ಮನೋರಂಜನೆ

ದಕ್ಷಿಣ ಭಾರತ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡ್ತಿದೆ ಈ ಬೆಡಗಿಯರ ಸಿನಿಮಾ

Pinterest LinkedIn Tumblr


ತಮಿಳರ ಪಾಲಿನ ಅಮ್ಮ ಜಯಲಲಿತಾ ಮತ್ತು ಚಿನ್ನಮ್ಮ ಶಶಿಕಲಾ ಕುರಿತು ನಿರ್ಮಾಣವಾಗ್ತಿರೋ ಬಯೋಪಿಕ್​ ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ..

ಮೇಲುಕೋಟೆಯಲ್ಲಿ ಹುಟ್ಟಿ, ತಮಿಳು ಚಿತ್ರರಂಗದಲ್ಲಿ ರಾಣಿಯಾಗಿ ಮೆರೆದು, ದೇಶವೇ ತಿರುಗಿ ನೋಡುವಂತ ಮುಖ್ಯಮಂತ್ರಿಯಾಗಿ ತಮಿಳುನಾಡಿಗೆ ಸೇವೆ ಸಲ್ಲಿಸಿದ ಗಟ್ಟಿಗತ್ತಿ ಜಯಲಲಿತಾ.. ಪುರುಚ್ಚಿ ತಲೈವಿಗೆ ನೆರಳಾಗಿ ನಿಂತಿದ್ದ ಶಶಿಕಲಾ ಕೂಡ ಬಹಳ ಪ್ರಭಾವಶಾಲಿ ವ್ಯಕ್ತಿ.. ತಮಿಳುನಾಡಿನ ಜನ ಇವರನ್ನ ಅಮ್ಮ, ಚಿನ್ನಮ್ಮ ಅಂತಲೇ ಕರೀತಾರೆ.. ಎರಡೂವರೆ ವರ್ಷಗಳ ಹಿಂದೆ ಜಯಲಲಿತಾ ಕೊನೆಯುಸಿರೆಳೆದರೆ, ಶಶಿಕಲಾ ಸೆರೆವಾಸ ಅನುಭವಿಸ್ತಿದ್ದಾರೆ..

ಜಯಲಲಿತಾ ನಿಧನದ ನಂತ್ರ ಅವ್ರ ಬಯೋಪಿಕ್ ಸಿನಿಮಾಗಳನ್ನ ಮಾಡೋ ತಯಾರಿ ಶುರುವಾಗಿತ್ತು.. ಸಣ್ಣ ಕುಟುಂಬದಲ್ಲಿ ಹುಟ್ಟಿ ಬೆಳೆದ ಜಯಲಲಿತಾ ಮುಂದೆ ಕಾಲಿವುಡ್​​ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ರು.. ಸಿನಿಮಾದಲ್ಲಿ ಸಿಕ್ಕ ಜನಪ್ರಿಯತೆ ಮತ್ತು ಎಂಜಿಆರ್​ ಸಹಾಯದಿಂದ ರಾಜಕೀಯರಂಗ ಪ್ರವೇಶಿಸಿ, ಹಲವು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ರು.. ಬಯೋಪಿಕ್ ಸಿನಿಮಾಗೆ ಇದಕ್ಕಿಂತ ರೋಚಕ ಕಥೆ ಬೇಕಾ ಹೇಳಿ.. ಇದೇ ಕಾರಣಕ್ಕೆ ಫಿಲ್ಮ್​ ಮೇಕರ್ಸ್​​ ಜಯಲಲಿತಾ ಬಯೋಪಿಕ್ ಹಿಂದೆ ಬಿದ್ದಿರೋದು..

ವಿಜಯ್ ನಿರ್ದೇಶನದಲ್ಲಿ ‘ತಲೈವಿ’ ಹೆಸರಿನಲ್ಲಿ ಜಯಲಲಿತಾ ಕುರಿತು ಸಿನಿಮಾ ನಿರ್ಮಾಣವಾಗ್ತಿದ್ದು, ಕಂಗನಾ ರಾಣಾವತ್​​ ಜಯಲಲಿತಾ ಪಾತ್ರ ಮಾಡ್ತಿದ್ದಾರೆ.. ಎ. ಪ್ರಿಯದರ್ಶಿನಿ ನಿರ್ದೇಶನದ ‘ದಿ ಐರೆನ್ ಲೇಡಿ’ ಹೆಸರಿನ ಮತ್ತೊಂದು ಬಯೋಪಿಕ್​ನಲ್ಲಿ ನಿತ್ಯಾ ಮೆನನ್ ಜಯಲಲಿತಾ ಅವತಾರ ತಾಳಿದ್ದಾರೆ.. ಗೌತಮ್ ವಾಸುದೇವ್​ ಮೆನನ್ ವೆಬ್​ ಸೀರಿಸ್ ಮಾದರಿಯಲ್ಲಿ ಜಯಲಲಿತಾ ಕಥೆ ಹೇಳೋಕ್ಕೆ ಮುಂದಾಗಿದ್ದು, ರಮ್ಯಾಕೃಷ್ಣ ಜಯಲಲಿತಾ ಪಾತ್ರ ಮಾಡ್ತಿದ್ದಾರೆ..ಇದೆಲ್ಲದರ ಮಧ್ಯೆ ಶಶಿಲಲಿತಾ ಅನ್ನೋ ಮತ್ತೊಂದು ಸಿನಿಮಾ ಶುರುವಾಗ್ತಿದೆ.

ಸೌತ್​ ದುನಿಯಾದಲ್ಲಿ ಬಿರುಗಾಳಿ ಎಬ್ಬಿಸುತ್ತಾ ಶಶಿಲಲಿತಾ ಚಿತ್ರ..?
ತೆಲುಗಿನ ಖ್ಯಾತ ನಿರ್ದೇಶಕ ಕೇತಿರೆಡ್ಡಿ ಜಗದೀಶ್ವರ ರೆಡ್ಡಿ, ಜಯಲಲಿತಾ ಮತ್ತು ಶಶಿಕಲಾ ಇಬ್ಬರ ಕಥೆಯನ್ನ ಸೇರಿಸಿ, ಶಶಿಲಲಿತಾ ಅನ್ನೋ ಸಿನಿಮಾ ಅನೌನ್ಸ್ ಮಾಡಿದ್ದಾರೆ.. ಜಯಲಲಿತಾ ಪಾತ್ರಕ್ಕಾಗಿ ಬಾಲಿವುಡ್​ನ ಕೃಷ್ಣಸುಂದರಿಯನ್ನ ಸಂಪರ್ಕಿಸಿದ್ದು, ಕಾಲಿವುಡ್​​ನ ಅಮಲಾ ಪೌಲ್ ಅವರನ್ನ ಚಿನ್ನಮ್ಮ ಪಾತ್ರಕ್ಕೆ ಒಪ್ಪಿಸೋ ಪ್ರಯತ್ನ ಮಾಡ್ತಿದ್ದಾರೆ..

ಈಗಾಗಲೇ ಸ್ಕ್ರಿಪ್ಟನ್ನ ಇಬ್ಬರಿಗೂ ಕೊಟ್ಟಿದ್ದು, ಅವರ ಒಪ್ಪಿಗೆಗಾಗಿ ಕಾಯ್ತಿದೆ ಚಿತ್ರತಂಡ.. ಶಶಿಲಲಿತಾ ಚಿತ್ರಕ್ಕೆ ದಿ ಸ್ಟ್ರೋಮ್​​ ಟ್ಯಾಗ್​ ಲೈನ್​ ಕೊಟ್ಟಿದ್ದು, ಸಿನಿಮಾ ಸೌತ್​ ಸಿನಿದುನಿಯಾದಲ್ಲಿ ಸಂಚಲನ ಸೃಷ್ಟಿಸೋ ಸುಳಿವು ಸಿಕ್ತಿದೆ..

ಜಯಲಲಿತಾ ಪಾತ್ರ ಮಾಡೋದು ಅಷ್ಟು ಸುಲಭ ಅಲ್ಲ.. ಅದೇ ಕಾರಣಕ್ಕೆ ಕಾಜೋಲ್​ ರೀತಿಯ ಪ್ರತಿಭಾನ್ವಿತ ನಟಿಯನ್ನ ಆ ಪಾತ್ರಕ್ಕೆ ಆಯ್ಕೆ ಮಾಡಲಾಗ್ತಿದೆ.. ಇನ್ನೂ ಶಶಿಕಲಾ ಕೂಡ ತಮಿಳುನಾಡು ರಾಜಕೀಯರಂಗದಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದ್ದಾರೆ..

ಅಮ್ಮನ ಅನುಪಸ್ಥಿತಿಯಲ್ಲಿ ಚಿನ್ನಮ್ಮ ದರ್ಬಾರ್ ನಡೆದಿದ್ದು ಗೊತ್ತೇಯಿದೆ.. ಹಾಗಾಗಿ ಶಶಿಲಲಿತಾ ಸಿನಿಮಾದಲ್ಲಿ ಶಶಿಕಲಾ ಪಾತ್ರಕ್ಕೂ ಸ್ಕೋಪ್​ ಇದ್ದು, ಅಮಲಾ ಪೌಲ್​ ಅವರನ್ನ ಆ ಪಾತ್ರಕ್ಕೆ ಸಂಪರ್ಕಿಸಲಾಗ್ತಿದೆ.. ಎಲ್ಲ ಅಂದುಕೊಂಡಂತೆ ಆದ್ರೆ, ಶೀಘ್ರದಲ್ಲೇ ಶಶಿಲಲಿತಾ ಸಿನಿಮಾ ಸೆಟ್ಟೇರಲಿದೆ..

Comments are closed.