ಮನೋರಂಜನೆ

ಇನ್‍ಸ್ಟಾಗ್ರಾಂನಲ್ಲಿ ಮೇಕಪ್ ಇಲ್ಲದ ಫೋಟೋ ಹಾಕಿದ ಬಹುಭಾಷಾ ಕಾಜಲ್

Pinterest LinkedIn Tumblr


ಮುಂಬೈ: ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್ ಮೇಕಪ್ ಇಲ್ಲದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕಾಜಲ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮೇಕಪ್ ಇಲ್ಲದ ಫೋಟೋ ಹಾಕಿ ಅದಕ್ಕೆ, ಜನರು ತಮ್ಮನ್ನು ಹೆಚ್ಚು ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಜನರು ತೋರಿಕೆಯ ಸೌಂದರ್ಯವನ್ನು ಇಷ್ಟಪಡುತ್ತಾರೆ. ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಸೌಂದರ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಪರಿಪೂರ್ಣ ದೇಹವನ್ನು ಕಂಡುಕೊಳ್ಳುವ ಭರವಸೆಯಿಂದ ಜನರು ಲಕ್ಷಂತಾರ ರೂ. ಖರ್ಚು ಮಾಡಿ ಕಾಸ್‍ಮೆಟಿಕ್ಸ್ ಗಳನ್ನು ಹಾಗೂ ಸೌಂದರ್ಯದ ಉತ್ಪನ್ನಗಳನ್ನು ಖರೀದಿಸುತ್ತಾರೆ ಎಂದು ಬರೆದಿದ್ದಾರೆ.

ಮೇಕಪ್ ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಮೇಕಪ್ ಹಾಕಿಕೊಳ್ಳುವುದರಿಂದ ನಾವು ಯಾರು? ಮತ್ತು ನಮ್ಮ ವ್ಯಕ್ತಿತ್ವ ಏನು ಎಂಬುದನ್ನು ಹೇಳಲ್ಲ. ನಾವು ನೋಡಲು ಹೇಗೆ ಇದ್ದೇಯೋ ಹಾಗೆ ಪ್ರೀತಿಸಿದರೆ, ಅದೇ ನಮ್ಮ ನಿಜವಾದ ಸೌಂದರ್ಯ ಎಂದು ಕಾಜಲ್ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕಾಜಲ್ ಮೇಕಪ್ ಇಲ್ಲದ ಫೋಟೋ ಹಂಚಿಕೊಂಡಿದ್ದಕ್ಕೆ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವ ನಟಿಯರು ಮೇಕಪ್ ಇಲ್ಲದೆ ಜನರ ಮುಂದೆ ಬರಲು ಇಷ್ಟ ಪಡುವುದಿಲ್ಲ. ಆದರೆ ನೀವು ಮೇಕಪ್ ಇಲ್ಲದ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದೀರಾ. ನಿಮ್ಮ ಧೈರ್ಯವನ್ನು ನಾವು ಮೆಚ್ಚುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.

ಸದ್ಯ ಕಾಜಲ್ ಅಗರ್‌ವಾಲ್ ಈಗ ಹಿಂದಿಯ ‘ಕ್ವೀನ್’ ಚಿತ್ರದ ತಮಿಳಿನ ‘ಪ್ಯಾರಿಸ್-ಪ್ಯಾರಿಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

Comments are closed.