ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ದೊಡ್ಡ ಬ್ರೇಕ್ ಕೊಟ್ಟು ಅವರನ್ನು ಸ್ಟಾರ್ ಪಟ್ಟದಲ್ಲಿ ಕೂರಿಸಿದ ಸಿನಿಮಾ ಅರ್ಜುನ್ ರೆಡ್ಡಿ. ನಿಜಕ್ಕೂ ಈ ಚಿತ್ರದಿಂದ ನಟ ವಿಜಯ್ ದೇವರಕೊಂಡ ತೆಲುಗು ಸಿನಿಮಾ ರಂಗದಲ್ಲಿ ಸೆನ್ಸೇಷನಲ್ ಸ್ಟಾರ್ ಸ್ಥಾನ ಪಡೆದರು.
ಮೂಳೆ ಡಾಕ್ಟರ್ ಒಬ್ಬನ ಪ್ರೇಮ ವೈಫಲ್ಯದ ಕಥೆಯ ಈ ಚಿತ್ರದಲ್ಲಿ ತುಸು ಹೆಚ್ಚೇ ಅನ್ನುವಷ್ಟು ಇಂಟಿಮೇಟ್ ದೃಶ್ಯಗಳಿತ್ತು. ಸಿನಿಮಾದಲ್ಲಿ ವಿಜಯ್ ದೇವರಕೊಂಡ ಶಾಲಿನಿ ಪಾಂಡೆ ತುಟಿಗೆ ಸಾಕಷ್ಟು ಬಾರಿ ತುಟಿ ಒತ್ತಿದ್ರು. ಈ ಕಾರಣಕ್ಕೆ ಅರ್ಜುನ್ ರೆಡ್ಡಿ ಸಿನಿಮಾ ಪಡ್ಡೆ ಹೈಕ್ಳ ಹಾರ್ಟ್ ಕದ್ದಿತ್ತು.
ಆ ನಂತ್ರ ಬಂದ ಗೀತಾ ಗೀತಗೋವಿಂದ ಸಿನಿಮಾದಲ್ಲೂ ಕಿಸ್ಸಿಂಗ್ ದೃಶ್ಯ ಇತ್ತು. ಡಿಯರ್ ಕಾಮ್ರೆಡ್ ಸಿನಿಮಾದಲ್ಲೂ ಲಿಪ್ಲಾಕ್ ಇದೆ. ಇದೆಲ್ಲದರ ಆಚೆಗೆ ವಿಜಯ್ ದೇವರಕೊಂಡ ಈಗ ಟಾಲಿವುಡ್ನ ಕಲೆಕ್ಷನ್ ಕಿಂಗ್. ಹೀಗಾಗಿ ವಿಜಯ್ ಸಿನಿಮಾದಲ್ಲಿ ನಟಿಸ್ಲೇಬೇಕು ಅಂತ ಸಾಕಷ್ಟು ನಟಿಯರು ಕಾದು ಕೂತಿದ್ದಾರೆ.
ಇದೀಗ ನಟಿಯೊಬ್ಬಳು ಬೆಡ್ರೂಮ್ಗೆ ಹೋಗಿ ಬಯಕಿ ತೀರಿಸಿದ್ರೆ ವಿಜಯ್ ದೇವರಕೊಂಡ ಸಿನಿಮಾದಲ್ಲಿ ನಟಿಸೋ ಛಾನ್ಸ್ ಸಿಗುತ್ತೆ ಅಂತ ಹೇಳಿದ್ದಾರೆ. ಇದು ಟಾಲಿವುಡ್ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು ಚಲನಚಿತ್ರ ನಿರ್ದೇಶಕರೊಬ್ಬರು ಬಯಕೆ ತೀರಿಸು ಎಂದು ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಕಾಲಿವುಡ್ ನಟಿ ಶಾಲು ಷಮು ಹೇಳಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್ಟಿಗರ ಜತೆಗೆ ಶಾಲು ಚಾಟ್ ಮಾಡ್ತಿದ್ರು. ಈ ಸಂದರ್ಭದಲ್ಲಿ ಓರ್ವ ನೆಟ್ಟಿಗ ಚಿತ್ರೋದ್ಯಮದಲ್ಲಿನ ಲೈಂಗಿಕ ಕಿರುಕುಳದ ಬಗ್ಗೆ ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರಿಸಿರುವ ಶಾಲು, “ನಾನೂ ಸಹ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಆದರೆ ದೂರು ನೀಡಲ್ಲ. ಈ ರೀತಿಯ ಘಟನೆಗಳನ್ನು ಹೇಗೆ ಎದುರಿಸಬೇಕು ಎಂಬುದು ನನಗೆ ಗೊತ್ತು. ಒಂದು ವೇಳೆ ನಾನು ದೂರು ನೀಡಿದರೂ ಲಾಭ ಏನು? ಆರೋಪಿ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುತ್ತಾನೆ ಎಂದು ನೀವು ಭಾವಿಸಿದ್ದೀರಾ? ಕ್ರೇಜಿ ಜಗತ್ತು ಅಂದಿದ್ದಾರೆ.
ಅಲ್ಲದೆ “ಕೆಲ ದಿನಗಳ ಹಿಂದೆ ಹೆಸರಾಂತ ನಿರ್ದೇಶಕರೊಬ್ಬರು ಬಯಕೆ ತೀರಿಸಿದರೆ ವಿಜಯ್ ದೇವರಕೊಂಡ ತೆಗೆಯುತ್ತಿರುವ ಹೊಸ ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ಹೇಳಿದ್ದಾಗಿ ಶಾಲು ನೇರವಾಗಿ ಉತ್ತರ ನೀಡಿದ್ದಾರೆ. ವಿಜಯ್ ಸೇತುಪತಿ, ಶಿವಕಾರ್ತಿಕೇಯನ್‌ರಂತಹ ಹೀರೋಗಳ ಚಿತ್ರದಲ್ಲಿ ಅಭಿನಯಿಸಿದ್ದಾರೋ ಶಾಲು ಮಾತು ಚರ್ಚೆಗೆ ಕಾರಣವಾಗಿದೆ.
ನಟಿಯ ಈ ಮಾತು ವಿಜಯ್ ದೇವರಕೊಂಡಗೆ ಇರಿಸು ಮುರಿಸು ತಂದಿದೆ. ಟಾಲಿವುಡ್ನಲ್ಲಿ ಒಂದು ಲೆವೆಲ್ಗೆ ಬೆಳೆಯುತ್ತಿರೋ ಸಂದರ್ಭದಲ್ಲಿ ಇಂತ ಆರೋಪ ಕೇಳಿರೋದ್ರಿಂಧ ವಿಜಯ್ ಆತಂಕಕ್ಕೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಟಾಲಿವುಡ್ನಲ್ಲಿ ಕಾಸ್ಟಿಂಗ್ ಕೌಚ್ ಜೋರಾಗಿಯೇ ಇದೆ ಅನ್ನೋ ಸತ್ಯ ಆಗಾಗ ಹೊರಬರ್ತಿದೆ.
Comments are closed.