
ಈ ಮೇ ತಿಂಗಳು ಸ್ಯಾಂಡಲ್‌ವುಡ್ ಪಾಲಿಗೆ ತುಂಬಾ ಸ್ಪೆಷಲ್. ಅದ್ರಲ್ಲೂ ರೆಬೆಲ್ ಸ್ಟಾರ್ ಅಂಬರೀಶ್ ಫ್ಯಾಮಿಲಿಗಂತೂ ರೆಬೆಲ್ ಮಾಸ ಅಂದ್ರೆ ತಪ್ಪಾಗಲ್ಲ.
ಕೆಜಿಎಫ್- 2 & ರಾಬರ್ಟ್ ಸೆಟ್ಟೇರಿದ್ದು ಇದೇ ‘ಮೇ’ನಲ್ಲಿ
ಅನೌನ್ಸ್ ಆಯ್ತು ಪೈಲ್ವಾನ್- ಕುರುಕ್ಷೇತ್ರ ರಿಲೀಸ್ ಡೇಟ್..!
ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಾದ ಕೆಜಿಎಫ್ ಸೀಕ್ವೆಲ್ ಹಾಗೂ ರಾಬರ್ಟ್ ಮುಹೂರ್ತ ಕಂಡಿದ್ದು ಇದೇ ತಿಂಗಳಲ್ಲಿ. ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡೆತ್ತುಗಳಾಗಿ ಸದ್ಯ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಠಿಸ್ತಿದ್ದಾರೆ. ಅದ್ರಲ್ಲೂ ಬಾಕ್ಸಾಫೀಸ್ ಸುಲ್ತಾನ್ಗಳಾಗಿ ಅಬ್ಬರಿಸ್ತಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಮತ್ತೊಂದು ಮೆಗಾ ಮಲ್ಟಿಸ್ಟಾರರ್ ಸಿನಿಮಾ ಪೈಲ್ವಾನ್. ಇದರ ರಿಲೀಸ್ ಡೇಟ್ ಸೇರಿದಂತೆ ದರ್ಶನ್ರ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಡೇಟ್ ಕೂಡ ಇದೇ ಮೇ ತಿಂಗಳಲ್ಲಿ ಚಿತ್ರತಂಡಗಳು ಅಫಿಶಿಯಲ್ ಆಗಿ ಅನೌನ್ಸ್ ಮಾಡಿದ್ವು. ವರಮಹಾಲಕ್ಷ್ಮಿ ಹಬ್ಬದ ದಿನ ವರ್ಲ್ಡ್ ವೈಡ್ ಗ್ರ್ಯಾಂಡ್ ರಿಲೀಸ್ ಆಗೋದಾಗಿ ಅಡ್ವಾನ್ಸ್ ಆಗಿ ಅಧಿಕೃತವಾಗಿ ರಿಲೀಸ್ ಡೇಟ್ ಸಿನಿರಸಿಕರ ಮುಂದಿಟ್ಟಿವೆ.
ಚಿತ್ರರಂಗ & ಅಂಬಿ ಕುಟುಂಬಕ್ಕೆ ರೆಬೆಲ್ ಮಾಸವಾದ ಮೇ
ಎಲೆಕ್ಷನ್ಸ್ನಲ್ಲಿ ಸುಮಕ್ಕ ವಿನ್, ಸಿನಿಮಾ ಕೂಡ ಗ್ರ್ಯಾಂಡ್ ರಿಲೀಸ್
ಎಂಪಿ ಎಲೆಕ್ಷನ್ಸ್ನಲ್ಲಿ ಸುಮಲತಾ ಅಂಬರೀಶ್ ಒಂದೂವರೆ ಲಕ್ಷ ವೋಟ್ಗಳ ಲೀಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಜಯಭೇರಿ ಭಾರಿಸಿದ್ರು. ಇದು ಯಶ್- ದಚ್ಚು ಫ್ಯಾನ್ಸ್ ಸೇರಿದಂತೆ ಇಡೀ ಅಂಬಿ ಅಭಿಮಾನಿ ವೃಂದಕ್ಕೆ ಖುಷಿ ಕೊಟ್ಟಿದೆ.
ಇನ್ನು ಸುಮಲತಾ ಗೆಲುವಿನ ಸಿಂಚನ ಬೀರಿದ ಮರುದಿನವೇ ಅವರ ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗಿ ಬಿಗ್ ಓಪನಿಂಗ್ ಪಡ್ಕೊಂಡಿದೆ. ಹರಿಪ್ರಿಯಾ ತಾಯಿ ಪಾರ್ವತಮ್ಮನಾಗಿ ಸುಮಕ್ಕ ಕಮಾಲ್ ಮಾಡಿದ್ದಾರೆ. ಇದು ಅಂಬಿ ಕುಟುಂಬಕ್ಕೆ ಡಬಲ್ ಧಮಾಕವೇ ಸರಿ.
ಕಂಠೀರವ ಸ್ಟುಡಿಯೋದಲ್ಲಿ ಅಂಬಿ 6ನೇ ತಿಂಗಳ ಪುಣ್ಯತಿಥಿ..!!
ಅಂಬಿ ಕುಟುಂಬದ ಜೊತೆ ಅಭಿಮಾನಿಗಳಿಂದ ವಿಶೇಷ ಪೂಜೆ
ಬ್ಯಾಕ್ ಟು ಬ್ಯಾಕ್ ಖುಷಿ ವಿಚಾರಗಳ ಜೊತೆ ಇದು ಕೊಂಚ ಕಹಿಯ ವಿಚಾರ ಅಂದ್ರೆ ತಪ್ಪಾಗಲ್ಲ. ಕಲಿಯುಗದ ಕರ್ಣ, ಚಿತ್ರರಂಗದ ಹಿರಿಜೀವ, ಸಮಸ್ಯೆಗಳನ್ನ ಚಿಟಿಕೆ ಹೊಡೆಯೋ ಅಷ್ಟರಲ್ಲಿ ಪರಿಹರಿಸ್ತಾ ಇದ್ದ ಅಂಬರೀಶ್ ನಮ್ಮನ್ನಗಲಿ ಆರು ತಿಂಗಳೇ ಕಳೆಯಿತು. ಆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರೋ ಅವ್ರ ಸಮಾಧಿ ಬಳಿ ಅಂಬಿ ಕುಟುಂಬ ಸಮೇತ ಅಭಿಮಾನಿ ವೃಂದ 6ನೇ ತಿಂಗಳ ಪುಣ್ಯಸ್ಮರಣೆಯನ್ನ ನೆರವೇರಿಸಿದೆ.
ಸಹಸ್ರಾರು ಅಭಿಮಾನಿಗಳು ಬಂದು ಅಂಬಿಗೆ ನಮನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಯೊಬ್ಬ ಹರಕೆಯಂತೆ ಅಂಬಿ ಸಮಾಧಿ ಬಳಿ ಕೇಶಮಂಡನೆ ಮಾಡಿ ಅಭಿಮಾನ ಮೆರೆದಿದ್ದು ವಿಶೇಷ.
ಮೇ 29ರಂದು ರೆಬೆಲ್ ಸ್ಟಾರ್ ಬರ್ತ್ ಡೇ ಸೆಲೆಬ್ರೇಷನ್..!
ಮೇ 31ಕ್ಕೆ ಅಭಿಷೇಕ್ ಅಮರ್ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ
ಇದೇ ಮೇ 29ಕ್ಕೆ ಅಂಬಿ ಜನುಮದಿನ. ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳೋಕ್ಕೆ ಅವರಿಲ್ಲಾ ಅಂದ್ರೂ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಎಂದಿನಂತೆ ಈ ವರ್ಷವೂ ಅವ್ರ ಹುಟ್ಟುಹಬ್ಬ ಆಚರಿಸೋ ಮೂಲಕ ಗೌರವ ಸೂಚಿಸಲಿದ್ದಾರೆ. ಇದು ಅಂಬಿ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಅಂಬಿ ಇಲ್ಲದ ಮೊದಲ ಬರ್ತ್ ಡೇ ಆಗ್ತಿದೆ ಅನ್ನೋದು ನೋವಿನ ಸಂಗತಿ.
ಇವೆಲ್ಲದರ ಜೊತೆಗೆ ಅಂಬಿ ತನಯ ಅಭಿಷೇಕ್ ಅಂಬರೀಶ್ ಇದೇ ತಿಂಗಳಾಂತ್ಯಕ್ಕೆ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟು ಕನ್ನಡ ಸಿನಿಪ್ರಿಯರ ಆಶೀರ್ವಾದ ಪಡೆಯಲು ಬರ್ತಿದ್ದಾರೆ. ನಾಗಶೇಖರ್ ನಿರ್ದೇಶನ ಹಾಗೂ ಎನ್ ಸಂದೇಶ್ ನಿರ್ಮಾಣದ ಅಮರ್ ಇದೇ ಮೇ 31ಕ್ಕೆ ವರ್ಲ್ಡ್ ವೈಡ್ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಅಲ್ಲಿದೆ ಇದು ರೆಬೆಲ್ ಮಾಸ ಅನ್ನೋದ್ರಲ್ಲಿ ಯಾವುದೇ ತಪ್ಪಿಲ್ಲ ಅಂತಿದ್ದಾರೆ ಗಾಂಧಿನಗರದ ಪಂಡಿತರು.
Comments are closed.