ಮನೋರಂಜನೆ

ಹೇಗಿದೆ ಗೊತ್ತಾ ಡಾಟರ್ ಆಫ್ ಪಾರ್ವತಮ್ಮ ಚಿತ್ರ..?

Pinterest LinkedIn Tumblr


ಡಾಟರ್ ಆಫ್ ಪಾರ್ವತಮ್ಮ. ಹರಿಪ್ರಿಯಾ, ಹಿರಿಯ ನಟಿ ಸುಮಲತಾ ನಟಿಸಿರೋ ಚಿತ್ರ..ಚಿತ್ರದಲ್ಲಿ ಹರಿಪ್ರಿಯಾ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವೊಳಗೊಂಡ ಸಿನಿಮಾ.. ಮಹಿಳಾ ಪ್ರಧಾನ ಚಿತ್ರವಾದ್ರು ಕಮರ್ಶಿಯಲ್ ಆಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.. ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿರೋ ಹರಿಪ್ರಿಯ ಅಭಿನಯಕ್ಕೆ ಕ್ಲೀನ್ ಬೋಲ್ಡ್ ಆಗಿದ್ದು.. ಚಿತ್ರದಲ್ಲಿ ಬೈಕ್ ಓಡಿಸಿ ಪಡ್ಡೆ ಹುಡುಗರ ಮನಗೆದ್ದಿದ್ದಾರೆ.

ಚಿತ್ರ: ಡಾಟರ್ ಆಫ್ ಪಾರ್ವತಮ್ಮ ನಿರ್ದೇಶಕ: ಜೆ. ಶಂಕರ್ ನಿರ್ಮಾಪಕ: ಶಶಿಧರ್ ಸಂಗೀತ: ಮಿಧುನ್ ಮುಕುಂದನ್ ಛಾಯಾಗ್ರಹಣ: ಅರುಲ್ ಸೋಮಸುಂದರಂ ತಾರಾಗಣ: ಹರಿಪ್ರಿಯಾ, ಸುಮಲತಾ, ತರಂಗ ವಿಶ್ವ, ಶ್ರೀಧರ್, ಇತರರು.

ಡಾಟರ್ ಆಫ್ ಪಾರ್ವತಮ್ಮ ಸ್ಟೋರಿ ಲೈನ್:
ಚಿತ್ರದ ನಾಯಕಿ ವೈದೇಹಿ ಸಿಐಡಿ ಆಫೀಸರ್.. ಅಹಲ್ಯ ಎಂಬ ಹುಡುಗಿಯ ಸಾವಿನ ಇನ್ವೆಷ್ಟಿಗೇಷನ್ ಕೇಸ್​ ವೈದೇಹಿಗೆ ನೀಡಲಾಗುತ್ತೆ.. ಅದು ಕೊಲೆಯಾ, ಆತ್ಮಹತ್ಯೆಯ ಎಂಬ ಜಾಡನ್ನು ಹುಡುಕಲು ಶುರು ಮಾಡೋ ವೈದೇಹಿ ಸುತ್ತ ಹಲವು ಕಥೆಗಳಿದ್ದದ್ದು ಗೊತ್ತಾಗುತ್ತೆ.. ಅದ್ರಲ್ಲಿ ಯಾರು ಕೊಲೆಗಾರ ಎಂಬುದನ್ನು ಕಂಡುಹಿಡಿಯುವುದು ದೊಡ್ಡ ಸವಾಲಾಗಿರತ್ತೆ. ಇದನ್ನು ಹೇಗೆ ಬಗೆಹರಿಸುತ್ತಾಳೆ ಎನ್ನೋದು ಡಾಟರ್ ಆಫ್ ಪಾರ್ವತಮ್ಮ ಸ್ಟೋರಿ.

ಒಂದ್ಕಡೆ ಕೇಸ್ ಇನ್ವೆಸ್ಟಿಗೇಷನ್ ಆದ್ರೆ ಇತ್ತ ಮನೆಯಲ್ಲಿ ವೈದೇಹಿ ತಾಯಿ ಪಾರ್ವತಮ್ಮ ಮಗಳು ಮದುವೆ ಮಾಡಿಕೊಳ್ಳಲಿ ಎಂದು ದುಂಬಾಲು ಬಿದ್ದಿರುತ್ತಾಳೆ.. ಆದ್ರೆ ವೈದೇಹಿ ಮಾತ್ರ ಇದಕ್ಕೆ ಸುತಾರಾಂ ಒಪ್ಪುತ್ತಿರಲಿಲ್ಲ..ಕೊನೆಗೂ ವೈದೇಹಿ ಮದುವೆಗೆ ಒಪ್ಪಿಕೊಳ್ಳುತ್ತಾಳಾ ಇಲ್ವಾ ಅನ್ನೋದ್ರ ಜೊತೆಒಬ್ಬ ಪೋಲೀಸ್ ಅಧಿಕಾರಿ ಜೀವನ ಯಾವೆಲ್ಲ ರೀತಿ ಇರುತ್ತೆ ಅನ್ನೋದನ್ನ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಆರ್ಟಿಸ್ಟ್ ಪರ್ಫಾಮೆನ್ಸ್:
ಹರಿಪ್ರಿಯ ಎಂದಿನಂತೆ ಸಖತ್ ಬೋಲ್ಡ್ ಆಗಿ ಅಭಿನಯಿಸಿದ್ದು. ಸುಮಲತಾರನ್ನ ತೆರೆ ಮೇಲೆ ನೋಡೋದೆ ಒಂದು ಖುಷಿ. ಉಳಿದಂತೆ ತರಂಗ ವಿಶ್ವ, ಶ್ರೀಧರ್ ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಡಾಟರ್ ಆಫ್ ಪಾರ್ವತಮ್ಮ ಫ್ಲಸ್ ಪಾಯಿಂಟ್:
⦁ ಸ್ಟೋರಿ,⦁ ಹರಿಪ್ರಿಯ ನಟನೆ, ಸ್ಟೈಲ್⦁ ಪಾತ್ರಧಾರಿಗಳ ಅಭಿನಯ,⦁ ಸಂಗೀತ

ಡಾಟರ್ ಆಫ್ ಪಾರ್ವತಮ್ಮ ಮೈನಸ್ ಪಾಯಿಂಟ್:
⦁ ಚಿತ್ರಕಥೆ⦁ ಸಿನಿಮಾಟೋಗ್ರಫಿ,ಇನ್ವೆಸ್ಟಿಗೇಷನ್ ಪಾತ್ರದಲ್ಲಿ ಹರಿಪ್ರಿಯಾ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ..ಹೊಸ ಗೆಟಪ್​ನಲ್ಲಿ ಹರಿಪ್ರಿಯಾ ನೋಡೋಕೆ ಸಖತ್ ಬೋಲ್ಡ್ ಆಗಿ ತೆರೆ ಮೇಲೆ ಮಿಂಚಿದ್ದು ಕೆಲವೊಂದು ನ್ಯೂನ್ಯತೆಯನ್ನು ಹೊರತು ಪಡಿಸಿದ್ರೆ ಚಿತ್ರ ಚೆನ್ನಾಗಿ ಮೂಡಿಬಂದಿದೆ.

ಟಿವಿ5 ರೇಟಿಂಗ್:4
ಶಂಕರ್ ಮೊದಲ ನಿರ್ದೇಶನದಲ್ಲಿ ಭರವಸೆ ಮೂಡಿಸಿದ್ದು..ಡಾಟರ್ ಆಫ್ ಪಾರ್ವತಮ್ಮ ಸಿನಿರಸಿಕರಿಗೆ ಎಂಜಾಯ್​ಮೆಂಟ್ ನಿಡೋದ್ರಲ್ಲಿ ಡೌಟೇ ಇಲ್ಲ..ಈ ವೀಕೆಂಡ್ ಮಿಸ್ ಮಾಡ್ದೆ ಡಾಟರ್ ಆಫ್ ಪಾರ್ವತಮ್ಮ ನೋಡಿ ಎಂಜಾಯ್ ಮಾಡಿ.

Comments are closed.