ಮನೋರಂಜನೆ

ಮೈಸೂರಿನಲ್ಲಿ ಪುನೀತ್ ಮತ್ತು ಯಶ್​ ಕಮಾಲ್​​!

Pinterest LinkedIn Tumblr


ಸ್ಯಾಂಡಲ್ ವುಡ್ ನಲ್ಲಿ ನಟರ ನಡುವೆ ಸ್ಟಾರ್ ವಾರ್.. ಸ್ಟಾರ್ ವಾರ್ ಎಂದು ಗಾಸಿಪ್ ಹುಟ್ಟುಹಾಕುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ಎದುರಾಗಿದೆ. ಸ್ಯಾಂಡಲವುಡ್​​ ಸ್ಟಾರ್​ಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಥವಾ ಯಾವುದೇ ಅಂತರವಿಲ್ಲ ಎಂಬುದನ್ನು ನಟರು ಪ್ರೂವ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಗ್ ಸ್ಟಾರ್ ದರ್ಶನ್ ರವರು ಜೋಡೆತ್ತಿನ ರೀತಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.ಸದ್ಯ ಪವರ್ ಸ್ಟಾರ್ ಪುನೀತ್​- ರಾಕಿಂಗ್​ ಸ್ಟಾರ್​ ಯಶ್​ ಫ್ರೆಂಡ್​ಶಿಪ್ ಎಲ್ಲರ ಗಮನ ಸೆಳೆಯುತ್ತಿದೆ. ಇಬ್ಬರೂ ಒಂದೇ ಟೇಬಲ್​ನಲ್ಲಿ ಕೂತು ಊಟ ಮಾಡುತ್ತಿರುವ ಫೋಟೊ ವೈರಲ್ ಆಗಿದ್ದು , ಇಬ್ಬರ ಸ್ನೇಹವನ್ನು ಕಂಡು ಅಭಿಮಾನಿಗಳ ಫುಲ್ ಖುಷ್ ಆಗಿದ್ದಾರೆ.

ಹೌದು ನಟ ಪುನೀತ್ ಅಭಿನಯದ ಯುವರತ್ನ ಚಿತ್ರ ಹಾಗೂ ಯಶ್ ನಟನೆಯ ​ ‘ಕೆಜಿಎಫ್​ ಚಾಪ್ಟರ್​-2’ ಎರಡು ಸಿನಿಮಾದ ಶೂಟಿಂಗ್​ ಮೈಸೂರಿನಲ್ಲಿ ನಡೆಯುತ್ತಿದೆ. ಇಬ್ಬರ ಸಿನಿಮಾ ಚಿತ್ರೀಕರಣ ಕೂಡ ಮೈಸೂರಿನಲ್ಲಿಯೇ ನಡೆಯುತ್ತಿದ್ದರಿಂದ ಕಳೆದೆರಡು ದಿನಗಳಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ನೆನ್ನೆ ರಾತ್ರಿ ಇಬ್ಬರೂ ಒಟ್ಟಿಗೆ ಕೂತು ಊಟ ಮಾಡಿದ್ದಾರೆ. ಒಂದೇ ಟಿಫಿನ್​ ಕ್ಯಾರಿಯರ್​​​ನಲ್ಲಿ ತಂದ ಊಟವನ್ನು ಹಂಚಿಕೊಂಡು ಇಬ್ಬರುನ ಸ್ಟಾರ್​ಗಳು ಊಟ ಮಾಡಿದ್ದು, ಈ ಪೋಟೋ ಇದೀಗ ಫುಲ್ ವೈರಲ್​ ಆಗಿದೆ. ಸ್ಟಾರ್​ಗಳ ಈ ಡಿನ್ನರ್​ಗೆ ಹೊಂಬಾಳೆ ಫಿಲ್ಮ್ಸ್​ ಕಾರ್ತಿಕ್​, ಫಿಟ್​ನೆಸ್​ ಟ್ರೈನರ್ ಪಾನಿಪುರಿ ಕಿಟ್ಟಿ ಸಾಕ್ಷಿಯಾಗಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನೂ ಗಮನಿಸುತ್ತಿದ್ದರೆ ಇಂಡಸ್ಟ್ರಿಯಲ್ಲಿ ಎಲ್ಲ ನಟರ ನಡುವೆ ಒಗ್ಗಟ್ಟು ಮೂಡಿದಂತಿದ್ದು, ಕನ್ನಡ ನಟರೂ ಬೇರೆ ಭಾಷೆಯ ನಟರಂತೆ ಪರಸ್ಪರ ಹೊಂದಿಕೊಂಡು ಇಂಡಸ್ಟ್ರಿಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಎಲ್ಲರೂ ಒಂದೇ ಕುಟುಂಬದ . ಅಣ್ಣ- ತಮ್ಮಂದಿರು, ಸ್ನೇಹಿತರಂತೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Comments are closed.