ಮನೋರಂಜನೆ

ಪ್ರಧಾನಿಯಾಗುವ ಆಸೆ ಇದೆ ಎಂದ ಬಾಲಿವುಡ್ ನಟಿ!

Pinterest LinkedIn Tumblr


ರಾಷ್ಟ್ರಪತಿ ಬಿಟ್ರೆ ದೇಶದ ಎರಡನೇ ಹುದ್ಧೆ ಅಂದ್ರೆ ಅದು ಪಿಎಂ ಪೋಸ್ಟ್​. ಆ ಪ್ರಧಾನ ಮಂತ್ರಿ ಪೋಸ್ಟ್​ಗೆ ಕಣ್ಣು ಹಾಕುವವರು ಒಬ್ರ, ಇಬ್ರ. ರಾಷ್ಟ್ರೀಯ ಪಕ್ಷಗಳ ಘಾಟುನುಘಟಿ ನಾಯಕರಿಂದ ಹಿಡಿದು ಪ್ರಾದೇಶಿಕ ಪಕ್ಷಗಳ ನಾಯಕರು ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಸ್ಟಾರ್​ ನಟಿಯೊಬ್ಬರು ನಾನು ಪ್ರಧಾನ ಮಂತ್ರಿಯಾಗ್ತೀನಿ ಅಂತಾ ಹೇಳಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಅಷ್ಟಕ್ಕೂ ಯಾರು ಆ ಸ್ಟಾರ್ ಹಿರೋಯಿನ್​..? ಏನ್ ಕಥೆ ಇದು…? ಹ್ಯಾವೇ ಲುಕ್…

ಬಾಲಿವುಡ್​ನಲ್ಲಿ ಟಾಪ್ ನಟಿ ಎನಿಸಿಕೊಂಡಿರೋ ಪಿಗ್ಗಿ ನಿರ್ಮಾಪಕ ಪಾಲಿಗೆ ಅದೃಷ್ಟ ದೇವತೆ ಇದ್ದಂಗೆ. ಆಕೆಯನ್ನ ಹಾಕಿಕೊಂಡು ಸಿನಿಮಾ ಮಾಡಿದ್ರೆ ಚಿತ್ರ ಗಲ್ಲಾಪೆಟ್ಟಿಯಲ್ಲಿ ಸೌಂಡ್ ಮಾಡುತ್ತೇ ಅನ್ನೋ ಮಾತು ಬಿಟೌನ್​ನಲ್ಲಿ ಇದೆ. ಈ ಗ್ಲಾಮರ್ ಗೊಂಬೆ ಸದ್ಯ ಬ್ರಿಟನ್​ ಯುವಕ ನಿಕ್ ಕೈ ಹಿಡಿದು ಪತಿ ಸೇವೆ ಮಾಡ್ತಾ ಬಾಲಿವುಡ್​ನತ್ತ ತಿರುಗೇ ನೋಡದೇ ಹಾಲಿವುಡ್​ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾಳೆ.

ಬಣ್ಣದ ಬದುಕು, ವೈವಾಹಿಕ ಲೈಫ್ ಜೊತೆ ಆಗಾಗಾ ಸೋಷಿಯಲ್ ಕೆಲಸ ಮಾಡ್ತಾ ಬ್ಯೂಸಿ ಇರೋ ಪಿಗ್ಗಿಗೆ ತನ್ನ ಮಹಾದಾಸೆಯೊಂದನ್ನ ಬಿಚ್ಚಿಟ್ಟಿದ್ದಾಳೆ. ಅಂದು ಅಂತಿಂತ ಆಸೆಯಲ್ಲಾ ಡೈರೆಕ್ಟ್ ಪ್ರಧಾನ ಮಂತ್ರಿ ಹುದ್ದೆ ಮೇಲೆ ಕಣ್ಣು ಇಟ್ಟಿದ್ದಾಳೆ.

ಹೌದು.. ಇತ್ತೀಚೆಗೆ ಯುಎಸ್​ಎ ಮ್ಯಾಗ್​ಜಿನ್​ವೊಂದಕ್ಕೆ ಸಂದರ್ಶನ ನೀಡಿರೋ ಪಿಗ್ಗಿ ದೇಶದಲ್ಲಿ ಬದಲಾವಣೆಯಾಗ್ಬೇಕು. ಒಮ್ಮೆ ಅವಕಾಶ ಸಿಕ್ಕರೆ ನಾನು ಪ್ರಧಾನ ಮಂತ್ರಿಯಾಗುತ್ತೇನೆ. ನನ್ನ ಪತಿ ಅಮೆರಿಕಾದ ಅಧ್ಯಕ್ಷ ಆಗಲು ಬಯಸುತ್ತೇನೆ ಅಂತಾ ಹೇಳಿದ್ದಾರೆ. ಸದ್ಯ ಪ್ರಿಯಾಂಕಾಳ ಈ ಟಾಕ್ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.

ಪ್ರಿಯಾಂಕಾ ಚೋಪ್ರಾ ಏನು ನಾನು ಭಾರತದ ಪ್ರಧಾನಿಯಾಗಲು ಇಷ್ಟಪಡುತ್ತೇನೆ . ನನ್ನ ಪತಿರಾಯ ಅಮೆರಿಕಾ ಅಧ್ಯಕ್ಷ ಆಗಲು ಇಷ್ಟಪಡುತ್ತೇನೆ ಅಂತಾ ಹೇಳಿ ಸುಮ್ಮನೆ ಆಗಿದ್ದಾರೆ. ಪಿಗ್ಗಿ ತಮಾಷೆಗೆ ಈ ರೀತಿ ಹೇಳಿದ್ದೋ ಏನೋ ಗೊತ್ತಿಲ್ಲ. ಆದ್ರೆ ಪಿಗ್ಗಿಯ ಈ ಮಾತಿಗೆ ಪೊಲಿಟಿಕಲ್ ಲೀಡರ್ಸ್​ ಕೊಂಚ ಶಾಕ್ ಆಗಿದ್ದಾರೆ.

ಸಿನಿಮಾ ಅಂತಾ ಬ್ಯೂಸಿ ಇರೋ ಪ್ರಿಯಾಂಕಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಪ್ರಧಾನ ಮಂತ್ರಿ ರೇಸ್​ಗೆ ಇಳಿದ್ರೆ ಅಚ್ಚರಿ ಇಲ್ಲ ಬಿಡಿ. ಒಂದು ವೇಳೆ ಪಿಗ್ಗಿ ಪ್ರಧಾನಿಯಾದ್ರೆ ಜಗತ್ತಿನ ಮೋಸ್ಟ್​ ಗ್ಲಾಮರ್​ ಪಿಎಂ ಅನ್ನಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ.

Comments are closed.