ಮನೋರಂಜನೆ

ಕರೀನಾ ಕಪೂರ್ ಯಾರ ಜೊತೆ ವಿದೇಶಿ ಪ್ರವಾಸ ಮಾಡುತ್ತಿದ್ದಾರಾ ಗೊತ್ತಾ?

Pinterest LinkedIn Tumblr


ಮಕ್ಕಳಿಗೆ ಸಮ್ಮರ್ ಹಾಲಿಡೇಸ್ ಬಂದ ಕೂಡಲೇ ಫ್ಯಾಮಿಲಿಯಲ್ಲಿ ಎಲ್ಲರೂ ಒಂದುಗೂಡಿ ಪ್ರವಾಸ ಹೋಗುತ್ತಾರೆ. ಇತ್ತೀಚೆಗೆ ಸ್ಯಾಂಡಲ್ ವುಡ್ ನಟ ಉಪೇಂದ್ರ ತನ್ನ ಪತ್ನಿ ಪ್ರಿಯಾಂಕ ಹಾಗೂ ತಮ್ಮ ಮಕ್ಕಳ ಜೊತೆ ಇಟಲಿ ಪ್ರವಾಸಕ್ಕೆ ತೆರಳಿದ್ದರು. ಅಲ್ಲದೆ ಕಳೆದ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ತಮ್ಮ ಕುಟುಂಬದ ಜೊತೆ ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದರು ಅಲ್ಲದೆ ನಿರ್ದೇಶಿಕ ಯೋಗರಾಜ್ ಭಟ್ ಇನ್ನೂ ಹಲವು ಸಿನಿ ಮಂದಿಗಳು ವಿದೇಶಿ ಪ್ರವಾಸ ಮಾಡಿದ್ದರು.

ಇದೀಗಾ ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್​ ಪತಿ ಸೈಫ್ ಅಲಿ ಖಾನ್ ಹಾಗೂ ಮಗ ತೈಮೂರ್​ಗೆ ಶಾಲಾ ರಜೆಗಳು ಆರಂಭವಾದ ನಂತರ ಮಗ ಮತ್ತು ಗಂಡ ಸೈಫ್​ ಜತೆ ಇಟಲಿ ಪ್ರವಾಸಕ್ಕೆ ತೆರಳಿದ್ದಾರೆ. ಯಾವಾಗಲೂ ಸಿನಿಮಾ ಶೂಟಿಂಗ್ ಮುಂತಾದವುಗಳಲ್ಲಿಯೇ ಬ್ಯುಸಿಯಾಗಿರುವ ಕರೀನಾ ಮತ್ತು ಸೈಫ್ ಸ್ವಲ್ಪ ಮಟ್ಟಿಗೆ ಎಲ್ಲದರಿಂದಲೂ ಸಹ ರಿಲೀಫ್ ಪಡೆದುಕೊಂಡು ಕೊಂಚ ಫ್ಯಾಮಿಲಿ ಜೊತೆಗೆ ತಮ್ಮ ಸಮಯ ಕಳೆಯಲು ಪ್ರವಾಸ ಕೈಗೊಂಡಿದ್ದಾರೆ. ಸದ್ಯ ರಜೆಯ ಮಜೆಯಲ್ಲಿರುವ ಕರೀನಾರ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Comments are closed.