ಮನೋರಂಜನೆ

50 ಸಾವಿರ ಸ್ಕ್ರೀನ್​ಗಳಲ್ಲಿ ರಜನಿಯ ‘2.O’ ಚಿತ್ರ ಬಿಡುಗಡೆ..!

Pinterest LinkedIn Tumblr


ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆ್ಯಕ್ಷನ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ‘2.O’ ಚಿತ್ರ ಭರ್ಜರಿ ಬಿಡುಗಡೆಗೆ ಸಜ್ಜಾಗಿದೆ. ಅರೆರೆ, ಇದೇ ಚಿತ್ರವಲ್ಲವೇ ಹಿಂದೊಮ್ಮೆ ತೆರೆಕಂಡಿದ್ದು ಎಂದು ನೀವಂದುಕೊಳ್ಳುತ್ತಿದ್ದೀರಾ, ಹಾಗಿದ್ರೆ ನಿಮ್ಮ ಊಹೆ ಸರಿಯಾಗಿದೆ. ಏಕೆಂದರೆ ಈ ಬಾರಿ ರಿಲೀಸ್ ಆಗುತ್ತಿರುವುದು ಚೀನಾದಲ್ಲಿ ಎಂಬುದು ವಿಶೇಷ.

ಭಾರೀ ನಿರೀಕ್ಷೆ ಮೂಡಿಸಿದ್ದ ‘ರೊಬೋ’ ಕಥೆ ಅದೇಕೋ ಭಾರತದಲ್ಲಿ ಅಷ್ಟು ಸದ್ದು ಮಾಡಿರಲಿಲ್ಲ. ಆದರೂ ರಜನಿ ಚಿತ್ರಕ್ಕೆ ಬರಬೇಕಾದ ಕಲೆಕ್ಷನ್ ಮಾತ್ರ ‘2.O’ ಗೆ ಹರಿದು ಬಂದಿತ್ತು. 543 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ನಿರ್ದೇಶಕ ಶಂಕರ್ ಅವರ ಗ್ರಾಫಿಕ್ಸ್ ಕಹಾನಿ ಗಳಿಸಿದ್ದು ಸುಮಾರು 800 ಕೋಟಿ.

ಈ ಕೋಟಿಗೆ ಮತ್ತಷ್ಟು ಕೋಟಿಗಳ ಲೆಕ್ಕ ಸೇರಿಸಲು ಇದೀಗ ಲೈಕಾ ಪ್ರೊಡಕ್ಷನ್ ಚೀನಾದಲ್ಲಿ ರಜನಿ ಆಟಕ್ಕೆ ಮುಂದಾಗಿದೆ. ಜುಲೈ 12 ರಂದು ತಲೈವಾನ ರೊಬೋ ಅವತಾರ ಚೀನಾ ಬೆಳ್ಳಿಪರದೆಯಲ್ಲಿ ಆಟ ಪ್ರಾರಂಭಿಸಲಿದೆ. ಅದು ಕೂಡ 50 ಸಾವಿರಕ್ಕಿಂತಲೂ ಹೆಚ್ಚಿನ ಸ್ಕ್ರೀನ್​ಗಳಲ್ಲಿ ಎಂದು ಹೇಳಲಾಗಿದೆ.

ಸಿನಿಮಾ ಪ್ರೇಮಿಗಳಿರುವ ಚೀನಾದಲ್ಲಿ ಬಹಳಷ್ಟು ಚಿತ್ರಮಂದಿರಗಳಿದ್ದು, ಹಾಗೆಯೇ ಭಾರತೀಯ ಚಿತ್ರಗಳಿಗೆ ಹೆಚ್ಚಿನ ಪ್ರೇಕ್ಷಕರಿದ್ದಾರೆ. ಹೀಗಾಗಿ 50 ಸಾವಿರಕ್ಕಿಂತ ಅಧಿಕ ಬೆಳ್ಳಿಪರದೆಯಲ್ಲಿ 2.O ಪ್ರದರ್ಶನಗೊಳ್ಳಲಿದೆ. ಈಗಾಗಲೇ ಅಮೀರ್ ಖಾನ್ ಅಭಿನಯದ ‘ದಂಗಲ್’, ‘3 ಈಡಿಯಟ್ಸ್’, ‘ಸಿಕ್ರೆಟ್ ಸೂಪರ್ ಸ್ಟಾರ್’ ಚಿತ್ರಗಳು ಚೀನಾದಲ್ಲಿ ಭರ್ಜರಿ ಯಶಸ್ವಿಯಾಗಿದೆ. ಸಲ್ಮಾನ್ ಖಾನ್ ಅಭಿನಯ ‘ಭಜರಂಗಿ ಭಾಯಿಜಾನ್’ ಹಾಗೂ ‘ಸುಲ್ತಾನ್’ ಸಹ ನೆರೆ ರಾಷ್ಟ್ರದ ಬಾಕ್ಸಾಫೀಸ್ ಬೇಟೆಯಾಡಿದೆ.

ಹಾಗೆಯೇ 18,000 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆಯಾಗಿದ್ದ ‘ಬಾಹುಬಲಿ’ ಚಿತ್ರವು ಚೀನಾ ಗಲ್ಲಾ ಪೆಟ್ಟಿಗೆಯನ್ನು ಅಲುಗಾಡಿಸಿತ್ತು. ಇದೀಗ ರಜನಿ ಸರದಿ. ತಮ್ಮ ವಿಶಿಷ್ಟ ನಟನೆ ಮತ್ತು ಮ್ಯಾನರಿಸಂ ಮೂಲಕ ಚೀನಿಯರಿಗೆ ಚಿರಪರಿಚಿತರಾಗಿರುವ ತಮಿಳು ಸೂಪರ್ ಸ್ಟಾರ್ ‘2.O’ ಚಿತ್ರದ ಮೂಲಕ ಬಾಕ್ಸಾಫೀಸ್​ನಲ್ಲಿ ಕೊಳ್ಳೆ ಹೊಡೆಯಲಿದ್ದಾರೆ.

Comments are closed.