ಕರ್ನಾಟಕ

ಇವರು ಕಳ್ಳರು! ಆದರೆ ಕಳ್ಳರ ತರ ಅನ್ನಿಸೋದೇ ಇಲ್ಲ…!

Pinterest LinkedIn Tumblr


ತುಮಕೂರು : ಇನ್​ ಶರ್ಟ್​ ಮಾಡ್ಕೊಂಡು, ಜಾಕೆಟ್ ಹಾಕೊಂಡು ಆಫೀಸರ್ಸ್ ರೀತಿ ಬಂದು ಕಳ್ಳತನ ಮಾಡಿದ ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಹೈಫೈ ಕಳ್ಳರು

ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಅಂಗಡಿಗಳ ಸರಣಿ ಕಳ್ಳತನ ಮಾಡಿದ ಇವರು, ಮಧ್ಯ ರಾತ್ರಿ ಅಂಗಡಿಗಳ ಶೆಟರ್ಸ್​ ಮುರಿದು ದೋಚುತ್ತಾರೆ. ಇವರನ್ನು ಕಂಡರೆ ಕಳ್ಳರ ಥರ ಅನ್ನಿಸೋದೇ ಇಲ್ಲ, ಆದರೆ ಒಂದೇ ರಾತ್ರಿಯಲ್ಲಿಆರು ಅಂಗಡಿಗಳ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಕಳೆದ ರಾತ್ರಿ 12.30 ರಿಂದ 3 ಗಂಟೆ ಸಮಯದಲ್ಲಿ ಕಳ್ಳತನ ಮಾಡಿದ್ದು, ಬಾರ್, ದಿನಸಿ ಅಂಗಡಿ, ಕಬ್ಬಿಣದ ಅಂಗಡಿ, ಎಪಿಎಂಸಿಯಲ್ಲಿನ 3 ಅಂಗಡಿಗಳು ಸೇರಿ ಒಟ್ಟು ಆರು ಅಂಗಡಿಗಳಲ್ಲಿ ರೋಲಿಂಗ್ ಷಟರ್ ಮುರಿದು ಒಳನುಗ್ಗಿದ್ದು, ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇವರನ್ನ ಕಂಡರೆ ಕಳ್ಳರ ತರ ಅನ್ನಿಸೋದೇ ಇಲ್ಲ…!

ಕೇವಲ ಕ್ಯಾಶ್ ಕೌಂಟರ್ ಗಳನ್ನು ಮಾತ್ರ ಟಾರ್ಗೆಟ್ ಮಾಡಿ ಹಣ ದೋಚಿರುವ ಕಳ್ಳರು. ಸುಮಾರು 3 ಲಕ್ಷಕ್ಕೂ ಹೆಚ್ಚು ನಗದು ದೋಚಿದ್ದಾರೆ. ಹುಳಿಯಾರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Comments are closed.