ಮನೋರಂಜನೆ

ನನಗೂ ಕತ್ರಿನಾ ಕೈಫ್​​ಗೂ ಯಾವುದೇ ಸಂಬಂಧವಿಲ್ಲ: ಮೊಹಮ್ಮದ್​ ಕೈಫ್​​

Pinterest LinkedIn Tumblr


ದೇಶದಲ್ಲಿ ಕೈಫ್​​ ಎಂಬ ಹೆಸರು ಕೇಳಿಬಂದಾಗಲೆಲ್ಲ ನೆನಪಾಗೋದು ಇಬ್ಬರೇ. ಒಬ್ಬರು ಕ್ರಿಕೆಟಿಗ್​ ಮೊಹಮ್ಮದ್​ ಕೈಫ್​​, ಇನ್ನೊಬ್ಬರು ಚೆಂದುಳ್ಳಿ ಚೆಲುವೆ ಕತ್ರಿನಾ ಕೈಫ್​. ಈ ಇಬ್ಬರೂ ಕೈಫ್​ಗಳಿಗೆ ಒಬ್ಬರಿಗೊಬ್ಬರಿಗೆ ಸಂಬಂಧ ಇಲ್ಲದಿದ್ದರೂ ಸಾಕಷ್ಟು ಬಾರಿ ಒಟ್ಟಿಗೆ ಟ್ರೋಲ್​ಗೂ ಒಳಗಾಗಿದ್ದಾರೆ. ಇಂತಿಪ್ಪ ಮೊಹಮ್ಮದ್ ಕೈಫ್​ ಮತ್ತು ಕತ್ರಿನಾ ಕೈಫ್​ ಕೊನೆಗೂ ಪರಸ್ಪರ ಭೇಟಿಯಾಗಿದ್ದು, ಪೋಟೋ ಹಂಚಿಕೊಂಡಿದ್ದಾರೆ.

ಮೊಹಮ್ಮದ್ ಕೈಫ್, ಬಾಲಿವುಡ್ ನಟಿ ಕತ್ರಿನಾ ಕೈಫ್ ಕೊನೆಗೂ ಭೇಟಿಯಾಗಿದ್ದಾರೆ. ಕತ್ರಿನಾ ಜೊತೆಗೆ ಫೋಟೋ ತೆಗೆಸಿಕೊಂಡಿರುವ ಕೈಫ್ ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಂದೇಶವನ್ನು ರವಾನಿಸಿದ್ದಾರೆ.

ಜೊತೆಗೆ ಕತ್ರಿನಾ ಕೈಫ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಮೊಹಮ್ಮದ್ ಕೈಫ್, ನಮ್ಮಿಬ್ಬರ ನಡುವೆ ಯಾವುದೇ ರೀತಿಯಾದ ಸಂಬಂಧವಿಲ್ಲ. ನಾವಿಬ್ಬರು ಕೇವಲ ಫ್ರೆಂಡ್ಸ್ ಎಂದು ಟ್ವೀಟ್ ಮಾಡಿದ್ದಾರೆ. ಕೈಫ್ ಟ್ವೀಟ್‌ಗೆ ಕೆಲವರು ಮೊಹಮ್ಮದ್ ಕತ್ರಿನಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವಕಪ್ ಟೂರ್ನಿ ಹಾಗೂ ಟೀಂ ಇಂಡಿಯಾ ಮಾತುಕತೆಯಲ್ಲಿ ಭಾಗವಹಿಸಿದ್ದ ವೇಳೆ ಮೊಹಮ್ಮದ್ ಕೈಫ್ ಹಾಗೂ ಕತ್ರಿನಾ ಕೈಫ್ ಇಬ್ಬರೂ ಸಹ ಭೇಟಿಯಾಗಿದ್ದಾರೆ. ಸದ್ಯ ಇವರಿಬ್ಬರ ಭೇಟಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Comments are closed.