ಮನೋರಂಜನೆ

ಪೈಲ್ವಾನ್ ಕಿಚ್ಚ ಸುದೀಪ್.. ರಂಜಾನ್.. ಬಿರಿಯಾನಿ…

Pinterest LinkedIn Tumblr


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ ಪೈಲ್ವಾನ್ ಬಾಕ್ಸಿಂಗ್ ಪೋಸ್ಟರ್​ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ದಾರೆ. ಇನ್ನು ಟ್ವೀಟ್​ ಮಾಡಿ ರಂಜಾನ್ ಹಬ್ಬದ ಶುಭಾಶಯ ಕೋರಿರುವ ಕಿಚ್ಚ, ಬಿರಿಯಾನಿ ಬಗ್ಗೆ ಮಾತನಾಡಿದ್ದಾರೆ.

ಕಿಚ್ಚ ಸುದೀಪ್ ಡಯಟ್​ ಬ್ರೇಕ್

ರಂಜಾನ್​ ವಿಶೇಷವಾಗಿ ಮುಸ್ಲಿಂ ಸ್ನೇಹಿತರು ಕಿಚ್ಚನಿಗೆ ಬಿರಿಯಾನಿಯನ್ನು ಕಳುಹಿಸುತ್ತಿದ್ದಾರೆ. ಸದ್ಯ ಜಿಮ್​, ವರ್ಕೌಟ್​ ಅಂತ ಸಿಕ್ಕಾಪಟ್ಟೆ ಡಯೆಟ್​ನಲ್ಲಿರೋ ಕಿಚ್ಚ ಬಿರಿಯಾನಿ ತಿನ್ನೋಕ್ಕೆ ರೆಡಿಯಾಗಿದ್ದಾರೆ. ನನಗಾಗಿ ನೀವೆಲ್ಲ ಬಿರಿಯಾನಿ ಮಾಡೋಕ್ಕೆ ಎಷ್ಟು ಕಷ್ಟಪಟ್ಟಿರುತ್ತೀರಾ ಅಲ್ವಾ..? ಅದೇ ಕಾರಣಕ್ಕೆ ನಾನು ಡಯೆಟ್​ ಬ್ರೇಕ್ ಮಾಡಿ ಬಿರಿಯಾನಿ ಸವಿತ್ತೀನಿ ಅಂತ ಸುದೀಪ್​​ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಬಿರಿಯಾನಿ ಸವಿತ್ತೀನಿ ಅಂತ ಸುದೀಪ್​​ ಟ್ವೀಟ್

ಸದ್ಯ ಸುದೀಪ್​​ ಬಾಲಿವುಡ್​ನ ದಬಾಂಗ್-3, ಕೋಟಿಗೊಬ್ಬ-3, ಬಿಲ್ಲಾ ರಂಗ ಬಾಷಾ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ದಬಾಂಗ್​-3 ಚಿತ್ರದಲ್ಲಿ ಸಲ್ಮಾನ್​ ಖಾನ್ ಎದುರು ಖದರ್ ತೋರ್ಸೋಕ್ಕೆ ಡಯೆಟ್ ಮತ್ತು ವರ್ಕೌಟ್​ನ ಹೆಚ್ಚಿಸಿದ್ದಾಂತೆ.

Comments are closed.