ಮನೋರಂಜನೆ

ವರ್ಧನ್- ರಾಘವ್ ಹಫ್ತಾಗೆ ಬ್ಲ್ಯಾಕ್ ಕೋಬ್ರಾ ಬೋಲ್ಡ್..!

Pinterest LinkedIn Tumblr


ಅಂಡರ್​ವರ್ಲ್ಡ್​ ಬೇಸ್ಡ್ ಸಿನಿಮಾಗಳು ಮಾಡೋದ್ರಲ್ಲಿ ದುನಿಯಾ ವಿಜಿ ಎತ್ತಿದ ಕೈ. ಅಷ್ಟೇ ಅಲ್ಲ, ಬೆಟ್ಟದಷ್ಟು ಕನಸು ಹೊತ್ತು ಸಿನಿಮಾ ಮಾಡೋರಿಗೂ ವಿಜಿ ಸಾಥ್ ಕೊಡ್ತಾರೆ. ಅದ್ರಲ್ಲೂ ರೌಡಿಸಂ ಕಥಾನಕ ಮಾಡಿದ್ರೆ ಬ್ಲ್ಯಾಕ್ ಕೋಬ್ರಾಗೆ ಮತ್ತಷ್ಟು ಖುಷಿ ಕೊಡೋದ್ರಲ್ಲಿ ಡೌಟೇ ಇಲ್ಲ.

ಸಿಂಗಲ್ ಟೀಸರ್​ನಿಂದಲೇ ಎಲ್ಲಿಲ್ಲದ ಕುತೂಹಲ ಹುಟ್ಟಿಸಿರೋ ಹಫ್ತಾ, ಸದ್ಯ ಸ್ಯಾಂಡಲ್​ವುಡ್​ನ ಭರವಸೆಯ ಸಿನಿಮಾ ಆಗೋ ಲಕ್ಷಣಗಳು ತೋರಿದೆ. ಪ್ರಕಾಶ್ ಹೆಬ್ಬಾಳ ನಿರ್ದೇಶಿಸಿ, ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರ್​​ನಡಿ ಮಂಜುನಾಥ್ ಅನ್ನೋ ಗೆಳೆಯರ ಜೊತೆಗೂಡಿ ನಿರ್ಮಿಸಿರೋ ಈ ಸಿನಿಮಾ ಹೊಸ ಪ್ರತಿಭೆಗಳ ಸಿನಿಮೋತ್ಸಾಹದ ಕೈಗನ್ನಡಿಯಂತಿದೆ.

ಟೈಟಲ್ ಟ್ರ್ಯಾಕ್ ಹಾಗೂ ಟೀಸರ್​ನಿಂದ ಸದ್ದು ಮಾಡ್ತಿದ್ದ ಅಂಡರ್​ವರ್ಲ್ಡ್​ ಬೇಸ್ಡ್ ಆ್ಯಕ್ಷನ್ ಎಂಟ್ರಟೈನರ್ ಹಫ್ತಾ, ಇದೀಗ ಮೆಲೋಡಿ ಟ್ರ್ಯಾಕ್​ವೊಂದನ್ನ ರಿವೀಲ್ ಮಾಡಿದೆ. ವರ್ಧನ್ ಹಾಗೂ ರಾಘವ್ ಮುಖ್ಯಭೂಮಿಕೆಯ ಈ ಸಿನಿಮಾದ ಕಣ್ಮನ ಥಣಿಸೋ ಮೆಲೋಡಿ ಸಾಂಗ್ ಇದಾಗಿದ್ದು, ದುನಿಯಾ ವಿಜಿ ಲಾಂಚ್ ಮಾಡೋ ಮೂಲಕ ಶಹಬ್ಬಾಸ್ ಗಿರಿ ವ್ಯಕ್ತಪಡಿಸಿದ್ದಾರೆ.
ವಿಜಯ್ ಯಾರ್ಡ್ಲಿ ಸಂಗೀತ ಸಂಯೋಜನೆಯ ಈ ಹಾಡಿಗೆ ನಿರಂಜನ್ ಸಾಹಿತ್ಯ ಒದಗಿಸಿದ್ದು, ಹರಿಚರಣ್ ಹಾಗೂ ಅನುರಾಧಾ ಭಟ್ ಗಾಯನದಲ್ಲಿ ತುಂಬಾ ಸೊಗಸಾಗಿ ಮೂಡಿಬಂದಿದೆ. ನೀನೇ ನೀನೇ ಜೊತೆಯಲಿ ಅನ್ನೋ ಈ ಹಾಡು ಚಿತ್ರದ ಪ್ರಮುಖ ಸೀಕ್ವೆನ್ಸ್​ನಲ್ಲಿ ಬರೋ ಹಾಡಾಗಿದ್ದು, ಆ್ಯಕ್ಷನ್ ಜೊತೆ ಲವ್ ಟ್ರ್ಯಾಕ್​ನ ವಿಸ್ತರಿಸೋ ಹಾಡಾಗಲಿದೆ.

ಹಾರ್ಬಾರ್​ನಲ್ಲಿ ನಡೆಯೋ ಕಡಲ ತೀರದ ಭೂಗತ ಲೋಕದ ಕಥಾನಕದ ಈ ಚಿತ್ರ ಸ್ಯಾಂಪಲ್​ಗಳಿಂದ ಗಮನ ಸೆಳೆದಿದೆ. ಅದ್ರಲ್ಲೂ ಪ್ರಕಾಶ್ ಹೆಬ್ಬಾಳ ನಿರ್ದೇಶನಾ ವೈಖರಿ ಸಂಥಿಂಗ್ ಇಂಟರೆಸ್ಟಿಂಗ್ ಅನಿಸಿದೆ. ಟೀಸರ್ ಹಾಗೂ ಸಾಂಗ್ಸ್ ಪ್ರಾಮಿಸಿಂಗ್ ಆಗಿರೋದಲ್ಲದೆ ಮುಂದಿನ ತಿಂಗಳು ರಿಲೀಸ್ ಆಗ್ತಿರೋ ಸಿನಿಮಾ ಕೂಡ ಅಷ್ಟೇ ಪ್ರಾಮಿಸಿಂಗ್ ಆಗಿರಲಿದೆ ಅನ್ನೋ ಸೂಚನೆ ಕೊಟ್ಟಿದೆ.

Comments are closed.