳೆ. ಅಂದ ಹಾಗೆ ಈಕೆ ಆತ್ಮಹತ್ಯೆ ದಾರಿ ಹಿಡಿದಿದ್ದಾದ್ರೂ ಯಾಕೆ ಗೊತ್ತಾ..? ಅದು ಒಂದಲ್ಲಾ ಎರಡೆರಡು ಲವ್ ಮಾಡಿದ್ದೇ ಆಕೆ ಜೀವನ ಅಂತ್ಯವಾಗೋದಕ್ಕೆ ಕಾರಣವಾಗಿ ಹೋಗಿದೆ.

 

ಮಡಿಕೇರಿಯ ಡೈರಿ ಫಾರ್ಮನ ನಿವಾಸಿ ಹರೀಶ್ ದಂಪತಿಯ ಒಬ್ಬಳೇ ಮುದ್ದಿನ ಮಗಳು ದಿವ್ಯಜ್ಯೋತಿ. ಕಳೆದ ಎರಡು ವರ್ಷಗಳ ಹಿಂದೆಯೇ ಪವನ್ ಎಂಬಾತನೊಂದಿಗೆ ಲವ್ ಬೆಳೆದಿತ್ತಂತೆ. ಅಷ್ಟೇ ಅಲ್ಲಾ ತಮ್ಮ ಪ್ರಿಯತಮನ ಜೊತೆಗೆ ಬೆಂಗಳೂರು ಸೇರಿದ್ಲಂತೆ. ಬಳಿಕ ಮನೆಯವರ ಒತ್ತಾಯಕ್ಕೆ ವಾಪಾಸ್ ಮಡಿಕೇರಿಗೆ ಬಂದಿದ್ರಂತೆ.

 

ಆದ್ರೆ ಬೆಂಗಳೂರಿನಿಂದ ವಾಪಾಸ್ ಬಂದ ಪವನ್ ಮತ್ತು ದಿವ್ಯಜ್ಯೋತಿಯ ನಡುವಿನ ಲವ್ ಬ್ರೇಕಪ್ ಆಗಿತ್ತಂತೆ. ಇದೇ ವೇಳೆಗೆ ಈ ದಿವ್ಯ ಜ್ಯೋತಿ ಬಾಳಿನಲ್ಲಿ ಎಂಟ್ರಿ ಕೊಟ್ಟಿದ್ದು ಬ್ರಿಜೇಶ್. ಬ್ರಿಜೇಶ್ ಜೊತೆ ಗುಟ್ಟಾಗಿ ಮದುವೆಯಾಗಿದ್ದ ದಿವ್ಯಜ್ಯೋತಿಗೆ ಹಳೆ ಲವ್ವರ್ ಪವನ್ ಕಾಟ ಹೆಚ್ಚಾಗಿ ಈ ರೀತಿ ಸಾವನ್ನಪ್ಪಿದ್ದಾಳೆ.

 

ಮದುವೆಯಾದ್ರೆ ಹಳೆ ಪ್ರೇಮಿ ಪವನ್ ದೂರ ಆಗ್ತಾನೆ ಅಂತಾ ಅಂದುಕೊಂಡಿದ್ದ ದಿವ್ಯಜ್ಯೋತಿಗೆ ಆತನ ಟಾರ್ಚರ್ ಹೆಚ್ಚಾಗಿತ್ತು. ಪ್ರೇಯಸಿ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಆಕ್ರೋಶ ಹೊರಹಾಕಿದ್ದ ಪವನ್ ನಿಮ್ಮನ್ನ ನೆಮ್ಮದಿಯಾಗಿ ಬದುಕೋಕೆ ಬಿಡೋದಿಲ್ಲಾ ಅಂತಾ ಧಮ್ಕಿ ಹಾಕಿ, ಪ್ರತಿನಿತ್ಯ ಕರೆ , ಮೆಸೇಜ್ ಮಾಡಿ ಟಾರ್ಚರ್ ಮಾಡ್ತಿದ್ದನಂತೆ ಆ ಆಸಾಮಿ ಪವನ್. ಇದ್ರಿಂದ ನೆಮ್ಮದಿ ಕಳೆದುಕೊಂಡ ದಿವ್ಯಜ್ಯೋತಿ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ.

 

ಒಟ್ಟಿನಲ್ಲಿ, ಓದಬೇಕಾದ ವಯಸ್ಸಿನಲ್ಲಿ ಸರಿಯಾಗಿ ಓದದೇ, ಈ ಲವ್ ಅಂತಾ ತಲೆಕೆಡಿಸಿಕೊಂಡು ತಾನೂ ಬದುಕದೇ, ಪೋಷಕರನ್ನು ನೆಮ್ಮದಿಯಾಗಿರಿಸದೆ ಈಕೆ ಸಾವಿನ ದಾರಿ ಹಿಡಿದಿದ್ದಾಳೆ. ಆದ್ರೆ ಮಗಳು ದೊಡ್ಡವಳಾಗಿ ಒಳ್ಳೆ ಬದುಕು ಕಟ್ಟಿಕೊಳ್ತಾಳೆ ಅನ್ನೊ ಕನಸು ಕಂಡಿದ್ದ ಈ ಪೋಷಕರ ಬಾಳಲ್ಲಿ ಮಾತ್ರ ಶೂನ್ಯ ಆವರಿಸಿದೆ.

 

Comments are closed.