ಮನೋರಂಜನೆ

ಸಲ್ಮಾನ್ ಖಾನ್‌ಗೆ ‘ಅವಕಾಶ ಕೊಡಿ’ ಎಂದು ಹಲವರಲ್ಲಿ ಬೇಡುತ್ತಿದ್ದೆ: ಜಾಕಿ ಶ್ರಾಫ್!

Pinterest LinkedIn Tumblr


ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಗೆಗಿನ ಗುಟ್ಟೊಂದು ರಟ್ಟಾಗಿದೆ. ಅದನ್ನು ಬಹಿರಂಗಗೊಳಿಸಿದ್ದು ಬೇರಾರೂ ಅಲ್ಲ, ಬಾಲಿವುಡ್‌ನ ಇನ್ನೊಬ್ಬರು ಸ್ಟಾರ್ ನಟ ಜಾಕಿ ಶ್ರಾಫ್. ಹೌದು, ಸಲ್ಮಾನ್ ಖಾನ್ ನಾಯಕತ್ವದ ‘ಭಾರತ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗೆ ತಂದೆಯಾಗಿ ನಟಿಸಿದ್ದಾರೆ ಜಾಕಿ ಶ್ರಾಫ್. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜಾಕಿ ಶ್ರಾಫ್ ಅವರು ಭಾರತ್ ಸಿನಿಮಾ ಹಾಗೂ ಸಲ್ಮಾನ್ ಖಾನ್ ಬಗ್ಗೆ ಮಾತನಾಡುತ್ತ ಹೊಸ ವಿಷಯವೊಂದನ್ನು ಬಹಿರಂಗಗೊಳಿಸಿದ್ದಾರೆ.

ಬಾಲಿವುಡ್ ನಟ ಜಾಕಿ ಶ್ರಾಫ್ “ಒಂದು ಕಾಲದಲ್ಲಿ ನಾನು ಸಲ್ಮಾನ್ ಖಾನ್ ಫೋಟೋವನ್ನು ನನ್ನ ಪಾಕೆಟ್‌ನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದೆ. ನಾನು ಭೇಟಿಯಾದ ನಿರ್ಮಾಪಕರು, ನಿರ್ದೇಶಕರ ಬಳಿ ಈ ಹುಡುಗನಿಗೊಂದು ಛಾನ್ಸ್ ಕೊಡಿ ಎಂದು ಕೇಳುತ್ತಿದ್ದೆ. ಅವನು ಇಂದು ಭಾರೀ ದೊಡ್ಡ ಸ್ಟಾರ್‌ ಆಗಿದ್ದಾನೆ. ಆದರೆ ಸಲ್ಮಾನ್ ನನಗಿನ್ನೂ ಚಿಕ್ಕ ಹುಡುಗನೇ” ಎಂದಿದ್ದಾರೆ.

ಕೆಲವು ಜನರಿಗೆ ಮಾತ್ರ ಈ ಸಂಗತಿ ಗೊತ್ತಿತ್ತೇನೋ! ಆದರೆ, ಜಾಕಿ ಶ್ರಾಫ್ ಹೇಳಿದ ಬಳಿಕ ಈ ವಿಷಯವೀಗ ಇಡೀ ಜಗತ್ತಿಗೇ ಗೊತ್ತು. ಇಂದು ದೊಡ್ಡ ದೊಡ್ಡ ಸ್ಟಾರ್ ಆಗಿರುವವರಲ್ಲಿ ಅನೇಕರು ಅಂದು ತುಂಬಾ ಕಷ್ಟಪಟ್ಟು ಬೆಳೆದಿದ್ದಾರೆ. ಹಂತಹಂತವಾಗಿ ತಮ್ಮ ವೃತ್ತಿಯಲ್ಲಿ ಮೇಲಕ್ಕೆ ಬಂದು ಇಂದು ಸ್ಟಾರ್ ಆಗಿ ನಿಂತಿದ್ದಾರೆ. ಸಡನ್ನಾಗಿ ಯಾರೂ ಅಷ್ಟು ಸುಲಭವಾಗಿ ಸ್ಟಾರ್ ಆಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಅದು ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ವಿಷಯದಲ್ಲೂ ಅಷ್ಟೇ ಸತ್ಯ ಎಂದಂತಾಯಿತು. ಈ ಸಂಗತಿ ಇಷ್ಟು ದಿನ ಎಲೆಮರೆಯ ಕಾಯಿಯಂತಿದ್ದು ಇದೀಗ ಹೊರಗಡೆ ಬಂದಿದೆ.

ಅಂದಹಾಗೆ, ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ನಾಯಕತ್ವದ ‘ಭಾರತ್’ ಚಿತ್ರದಲ್ಲಿ ಕತ್ರಿನಾ ಕೈಫ್ ಸಲ್ಮಾನ್ ಎದುರು ನಾಯಕಿಯಾಗಿ ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ದಿಶಾ ಪಠಾಣಿ, ಸುನಿಲ್ ಗ್ರೋವರ್ ಸಹ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ತಂದೆಯ ಪಾತ್ರದಲ್ಲಿ ಜಾಕಿ ಶ್ರಾಫ್ ನಟಿಸಿದ್ದಾರೆ. “ಸಲ್ಮಾನ್ ಖಾನ್‌ಗೆ ತಂದೆಯಾಗಿ ನಟಿಸಿದ್ದು ನನಗೆ ತುಂಬಾ ಖಷಿಯಾಗಿದೆ” ಎಂದಿದ್ದಾರೆ ಜಾಕಿ ಶ್ರಾಫ್.

Comments are closed.