ಮನೋರಂಜನೆ

‘ರಾಬರ್ಟ್’ ಅವತಾರದಲ್ಲಿ ಸರ್ವಧರ್ಮ ಸಾಮರಸ್ಯ ಸಾರಿದ ದರ್ಶನ್

Pinterest LinkedIn Tumblr


ಇದು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ರಾಬರ್ಟ್​ ಚಿತ್ರದ ಥೀಮ್ ಪೋಸ್ಟರ್ ಝಲಕ್. ಚೌಕ ನಂತರ ಡಿ ಬಾಸ್ ದಚ್ಚು ಗೆಳೆಯ ತರುಣ್ ಕಿಶೋರ್ ಸುಧೀರ್, ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್, ಸಿನಿಮಾಟೋಗ್ರಫರ್ ಸುಧಾಕರ್ ಕಾಂಬಿನೇಷನ್​ನಲ್ಲಿ ತಯಾರಾಗ್ತಿರೋ ದಚ್ಚು 53ನೇ ಸಿನಿಮಾದ ಪೋಸ್ಟರ್. ರಾಬರ್ಟ್​ ಅನ್ನೋ ಮಾಸ್ ಟೈಟಲ್​ಗೆ ತಕ್ಕನಾಗಿ ಸಿನಿಮಾ ಕೂಡ ಡಬಲ್ ಸೌಂಡ್ ಮಾಡ್ತಿದೆ. ಸೆಟ್ಟೇರಿದ ದಿನದಿಂದ ನಯಾ ಖಬರ್​ಗಳಿಂದ ಧೂಳೆಬ್ಬಿಸ್ತಿದ್ದ ರಾಬರ್ಟ್​, ಸದ್ಯ ಥೀಮ್ ಪೋಸ್ಟರ್​ ಲುಕ್​ನಿಂದ ಎಕ್ಸ್​ಪೆಕ್ಟೇಷನ್ಸ್ ದುಪ್ಪಟ್ಟು ಮಾಡಿದೆ.

ಮೊದಲೇ ಹೇಳಿದಂತೆ ರಾಬರ್ಟ್​ ಟೀಂ ನಾನ್​ಸ್ಟಾಪ್ ಶೂಟಿಂಗ್ ನಡೆಸ್ತಿದೆ. ಕಂಠೀರವ ಸ್ಟುಡಿಯೋದ ಬೃಹತ್ ಸೆಟ್​ನಲ್ಲಿ ಶುರುವಾದ ಚಿತ್ರೀಕರಣ, ನಂತರ ಚೆನ್ನೈ ಹಾಗೂ ಪಾಂಡಿಚೆರಿ ಮೂಲಕ ಈಗಾಗ್ಲೇ ಶೇಕಡಾ 25ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿದೆ. ಬರೋಬ್ಬರಿ 20ದಿನ ನಾನ್​ಸ್ಟಾಪ್ ಶೂಟಿಂಗ್​ನಿಂದ ಟೀಂ ರಾಬರ್ಟ್​ D53ಗಾಗಿ ಡೇ ಅಂಡ್ ನೈಟ್ ಎಫರ್ಟ್​ ಹಾಕ್ತಿದೆ.

ನವೆಂಬರ್ 6, 2018ರಂದು ರಾಬರ್ಟ್​ ಸಿನಿಮಾದ ಮೊಟ್ಟ ಮೊದಲ ಥೀಮ್ ಪೋಸ್ಟರ್ ರಿವೀಲ್ ಮಾಡಿದರು ಡೈರೆಕ್ಟರ್ ತರುಣ್ ಸುಧೀರ್. ಆಗ ಸಿನಿಮಾಗೆ ರಾಬರ್ಟ್​ ಅಂತ ನಾಮಕಾರಣ ಕೂಡ ಮಾಡಿರಲಿಲ್ಲ. ಡಿ53 ಹೆಸರಲ್ಲೇ ಮಗುವೊಂದರ ಕೈಹಿಡಿದಿದ್ದ ನಾಯಕನಟನ ಲುಕ್ ಜೊತೆ ‘ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು ‘ ಅನ್ನೋ ಮಾಸ್ ಲೈನ್ಸ್​ ಮೂಲಕ ಕಿಕ್ಕೇರಿಸಿತ್ತು ಟೀಂ ರಾಬರ್ಟ್​.

ಅದಾದ ಬಳಿಕ ಡಿಸೆಂಬರ್ 25, 2018ರಂದು ಕ್ರಿಸ್​ಮಸ್ ವಿಶೇಷ ರಾಬರ್ಟ್​ ಟೈಟಲ್ ಫೋಸ್ಟರ್ ಲಾಂಚ್ ಮಾಡಿದ್ರು. ಅದ್ರಲ್ಲಿ ಹನುಮನ ಭುಜವೇರಿ ಬಿಲ್ಲು ಬಾಣ ಹಿಡಿದು ಬರೋ ರಾಮನ ಗ್ರಾಫಿಕ್ ಫೋಟೋ ಹತ್ತು ಹಲವು ಕಥೆಗಳನ್ನು ಹೇಳ್ತಿತ್ತು. ಅಲ್ಲಿಗೆ ಲೋಕ ಕಲ್ಯಾಣಕ್ಕಾಗಿ ರಾಮ ರಾಬರ್ಟ್​ ಅವತಾರದಲ್ಲಿ ಲಂಕೆಯಲ್ಲಿರೋ ರಾವಣನನ್ನು ಸಂಹರಿಸೋ ಹಾಗೆ, ದುಷ್ಟರ ವಿರುದ್ಧ ನಿಲ್ತಾರೆ ಅನ್ನೋದು ಪಕ್ಕಾ ಆಗಿತ್ತು.

ಸದ್ಯ ರಿಲೀಸ್ ಆಗಿರೋ ಫಸ್ಟ್ ಲುಕ್ ಥೀಮ್ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸ್ತಿದೆ. ಇಡೀ ಡಿ ಖಾಂದಾನ್​ ಜೊತೆ ಸೌತ್ ಸಿನಿದುನಿಯಾನೇ ರಾಬರ್ಟ್​ ಲುಕ್​ ನೋಡಿ ದಂಗಾಗಿದೆ. ಇಲ್ಲಿ ದಚ್ಚು ಫೇಸ್ ರಿವೀಲ್ ಆಗಲಿಲ್ಲವಾದರು ರಾಬರ್ಟ್​ ಗತ್ತು ಗೈರತ್ತು ಎಂಥದ್ದು ಅನ್ನೋದರ ಹಿಂಟ್ ಬಿಟ್ಟುಕೊಟ್ಟಿದೆ ಚಿತ್ರತಂಡ.

ದುಬಾರಿ ಬೈಕ್​ವೊಂದನ್ನು ಏರಿ ರಾಬರ್ಟ್​ ಅವತಾರದಲ್ಲಿ ಕೂತಿರೋ ಡಿಬಾಸ್ ಬೈಕ್ ರಿಜಿಸ್ಟ್ರೇಷನ್ ಮಂಗಳೂರಿನದ್ದು. ನಂಬರ್ ಪ್ಲೇಟ್ ಮೇಲೆ ಕೆಎ 19 ಅಂತಿದ್ದು, D 8055 ನಂಬರ್ ಮೂಲಕ ಡಿ ಬಾಸ್ ಅನ್ನೋ ಬ್ರ್ಯಾಂಡ್ ವಿಜೃಂಭಿಸ್ತಿದೆ. ಇನ್ನು ಒಂಟಿಸಲಗದಂತೆ ಬೈಕೇರಿ ಕೂತಿರೋ ರಾಬರ್ಟ್​ ಜಾಕೆಟ್​ನ ಬೆನ್ನಿನಲ್ಲಿ ಐರಾವತ ಇಮೇಜ್ ನಾಯಕನಟನ ರೇಂಜ್ ಹೇಳ್ತಿದೆ. ಇದರ ಜೊತೆಗೆ ರೌಡಿ ಬಳಗ ವಾನರ ಸೈನ್ಯದಂತೆ ದೊಡ್ಡ ಮಟ್ಟದಲ್ಲಿ ರಾಬರ್ಟ್​ ಬೈಕ್ ಮುಂದೆ ಮುಖಾಮುಖಿ ಆಗಿರೋದು ಚಿತ್ರದ ಸ್ಟೋರಿಲೈನ್ ಕುರಿತು ಸಖತ್ ಕ್ಯೂರಿಯಾಸಿಟಿ ಹುಟ್ಟಿಸ್ತಿದೆ.

ಇನ್ನು ಇಂದು ಮುಸ್ಲೀಂ ಬಾಂಧವರ ಪವಿತ್ರವಾದ ರಂಜಾನ್ ಹಬ್ಬ. ಹಿಂದೂ ಧರ್ಮದ ಡಿಬಾಸ್ ದರ್ಶನ್, ಕ್ರೈಸ್ತ ರಾಬರ್ಟ್​ ಹೆಸರಿನ ಚಿತ್ರದ ಫಸ್ಟ್ ಲುಕ್​ನ ರಂಜಾನ್ ಹಬ್ಬಕ್ಕೆ ಲಾಂಚ್ ಮಾಡಿರೋದು ನಿಜಕ್ಕೂ ಮೆಚ್ಚಲೇಬೇಕು. ಇಲ್ಲಿ ಸರ್ವಧರ್ಮ ಸಾಮರಸ್ಯ ಸಾರುವಂತಹ ಎಲ್ಲಾ ಲಕ್ಷಣಗಳು ಎದ್ದು ಕಾಣ್ತಿವೆ. ಹಾಗಾಗಿಯೇ ದಾಸ ದರ್ಶನ್ ಕೋಟ್ಯಾಂತರ ಹೃದಯಗಳ ಬಾಸ್ ಆಗಿ ರಾರಾಜಿಸ್ತಿದ್ದಾರೆ.

ತೂಗುದೀಪ ಶ್ರೀನಿವಾಸ್ ರಾಬರ್ಟ್​ ಅನ್ನೋ ಹೆಸ್ರಲ್ಲಿ ಸಾಕಷ್ಟು ಸಿನಿಮಾಗಳ ಪಾತ್ರಧಾರಿ ಆಗಿದರು. ದರ್ಶನ್​ಗೂ ಕೂಡ ಅಪ್ಪನ ನೆಚ್ಚಿನ ಹೆಸರನ್ನು ಚೌಕ ಚಿತ್ರದ ಪಾತ್ರಕ್ಕೆ ಅವಳಡಿಸಿದ್ರು ಡೈರೆಕ್ಟರ್ ತರುಣ್ ಸುಧೀರ್. ಇದೀಗ ರಾಬರ್ಟ್​ ಹೆಸ್ರಲ್ಲೇ ಸಿನಿಮಾ ಮಾಡ್ತಿರೋದು ಇಡೀ ತೂಗುದೀಪ ಡೈನಷ್ಟಿ ಹಾಗೂ ಕನ್ನಡ ಸಿನಿಪ್ರಿಯರು ಹಾಗೂ ಚಿತ್ರರಂಗಕ್ಕೆ ಸರ್​ಪ್ರೈಸಿಂಗ್ ಆಗಿದೆ.

Comments are closed.