ಕರ್ನಾಟಕ

ಸಂಪುಟ ವಿಸ್ತರಣೆಗೆ ತಡೆಹಾಕಿದವರು ಯಾರು?

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಎದ್ದಿರುವ ಅಸಮಾಧಾನ ತಣಿಸಲು ಸಚಿವ ಸಂಪುಟ ವಿಸ್ತರಣೆಗೆ ದೋಸ್ತಿ ನಾಯಕರು ಚಿಂತನೆ ನಡೆಸಿದ್ದರು. ಅದಕ್ಕೆ ದಿನಾಂಕವನ್ನು ನಿಗದಿ ಮಾಡಿದ್ದರು. ಆದರೆ, ಸಂಪುಟ ವಿಸ್ತರಣೆ ಸದ್ಯಕ್ಕೆ ಮುಂಡೂಡಿಕೆಯಾಗಿದೆ.

ಸಂಪುಟ ವಿಸ್ತರಣೆಗೆ ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದರು. ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆಯೂ ಚರ್ಚೆ ಕೂಡ ನಡೆಸಿದ್ದರು. ಅಂತೆಯೇ ಜೂನ್ 5 ಅಥವಾ 6 ನೇ ತಾರೀಖಿನೊಳಗೆ ವಿಸ್ತರಣೆ ಪಕ್ಕಾ ಎಂದು ಹೇಳಿದ್ದರು. ಖಾಲಿ ಇರುವ ಮೂರು ಸ್ಥಾನಗಳಲ್ಲಿ ಎರಡನ್ನು ಭರ್ತಿ ಮಾಡೋದು, ಮತ್ತು ಆ ಸ್ಥಾನಗಳನ್ನು ಪಕ್ಷೇತರ ಶಾಸಕರಾದ ಆರ್.ಶಂಕರ್, ನಾಗೇಶ್​ಗೆ ನೀಡಲು ತೀರ್ಮಾನಿಸಲಾಸಗಿತ್ತು. ಈ ಬಗ್ಗೆ ಇಬ್ಬರಿಗೂ ಮಾಹಿತಿ ನೀಡಲಾಗಿತ್ತು. ಕಾಂಗ್ರೆಸ್​ನಿಂದ‌ ಬಿ.ಸಿ‌ ಪಾಟೀಲ್ ಹೆಸರು ಇತ್ತು
ಬಿ.ಸಿ ಪಾಟೀಲ್‌ ಮಂತ್ರಿ ಮಾಡಿದರೆ ಉಳಿದ ಅತೃಪ್ತರು ಮತ್ತೆ ರೆಬೆಲ್ ಆಗ್ತಾರೆ. ರೆಬೆಲ್ ಆಗೋ ಭಯಕ್ಕೆ ಎರಡೇ ಸಾಕೆಂದು ನಿರ್ಧರಿಸಲಾಗಿತ್ತು. ಇದಕ್ಕೆ ಸಿದ್ದರಾಮಯ್ಯ ಒಕೆ ಎಂದಿದ್ದರು. ಸಿಎಂ ಕೂಡ ಮನಸು ಮಾಡಿದ್ದರು. ಆದರೆ ವಿಸ್ತರಣೆ ಮುಂದೂಡಿಕೆಯಾಯಿತು. ಇದಕ್ಕೆ ಬ್ರೇಕ್​ ಹಾಕಿದ್ದು ಹಾಕಿದ್ದು ಬೇರೆ ಯಾರೂ ಅಲ್ಲ

ಜೆಡಿಎಸ್ ನ ಸಚಿವಕಾಂಕ್ಷಿಗಳನ್ನು ಬಿಜೆಪಿ ಸಂಪರ್ಕಿಸುವ ಸಾಧ್ಯತೆ ಇದೆ. ದಿಢೀರ್ ವಿಸ್ತರಣೆ ಮಾಡಿದರೆ ರೆಬೆಲ್​ಗಳನ್ನು ಹುಟ್ಟು ಹಾಕಿದಂತೆ ಆಗುತ್ತದೆ. ಪಕ್ಷೇತರರನ್ನು ಸಚಿವರನ್ನಾಗಿ ಮಾಡುತ್ತಿರಾ, ನಾವೇನು ಮಾಡಿದ್ವಿ ಅನ್ನೋ ಅಪಸ್ವರ ಕೇಳಿಬರುತ್ತದೆ. ಅದಕ್ಕು ಮೊದಲು ಜೆಡಿಎಸ್ ಶಾಸಕರಿಗೆ ಪರಿಸ್ಥಿತಿ ವಿವರಿಸಿ, ಮನವೊಲಿಕೆ ಮಾಡಿ ವಿಸ್ತರಣೆ ಮಾಡಿದರಾಯ್ತು ಎಂದು ಸಿಎಂಗೆ ವಿಸ್ತರಣೆ ಸದ್ಯಕ್ಕೆ ಬೇಡ ಎಂದು ದೊಡ್ಡಗೌಡರು ವಿಸ್ತರಣೆ ತಡೆಹಿಡಿದರು.

ಇದೇ ಕಾರಣಕ್ಕೆ ಜೆಡಿಎಲ್​ಪಿ ಸಭೆಯನ್ನು ಮಾಡಲಾಯಿತು. ನಿನ್ನೆ ದೇವೇಗೌಡರು ಪರಿಸ್ಥಿತಿ ವಿವರಿಸಿದ್ದಾರೆ. ಸಿಎಂ ಕುಮಾರಸ್ವಾಮಿಯೂ ವಿವರಿಸಿದ್ದಾರೆ. ಸರ್ಕಾರ ಇದ್ದರೆ ನಾವು ನೀವೆಲ್ಲ. ಸರ್ಕಾರ ಉಳಿವಿಗೆ ನಾವೆಲ್ಲ ಕೆಲವೊಂದು ತ್ಯಾಗ ಮಾಡಬೇಕಾಗುತ್ತೆ ಎಂದು ಜೆಡಿಎಸ್ ಶಾಸಕರಿಗೆ ಪರೋಕ್ಷವಾಗಿ ಮನವೊಲಿಕೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಪುನಾರಚನೆ ಅಗತ್ಯವಾದರೆ, ಕೆಲ‌ ಸಚಿವರು ತ್ಯಾಗಕ್ಕೆ ಸಿದ್ದರಾಗುವ ಸಂದೇಶವನ್ನು ದಳಪತಿಗಳು ನೀಡಿದ್ದಾರೆ. ಸಂಪುಟ ವಿಸ್ತರಣೆಗಾಗಿ ಗೌಡರ ಸಿಗ್ನಲ್​ಗಾಗಿ ಸಿಎಂ ಕಾಯುತ್ತಿದ್ದಾರೆ.

Comments are closed.