ಮನೋರಂಜನೆ

ಬಾಲಿವುಡ್​ ನಟಿ ಸನ್ನಿ ಲಿಯೋನ್​​ ಹೊಸ ಸಾಹಸ!

Pinterest LinkedIn Tumblr


ಸನ್ನಿ ಲಿಯೋನ್​ ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಹಾಟ್ ಬೆಡಗಿ. ಮಾಜಿ ನೀಲಿ ತಾರೆಯಾಗಿಯೂ ಸಮಾಜದ ಹಿತಕ್ಕಾಗಿ ದುಡಿಯೋದರಲ್ಲಿ ಹಿಂದೇ ಬೀಳದ ಸನ್ನಿ ಲಿಯೋನ್​, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಾಲೆಯೊಂದನ್ನ ನಿರ್ಮಿಸುತ್ತಿದ್ದಾರೆ.

ಬಾಲಿವುಡ್ ಬೆಡಗಿ ಸನ್ನಿಯವರ ಈ ಸಾಮಾಜಿಕ ಕಾರ್ಯಕ್ಕೆ ಅವರ ಪತಿ ಡೇನಿಯಲ್ ವೆಬರ್ ಸಾಥ್ ನೀಡಿದ್ದಾರೆ . ಈ ಜೋಡಿಯ ಬಹಳ ದಿನದ ಕನಸು ಒಂದು ಶಾಲೆಯನ್ನ ನಿರ್ಮಿಸುವುದಾಗಿತ್ತಂತೆ. ಇದೀಗ ಆ ಕನಸು ನನಸಾಗುತ್ತಿದೆ. ಅಲ್ಲದೆ ಈ ಸ್ಕೂಲ್ ಕೇವಲ ಆರ್ಟ್ ಸ್ಕೂಲ್ ಅಲ್ಲದೆ ಪ್ಲೇ ಸ್ಕೂಲ್ ಆಗಿಯೂ ಇರುತ್ತದೆ. ಈ ಶಾಲೆಯಲ್ಲಿ ಮಕ್ಕಳು ಆರ್ಟ್ ಹಾಗೂ ಫ್ಯೂಶನ್ ಕಲಿಯಬಹುದಾಗಿದೆ.

ನಟನೆಯಲ್ಲಿ ಸದಾ ಬ್ಯುಸಿ ಇದ್ದರು ಸನ್ನಿ ತಮ್ಮನ್ನು ಒಂದಲ್ಲ ಒಂದು ಸಾಮಾಜಿಕ ಕಾರ್ಯಗಾಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಇನ್ನು ಮುಂಬೈಯಲ್ಲಿ ಈ ಶಾಲೆ ಕಾರ್ಯಾರಂಭ ಮಾಡಲಿದ್ದು, ಈ ಶಾಲೆಯ ಫೀಚರ್ಸ್, ಇಂಟೀರಿಯರ್ಸ್ ಕೆಲಸಗಳಲ್ಲಿ ಸ್ವತಃ ಸನ್ನಿ ಲಿಯೋನ್​ ತೊಡಗಿಕೊಂಡಿದ್ದಾರಂತೆ.

ನಟಿ ಸನ್ನಿ ಲಿಯೋನ್ ಗೆ ಮಕ್ಕಳೆಂದರೆ ತುಂಬಾನೆ ಇಷ್ಟ. ಈಗಾಗಲೇ ಮೂರು ಮಕ್ಕಳನ್ನು ದತ್ತು ಪಡೆದಿರುವ ನಟಿ ಸನ್ನಿ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಆರಂಭಿಕ ಕೆಲವು ವರ್ಷಗಳು ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಂಡಿದ್ದಾರೆ.

ಶಾಲಾ ನಿರ್ಮಾಣದ ಬಗ್ಗೆ ವರದಿಗಾರರೊಂದಿಗೆ ಮಾತನಾಡಿರುವ ಸನ್ನಿ ನಮ್ಮ ಉದ್ದೇಶ ಮಕ್ಕಳ ಬೌದ್ಧಿಕ, ಶಾರೀರಿಕ ವಿಕಾಸಕ್ಕೆ ವೇದಿಕೆ ಕಲ್ಪಿಸುವುದಾಗಿದೆ. ಮಕ್ಕಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು, ವಿಶ್ವದಲ್ಲಿನ ಹೊಸ ಹೊಸ ವಿಷಯಗಳನ್ನು ಅವರು ಕಲಿತುಕೊಳ್ಳಬೇಕು. ಹಾಗೆಯೇ ಮಜಾ ಮಾಡಬೇಕು ಎಂಬುದು ನಮ್ಮ ಆಸೆ ಎಂದು ತಿಳಿಸಿದ್ದಾರೆ

Comments are closed.