ಮನೋರಂಜನೆ

ಎಸ್ ಎಸ್ ಎಲ್ ಸಿಯಲ್ಲೇ ಲವ್ವಿ ಡವ್ವಿ ಶುರುವಿಟ್ಟುಕೊಂಡ ನಟಿ!

Pinterest LinkedIn Tumblr


ಬಿಟೌನ್ ಚೆಲುವೆ ಕೈರಾ ಅಡ್ವಾನಿ ಅಭಿನಯದ ಹೊಸ ಸಿನಿಮಾ ಕಬೀರ್ ಸಿಂಗ್ ಚಿತ್ರದ ಪ್ರಮೋಷನ್ ವೇಳೆ ಹೊಸದೊಂದು ಶಾಕಿಂಗ್ ನ್ಯೂಸ್ ರಿವೀಲ್ ಮಾಡಿದ್ದಾರೆ. ಅದು ಏನಪ್ಪಾ ಎಂದು ಯೋಚಿಸುತ್ತಿದ್ದಿರಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ..

ಕೈರಾ ಅಡ್ವಾಣಿ ಚಿಕ್ಕ ವಯಸ್ಸಿನಲ್ಲಿಯೇ ಲವ್ವಿ- ಡವ್ವಿಯಲ್ಲಿ ಬಿದ್ದಿದರಂತೆ, ತಾವು 10 ನೇ ಕ್ಲಾಸ್ ಓದುತ್ತಿರುವಾಗಲೇ ಒಬ್ಬ ಹುಡುಗನ ಜೊತೆ ಪ್ರೀತಿಯಲ್ಲಿ ಮುಳುಗಿದ್ದೆ ಎಂದು ಎಲ್ಲರ ಮುಂದೆ ತಮ್ಮ ‘X’ ಬಾಯ್ ಫ್ರೆಂಡ್ ಸ್ಟೋರಿಯನ್ನು ಬಹಿರಂಗ ಪಡೆಸಿದ್ದಾರೆ. ಆದರೆ ಯಾರು ನಿಮ್ಮ ಆ ಮೊದಲ ಬಾಯ್ ಫ್ರೆಂಡ್ ಎಂದು ಕೇಳಿದ ಪ್ರಶ್ನೆಗೆ ಮಾತ್ರ ಕೈರಾ ಉತ್ತರಿಸಲಿಲ್ಲ. ಆದರೆ ಅವರ ಫ್ಲಾಶ್ ಬ್ಯಾಕ್ ಲವ್ ಸ್ಟೋರಿಯನ್ನು ಮಾತ್ರ ಶೇರ್ ಮಾಡಿಕೊಂಡಿದ್ದಾರೆ.

ಅಷ್ಟಲ್ಲದೇ ಲವ್ ಮಾಡಿದ ಕೆಲವು ದಿನಗಳಲ್ಲಿಯೇ ಬ್ರೇಕ್ ಅಪ್ ಕೂಡ ಮಾಡಿಕೊಂಡಿದ್ದಾರಂತೆ ಅದೆಕೆಂದರೆ ತಾವು ಆಗ ತಾನೇ 10 ನೇ ತರಗತಿ ಓದುತ್ತಿದ್ದರಿಂದ ಓದಿನ ಸಮಯದಲ್ಲಿ ಲವ್ ಮಾಡುವುದು ತಪ್ಪು ಎಂದು ಭಾವಿಸಿ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಯೋಚಿಸಿ ಅವರ ಪ್ರಿಯಕರನಿಗೆ ಕೈ ಕೊಟ್ಟು ಈದಿನ ಕಡೆಗೆ ಗಮನ ಹರಿಸಿದರಂತೆ, ಹೀಗೆಂದು ಸ್ವತಃ ಕೈರಾ ಅಡ್ವಾಣಿಯವರೇ ಯಾವುದೆ ಅಂಜಿಕೆ ಇಲ್ಲದೆ ಎಲ್ಲರ ಸಮ್ಮುಖದಲ್ಲಿ ಹೇಳಿಕೊಂಡಿದ್ದಾರೆ.

ಸದ್ಯ ಟಾಲಿವುಡ್ ನ ಅರ್ಜುನ್ ರೆಡ್ಡಿ ಚಿತ್ರದ ರೀಮೇಕ್ ಕಬೀರ್ ಸಿಂಗ್ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಕೈರಾ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಗೆ ಜೋಡಿಯಾಗಿದ್ದು, ಚಿತ್ರದ ಸಾಕಷ್ಟು ಹಾಟ್ ದೃಶ್ಯಗಳಿದ್ದು, ಕೈರಾ ಹಾಗೂ ಶಾಹಿದ್ ಇಬ್ಬರೂ ಸಹ ಸಖತ್ ಬೋಲ್ಡ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರ ಇದೇ ತಿಂಗಳ 21ಕ್ಕೆ ತೆರೆಗೆ ಬರುತ್ತಿದ್ದು, ಟಾಲಿವುಡ್ ಸಿನಿ ರಸಿಕರ ಮನಗೆದ್ದಿದ್ದ ಈ ಸಿನಿಮಾ ಬಾಲಿವುಡ್ ನಲ್ಲಿ ಹೇಗೆ ಸೌಂಡ್ ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ.

Comments are closed.