ಮನೋರಂಜನೆ

ಮಹೇಶ್ ಬಾಬು ಜೊತೆ ನಟಿಸುವ ಕುರಿತು ರಶ್ಮಿಕಾ ಮಂದಣ್ಣ ಹೇಳಿದ್ದೇನು ಗೊತ್ತಾ..?

Pinterest LinkedIn Tumblr


ರಶ್ಮಿಕಾ ಮಂದಣ್ಣ.. ಮೂರೇ ವರ್ಷದಲ್ಲಿ ಇಡೀ ಸೌತ್ ಇಂಡಿಯಾ ಮೆಚ್ಚೊ ಮುದ್ದು ಮಲ್ಲಿಗೆ ಆಗಿಬಿಟ್ರು.. ಫಸ್ಟ್ ಮ್ಯಾಚೇ ಸೆಂಚುರಿ ಬಾರಿಸಿದಂಗೆ, ಮೊದ ಮೊದಲ ಸಿನಿಮಾದಲ್ಲಿಯೇ ಮ್ಯಾಜಿಕ್ ಮಾಡಿಬಿಟ್ರು.. ಇವತ್ತಿಗೆ ವೀರಾಜ್ ಪೇಟೆ ಹುಡ್ಗಿ ಹೆಸರು ಬಾಲಿವುಡ್ನ ಸಂಜಯ್ ಲೀಲಾ ಬನ್ಸಾಲಿ ಆಫೀಸ್ ತನಕ ತಲುಪಿದೆ.. 25 ಲಕ್ಷಜನ ಈ ಪುಣ್ಯಾತ್​ಗಿತ್ತಿಯನ್ನು ಫಾಲೋ ಮಾಡ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಏನೇ ಮಾಡಿದ್ರು ಲಕ್ಷ ಲಕ್ಷ ಲೈಕ್ಸು, ಸಾವಿರ ಸಾವಿರ ಕಾಮೆಂಟು ಪ್ಲಸ್ ಕಾಂಪ್ಲಿಮೆಂಟು ಕೊಡ್ತಾರೆ.. ಹಿಂಗಿರೋ ರಶ್ಮಿಕಾ ಮಂದಣ್ಣ ಈಗ ತೆಲುಗು ಚಿತ್ರರಂಗದ ಸೆನ್ಸೇಷನಲ್ ಸ್ಟಾರ್​​ ಮಹೇಬ್ ಬಾಬು ಜೊತೆ ಡ್ಯುಯೆಟ್ ಹಾಡಲಿದ್ದಾರೆ..

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು.. ಮೊನ್ನೆ ಮೊನ್ನೆ ‘ಮಹರ್ಷಿ’ ಅನ್ನೋ ಸೂಪರ್ ಹಿಟ್ ಸಿನಿಮಾ ಕೊಟ್ಟು ಪ್ರೊಡ್ಯೂಸರ್ ಜೇಬ್​ ತುಂಬ ದುಡ್ಡು ತುಂಬಿಸಿದ್ದ ಸ್ಟಾರ್ ನಟ.. ಪ್ರಿನ್ಸ್ ಜೊತೆ ನಿಂತರೆ ನಾಲ್ಕು ನಾಲ್ಕು ರಾಜ್ಯದ ಮಂದಿ ಕಣ್ಣ್ ಕಣ್ಣ್ ಬಿಟ್ಟು ನೋಡ್ತಾರೆ.. ಇಂತಿಪ್ಪ ನಟನ ಜೊತೆಗೆ ನಮ್ಮ ಕೊಡಗಿನ ಕುವರಿ ಮಸ್ತ್ ಸ್ಟೆಪ್ ಹಾಕುವುದು ಪಕ್ಕಾ ಆಗಿದೆ.. ಕೆಲದಿನಗಳಿಂದ ಮಹೇಶ್​ ಬಾಬು ಚಿತ್ರದಲ್ಲಿ ರಶ್ಮಿಕಾ ನಟಿಸ್ತಾರೆ ಅನ್ನೋ ಸುದ್ದಿ ಕೇಳಿಬರ್ತಿತ್ತು.. ಈಗ ಅದು ಪಕ್ಕಾ ಆಗಿದೆ..

ಮಹೇಶ್ ಬಾಬು ಅಭಿನಯಿಸಲಿರುವ 26ನೇ ಸಿನಿಮಾ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಚಿತ್ರದಲ್ಲಿ ರಶ್ಮಿಕಾ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.. ಈ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ..

‘ಸರಿಲೆರು ನೀಕೆವ್ವರು’ ಚಿತ್ರದಲ್ಲಿ ಮಹೇಶ್ ಬಾಬು ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಮಹೇಶ್ ಬಾಬು ಮತ್ತು ರಶ್ಮಿಕಾ ನಟನೆಯ ಹೊಸ ಚಿತ್ರಕ್ಕೆ ಅನಿಲ್ ರವಿ ಪುಡಿ ನಿರ್ದೇಶನ ಮಾಡುತ್ತಿದ್ದಾರೆ.. ಈ ಹಿಂದೆ ಅನಿಲ್ ರವಿ ಪುಡಿ ‘ಎಫ್-2’, ‘ರಾಜ ದಿ ಗ್ರೇಟ್’, ‘ಪಟಾಸ್’ ಸಿನಿಮಾಗಳನ್ನು ಮಾಡಿದ್ರು.. ‘ಸರಿಲೆರು ನೀಕೆವ್ವರು’ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಟ್ಯೂನ್ ಹಾಕ್ತಿದ್ದಾರೆ..

ಮೊದಲ ಬಾರಿಗೆ ಟಾಲಿವುಡ್​​​​​​​​​ನ ಸ್ಟಾರ್ ನಟನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. “ನನಗೆ ಗೊತ್ತು ನೀವೆಲ್ಲರೂ ಈ ಬಗ್ಗೆ ಕೇಳುತ್ತಿದ್ದೀರಿ.. ನಾನು ಈಗ ಈ ಸುಂದರ ತಂಡದ ಒಂದು ಭಾಗವಾಗಿದ್ದೀನಿ. ಮಹೇಶ್ ಬಾಬು ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೀನಿ” ಅಂತ ಬರೆದುಕೊಂಡಿದ್ದಾರೆ.. ಮುಂದಿನ 2020ಕ್ಕೆ ಸಂಕ್ರಾಂತಿಗೆ ಮಹೇಶ್ ಬಾಬು , ರಶ್ಮಿಕಾ ನಟನೆಯ ‘ಸರಿಲೆರು ನೀಕೆವ್ವರು’ ಸಿನಿಮಾ ತೆರೆಕಾಣಲಿದೆ..

Comments are closed.