
ಅವರು ಅಪ್ಪಟ್ಟ ಅಪರಂಜಿಯಂತಹ ದಕ್ಷ ಅಧಿಕಾರಿ.. ಶಿಷ್ಟರಿಗೆ ರಕ್ಷಕ , ದುಷ್ಟರಿಗೆ ರಾಕ್ಷಸ ಅಷ್ಟೇ ಆಗದೆ, ಪೊಲೀಸರ ಬದುಕು ಬವಣೆಯನ್ನು ಅರಿತು ಕಷ್ಟಗಳನ್ನು ಕೇಳುವ ಅಧಿಕಾರಿಯಾಗಿದ್ದವರು.. ಅವರು ಪೊಲೀಸ್ ಪಟ್ಟಕ್ಕೆ ಹೆಮ್ಮೆ, ಐಪಿಎಸ್ ಅಧಿಕಾರಿಗಳ ಗರಿಮೆ ಅವರೇ ಕರ್ನಾಟಕದ ಸಿಂಗಂ , ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ..
ಬಿಇ ಮುಗಿಸಿ, ಲಕ್ನೋದಲ್ಲಿ ಎಂಬಿಎ ಮಾಡಿ.. ಮುಂಬೈ ದಾಳಿಯನ್ನು ಕಣ್ಣಾರೆ ಕಂಡು , ದಾಳಿಯಲ್ಲಿ ಮಡಿದ ಪೊಲೀಸ್ ಅಧಿಕಾರಿಗಳ ನೋವನ್ನು ನೋಡಿ.. ನಾನು ಪೊಲೀಸ್ ಆಗಬೇಕು ಎಂದು ಶಪಥ ಮಾಡಿದವರು.. ಅಂದುಕೊಂಡತೆ ಸಿವಿಲ್ ಎಕ್ಸಾಮ್ ಪಾಸ್ ಮಾಡಿ 2013ರಲ್ಲಿ ಉಡುಪಿ ಜಿಲ್ಲೆ ಎಸ್.ಪಿ ಆಗಿ ಬಂದವರು.. ಬರು ಬರುತ್ತಿದಂತೆ ಅಕ್ಷತಾ ಸಾವಿನ ಪ್ರಕರಣವನ್ನು ಸಮರ್ಥವಾಗಿ ಬೇಧಿಸಿ ಚಿಕ್ಕಮಗಳೂರಿಗೆ ಟ್ರಾನ್ಸ್ ಫರ್ ಆದವರು.. ಚಿಕ್ಕಮಗಳೂರಿನಲ್ಲಿ ಎದುರಾದ ಬಾಬಾ ಬುಡನ್ ಗಿರಿ ವಿವಾದವನ್ನು ಸರಿಪಡಿದವರು.. ಸಿಎಂ ಇಚ್ಚೆಯ ಮೇರೆಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದವರು.. ಈಗ ಕೆಲಸಕ್ಕೆ ರಾಜೀನಾಮೆ ನೀಡಿ ಹೊಸ ಜೀವನ ಪಯಣಕ್ಕೆ ಸಜ್ಜಾಗಿದ್ದಾರೆ..
ಮೂಲತಃ ತಮಿಳು ನಾಡಿನ ಕೊಯಂಮತ್ತೂರಿನವರಾಗಿರುವ ಕುಪ್ಪುಸ್ವಾಮಿ ಅಣ್ಣಾಮಲೈ ಮುಂಬರುವ ದಿನಗಳಲ್ಲಿ ಪಾಲಿಟಿಕ್ಸ್ಗೆ ಧುಮುಖಲಿದ್ದಾರಂತೆ.. 2021ರ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ಕೊಯಂ ಮತ್ತೂರಿನಿಂದ ಡಿ.ಎಂ.ಕೆ ಪಕ್ಷದಿಂದ ಸ್ಪರ್ಧಿಸಲಿದ್ದಾರಂತೆ.. ಇಷ್ಟೆಲ್ಲ ಸ್ವಾರಸ್ಯಕರ ವಿಚಾರಗಳನ್ನು ಹೊತ್ತಿರುವ ಈ ವ್ಯಕ್ತಿಯ ಮೇಲೆ ಈ ಚಿತ್ರರಂಗದವರ ಕಣ್ಣು ಬಿದ್ದಿದೆ..
ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಹಸಮಯ ಸಮಾಚಾರಗಳ ಗೂಡಾಗಿರುವ ಅಣ್ಣಾಮಲೈ ಕುರಿತು ಸಿನಿಮಾ ಮಾಡುವ ಚಿಂತನೆ ನಮ್ಮ ಸ್ಯಾಂಡಲ್ವುಡ್ ಮಂದಿಗೆ ಬಂದಿದೆ. ಯಾಕೆ ನಾವು ಅಣ್ಣಾಮಲೈ ಜೀವನದ ಬಗ್ಗೆ ಒಂದು ಸಿನಿಮಾ ಮಾಡಬಾರದು ಎಂದು ಗಾಂಧಿನಗರದಿಂದ ವಿಜಯನಗರ ನಾಗರಭಾವಿ ತನಕ ಡೈರೆಕ್ಟರ್ಸ್ ಆಂಡ್ ಪ್ರೊಡ್ಯೂಸರ್ಸ್ ಚಿಂತೆ ಮಾಡ್ತಿದ್ದಾರೆ..
ಅದ್ರಲೂ ಒಬ್ಬರು ಒಂದು ಸ್ಟೆಪ್ ಮುಂದೆ ಹೋಗಿ ಒನ್ ಲೈನ್ ಸ್ಟೋರಿ ಮಾಡೆ ಬಿಟ್ಟಿದ್ದಾರೆ ಎಂ.ಎಚ್.ಉಮಾಶಂಕರ್.. ಯಾರಿವರು ಎಂ.ಎಚ್.ಉಮಾಶಂಕರ್ ಅಂದ್ರಾ..? ಇವರು ಸಿನಿಮಾ ಮಂದಿಯಲ್ಲ , ಪೊಲೀಸ್ ಅಧಿಕಾರಿ.. ಚಿಕ್ಕಮಗಳೂರಿನವರು.. ಈಗಾಗಲೇ ಇವ್ರು ಸ್ನೇಹಿತರೊಟ್ಟಿಗೆ ಚರ್ಚೆ ಮಾಡಿದ್ದಾರಂತೆ.. ಈಗಾಗಲೇ ಎಸ್.ಪಿ.ಸಾಂಗ್ಲಿಯಾನ , ಕಿರಣ್ ಬೇಡಿಯವರಂತೆ ದಕ್ಷ ಅಧಿಕಾರಿಗಳ ಜೀವನ ಪಯಣ ಬೆಳ್ಳಿತೆರೆಯನ್ನು ಬೆಳಗಿದೆ.. ಈಗ ಅಣ್ಣಾಮಲೈ ಜೀವನ ಸಿನಿಮಾವಾದ್ರು ಅಚ್ಚರಿ ಪಡಬೇಕಿಲ್ಲ..
Comments are closed.