ಕರ್ನಾಟಕ

ಸೋತರು ಕುಗ್ಗದ ನಿಖಿಲ್ ಉತ್ಸಾಹ

Pinterest LinkedIn Tumblr


ಮಂಡ್ಯ: ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರ ವಿರುದ್ಧ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಸೋತರು ಕೂಡ ಧೃತಿ ಗೆಡದೆ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಮನಸು ಮಾಡಿದ್ದಾರೆ.

ರಾಜಕಾರಣದಲ್ಲಿ 15 ವರ್ಷ ಕೆಲಸ ಮಾಡಿದ್ದರು ಇಂತಹ ಚುನಾವಣೆ ನಡೆಸಲಿಕ್ಕೆ ಅವಕಾಶ ಇರೋದಿಲ್ಲ, ಇವತ್ತು ನಾನು ಹಿಂದೆ ಇದ್ದಕ್ಕೂ ಇವತ್ತಾಗಿರೋ ಬದಲಾವಣೆಗೂ, ನಾವು ತಳಮಟ್ಟದಲ್ಲಿ ಇಳಿದು ನೋಡಿದಾಗಲ್ಲೇ ಕ್ಷೇತ್ರದ ಜನರ ವಾಸ್ತಾಂಶ ಅರ್ಥವಾಗೋದು ಇದನ್ನ ನಾನು ಬಹಳ ಚನ್ನಾಗಿ ತಿಳಿದುಕೊಂಡಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ​ ವೀಡಿಯೋನಲ್ಲಿ ತಿಳಿಸಿದ್ದಾರೆ.

ನಾನು ಸೋತಿರಬಹುದು ಆದರೆ ಮಂಡ್ಯ ಬಿಡುವುದಿಲ್ಲ ಎಂದು ತಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ನಿಖಿಲ್ ಭರವಸೆ ನೀಡಿದ್ದಾರೆ. ಜಿಲ್ಲೆಯ ಮುಖಂಡರೊಂದಿಗೆ ಸೋಲಿನ ಬಳಿಕ ಚರ್ಚೆ ಮಾಡ್ತಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ.

ಚುನಾವಣೆ ಪ್ರಚಾರದ ವೇಳೆ ಕ್ಷೇತ್ರದ ಜನರಿಗೆ ಮಾತು ಕೊಟ್ಟಂತೆ ಮಂಡ್ಯದಲ್ಲಿ ತೋಟ, ಮನೆ ಕಟ್ಟೋ ವರೆಗೂ ಅಲ್ಲೆ ಶೆಡ್ ಹಾಕಿ ವಾಸಕ್ಕೂ ನಾನು ಸಿದ್ದ ಎಂಬ ಹೇಳಿಕೆ ಎಲ್ಲ ಕಡೆ ಸೌಂಡ್​ ಮಾಡುತ್ತಿದೆ. ಸೋತರು ನಿಖಿಲ್ ಉತ್ಸಾಹ ಕಂಡು ಜೆಡಿಎಸ್ ಮುಖಂಡರು ಸಂತಸಗೊಂಡಿದ್ದಾರೆ.

Comments are closed.