
ಬಾಲಿವುಡ್ ಸ್ಟಾರ್ ನಟ ಅಮಿತಾಬಚ್ಚನ್ ಸಿನಿಮಾಗಳ ಮೂಲಕ ಮಾತ್ರವಲ್ಲ ಕೆಲವೊಮ್ಮೆ ಮಾನವೀಯತೆ ಮೆರೆಯುವ ಮೂಲಕವೂ ಹೃದಯ ಗೆಲ್ಲುತ್ತಾರೆ.
ಅಮಿತಾಬ್ ಮನೆಯಲ್ಲಿ ದಶಕಗಳ ಕಾಲ ಕೆಲಸ ಮಾಡುತ್ತಿದ್ದ ಕೆಲಸಗಾರ ಅನಾರೋಗ್ಯದಿಂದ ವಿಧಿವಶರಾದರು. ಅವರ ಪಾರ್ಥೀವ ಶರೀರವನ್ನು ಸ್ವತಃ ಅಮಿತಾಬ್ ಹಾಗೂ ಅವರ ಪುತ್ರ ಅಭಿಷೇಕ್ ಹೊತ್ತೊಯ್ದಿದ್ದಾರೆ. ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಈ ಫೋಟೋವನ್ನು ಅಮಿತಾಬ್ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.
ಅಮಿತಾಬ್ ಸದ್ಯಕ್ಕೆ ಗುಲಾಬೋ ಸಿತಾಬೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಫೋಟೋವೊಂದು ರಿವೀಲ್ ಆಗಿದ್ದು ವೈರಲ್ ಆಗಿದೆ.
Comments are closed.