
ಕನ್ನಡದ ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಇದೀಗಾ ಬಾಕ್ಸರ್ ಸಂಜನಾ ಆಗಿದ್ದಾರೆ. ಮೂವಿಸ್ಗೆ ವಿದಾಯ ಹೇಳಿ ಬಾಕ್ಸಿಂಗ್ ಗೆ ಎಂಟ್ರಿ ಕೊಟ್ಟಿದ್ದಾರಾ ಅಂತ ಶಾಕ್ ಆಗ್ಬೇಡಿ ಯಾಕಂದ್ರೆ ಹಾಟ್ ಬೆಡಗಿ ಸಂಜನಾ ಬಾಕ್ಸಿಂಗ್ ಆಟ ಆಡ್ತಿರೋದು ಬೇರೆಲ್ಲೂ ಅಲ್ಲ ತಮಿಳಿನಲ್ಲಿ ಮೂಡಿ ಬರುತ್ತಿರುವ ಬಾಕ್ಸರ್ ಚಿತ್ರದಲ್ಲಿ.
ಟಾಲಿವುಡ್‌ನಲ್ಲಿ ಹೆಸರು ಮಾಡುತ್ತಿರುವ ಬೋಲ್ಡ್ ಬ್ಯೂಟಿ ಸಂಜನಾ ಈಗ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ ಕಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸಂಜನಾ ಮೊದಲ ಸಿನಿಮಾದಲ್ಲೆ ಪವರ್ ಫುಲ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ .
ವಿವೇಕ್ ಕಣ್ಣನ್ ನಿರ್ದೇಶನದ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಬಾಕ್ಸರ್ ಸಂಜನಾಳ ನಾಯಕನಾಗಿ ಖ್ಯಾತ ಖಳ ನಟ ಅರುಣ್ ವಿಜಯ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ‘ಚಕ್ರವ್ಯೂಹ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದ ಅರುಣ್ ವಿಜಯ್ ಈಗ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಪಾತ್ರಕ್ಕಾಗಿ ಅರುಣ್ ದೇಹವನ್ನು ಮತ್ತಷ್ಟು ಹುರಿಗೊಳಿಸಿದ್ದಾರೆ.
ಬಾರಿ ದೊಡ್ಡ ಮೊತ್ತದಲ್ಲಿ ‘ಬಾಕ್ಸರ್’ ಚಿತ್ರ ಮೂಡಿ ಬರುತ್ತಿದ್ದು. ಸಂಜನಾ ಅಭಿನಯದ ಎಲ್ಲಾ ಚಿತ್ರಗಳಿಗಿಂತ ಬಾಕ್ಸರ್ ಪಾತ್ರ ತುಂಬ ವಿಭಿನ್ನವಾಗಿರಲಿದೆಯಂತೆ. ಅದರಲ್ಲು ಫಸ್ಟ್ ಟೈಮ್ ಕಾಲಿವುಡ್ನಲ್ಲಿ ಆ್ಯಕ್ಟ್ ಮಾಡುತ್ತಿರುವುದು ಸಂಜನಾಳಿಗೆ ಸಖತ್ ಎಕ್ಸಾಯಿಟ್ ತಂದಿದೆಯಂತೆ. ಅಲ್ಲದೆ ಚಿತ್ರಕ್ಕಾಗಿ ಈಗಾಗಲೆ ಬಾಕ್ಸಿಂಗ್ ತರಬೇತಿ ಕೂಡ ಶುರು ಮಾಡಿದ್ದಾರಂತೆ.
ಈ ಚಿತ್ರದ ಕುರಿತು ಮಾತನಾಡಿರುವ ಸಂಜನಾ ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರ ಇದು . ‘ತುಂಬಾ ಖುಷಿಯಾಗ್ತಿದೆ. ತಮಿಳಿನಲ್ಲಿ ನನ್ನ ಮೊದಲ ಚಿತ್ರದಲ್ಲೇ ಇಂಥದ್ದೊಂದು ಪಾತ್ರ ಸಿಕ್ಕಿದ್ದು ಅದೃಷ್ಟ. ದೊಡ್ಡ ಪ್ರೊಡಕ್ಷನ್ ಹೌಸ್‌ನಿಂದ ಚಿತ್ರ ತೆರೆಗೆ ಬರಲಿದೆ. ಮಹಿಳಾ ಪ್ರಧಾನ ಚಿತ್ರ ಇದು. ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ನಾನು ಈ ರೀತಿ ಕಾಣಿಸಿಕೊಂಡಿಲ್ಲ. ಪ್ರೇಕ್ಷಕರಿಗೆ ಸರ್‌ಪ್ರೈಸ್ ನೀಡಲಿದ್ದೇವೆ’ ಎಂದಿದ್ದಾರೆ.
ಸಂಜನಾ ಈಗಾಗಲೆ ತಮಿಳಿನ ವೆಬ್ ಸೀರಿಸ್ ‘ಐವಾರ್’ ಎನ್ನುವ ವೆಬ್ ಸರಣಿ ಮೂಲಕ ತಮಿಳಿಗೆ ಕಾಲಿಟ್ಟಿದ್ದಾ ಸಂಜನಾ ಇದೀಗಾ ಬಾಕ್ಸರ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ತಮಿಳು ಸಿನಿಮಾದಲ್ಲಿ ಮಿಂಚಲು ಮುಂದಾಗಿದ್ದಾರೆ.
Comments are closed.