ಮನೋರಂಜನೆ

ಡಿಫ್ರೆಂಟ್ ಸ್ಟೈಲ್‌ನಲ್ಲಿ ಮತ್ತೆ ಬುದ್ಧಿವಂತನಾಗಿ ಉಪ್ಪಿ..!

Pinterest LinkedIn Tumblr


ಕೆಲ ತಿಂಗಳುಗಳು ಪ್ರಜಾಕೀಯದಲ್ಲಿ ಬ್ಯುಸಿಯಿದ್ದ ರಿಯಲ್​ ಸ್ಟಾರ್ ಉಪ್ಪಿ ಇದೀಗ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಿಗೆ ಸಹಿ ಮಾಡ್ತಿದ್ದಾರೆ. ಎಲೆಕ್ಷನ್​ , ರಿಸಲ್ಟ್ ಬಂದಿದ್ದೇ ತಡ, ಕೊಂಚ ಪ್ರಜಾಕೀಯದಿಂದ ಬಿಡುವು ಮಾಡ್ಕೊಂಡು ಸಿನಿಮಾ ಕಡೆಗೆ ವಾಲಿದ್ದಾರೆ.. ರೀಸೆಂಟಾಗಿ ಉಪ್ಪಿಯ ಹೊಸ ಸಿನಿಮಾ ಬುದ್ದಿವಂತ 2 ಬಗ್ಗೆ ನಾವೇ ನಿಮಗೆ ಮಾಹಿತಿ ಕೊಟ್ಟಿದ್ವಿ.. ಅದ್ರಂತೆ ಇವತ್ತು ಆ ಹೊಸ ಚಿತ್ರದ ಮುಹೂರ್ತ ನೆರವೇರಿದೆ..

ರಿಯಲ್​ ಸ್ಟಾರ್ ಉಪ್ಪಿ ಸಿನಿಮಾಗಳಂದ್ರೆ ಏನೋ ಒಂಥರಾ ಕುತೂಹಲ…ಯಾಕಂದ್ರೆ ಡಿಫ್ರೆಂಟ್​ ಎಂಬ ಪದದ ಬ್ರಾಂಡ್​ ಅಂಬಾಸಿಡರೇ ಅವ್ರು..ಹಾಗಾಗಿ ಉಪ್ಪಿಯ ಯಾವುದೇ ಹೊಸ ಸಿನಿಮಾ ಸೆಟ್ಟೆರಿದ್ರೂ ಆ ಬಗ್ಗೆ ಕುತೂಹಲ ಇದ್ದೇ ಇರುತ್ತೆ..ಯೆಸ್ ಸದ್ಯ ಐಲವ್​ಯೂ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು , ಇದೀಗ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ ..ಅದೇ ಬುದ್ದಿವಂತ 2..

ಬುದ್ದಿವಂತ 2 ಚಿತ್ರದ ಮುಹೂರ್ತ ಇಂದು ಅದ್ದೂರಿಯಾಗಿ ನೆರವೇರಿದ್ದು, ಇಡೀ ಚಿತ್ರತಂಡ ಇಂದು ಭಾಗಿಯಾಗಿದ್ರು.. 2008 ರಲ್ಲಿ ಸೂಪರ್​ ಹಿಟ್ ಆಗಿದ್ದ ಬುದ್ದಿವಂತ ಸಿನಿಮಾದಲ್ಲಿ ಭಿನ್ನವಿಭಿನ್ನ ಅವತಾರದಲ್ಲಿ ಮಿಂಚಿದ್ದ ಉಪ್ಪಿ ಇದೀಗ ಮತ್ತೆ ಬುದ್ದಿವಂತನಾಗಿ ಉಪ್ಪಿ ಹೊಸ ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಳ್ತಿದ್ದಾರೆ.. ಇದು ಒಬ್ಬ ಬುದ್ದಿವಂತನ ಸುತ್ತ ನಡೆಯೋ ಸಿಂಪಲ್ ಕಥೆ ಅಂತ ಹೇಳಿದ ರಿಯಲ್ ಸ್ಟಾರ್ ,ಚಿತ್ರದಲ್ಲಿ ಎರಡು ವಿಭಿನ್ನ ಶೇಡ್​ಗಳಲ್ಲಿ ಮಿಂಚಲಿದ್ದಾರಂತೆ .

ಬುದ್ದಿವಂತ ಸಿನಿಮಾದಲ್ಲಿ ತನ್ನ ಬುದ್ದಿವಂತಿಕೆಯಿಂದ ಎಲ್ಲರನ್ನೂ ಯಾಮಾರಿಸ್ತಿದ್ದ ಉಪ್ಪಿ, ಈ ಚಿತ್ರದಲ್ಲಿ ತನ್ನ ಬುದ್ದಿವಂತಿಕೆಯಿಂದ ಕೇವಲ ಒಳ್ಳೆ ಕೆಲಸಗಳನ್ನ ಮಾತ್ರ ಮಾಡ್ತಾರಂತೆ.. ಈ ಚಿತ್ರದಲ್ಲಿ ಒಂದು ಸಪ್ರೈಸ್ ಗೆಟಪ್​ ಕೂಡ ಇದ್ಯಂತೆ.. ಮೊದಲ ಬಾರಿಗೆ ಚಿತ್ರಕ್ಕೆ ಹೊಸ ಪ್ರತಿಭೆ ಮೌರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಅಂದ್ಹಾಗೇ ಉಪ್ಪಿಗೆ ಜೋಡಿಯಾಗಿ ಮೊದಲಬಾರಿಗೆ ನಟಿ ಮೇಘನಾರಾಜ್, ಪಂಚತಂತ್ರ ಖ್ಯಾತಿಯ ಸೋನಾಲ್ ಮಿಂಚಲಿದ್ದಾರೆ. ನಟಿ ಮೇಘನಾರಾಜ್​ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ಸಿನಿಮಾ ಬಗ್ಗೆ ಒಂದಷ್ಟು ವಿಷ್ಯಗಳನ್ನ ಶೇರ್​ಮಾಡಿದ್ರು.. ವಿಶೇಷ ಅಂದ್ರೆ ಫಸ್ಟ್ ಟೈಮ್​ ಉಪ್ಪಿ ಎದುರು ವಿಲನ್​ ಆಗಿ ಅಬ್ಬರಿಸ್ತಾಇರೋದು ಡೆಡ್ಲಿ ಸ್ಟಾರ್ ಆದಿತ್ಯ..

ಇದೇ ತಿಂಗಳ 27 ನೇ ತಾರಿಖಿನಿಂದ್ಲೇ ಶೂಟಿಂಗ್​ ಶುರುವಾಗಲಿದ್ದು, ಮೈಸೂರು, ಬೆಂಗಳೂರು, ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.. ಬೀರ್​ಬಲ್​ ಚಿತ್ರ ಖ್ಯಾತಿಯ ಭರತ್ ಕ್ಯಾಮರ ಕೈಚಳಕ ಚಿತ್ರಕ್ಕಿದ್ದು, ಅಯೋಗ್ಯ ಚಿತ್ರ ಖ್ಯಾತಿಯ ಕ್ರಿಸ್ಟಲ್ ಪಾರ್ಕ್​ ಚಂದ್ರಶೇಖರ್ ಬಂಡವಾಳ ಹಾಕ್ತಿದ್ದಾರೆ.. ಇದೆಲ್ಲದಕ್ಕಿಂತ ವಿಶೇಷ ಅಂದ್ರೆ ಉಪ್ಪಿಯ ಸುಮಾರು 13 ಚಿತ್ರಗಳಿಗೆ ಮ್ಯೂಸಿಕ್ ಮಾಡಿರೋ ಗುರುಕಿರಣ್​ ಬುದ್ದಿವಂತ 2 ಗೆ ಸಂಗೀತ ನೀಡ್ತಿದ್ದಾರೆ.

ಒಟ್ನಲ್ಲಿ ಉಪ್ಪಿ ಪ್ರಜಾಕೀಯದ ನಡುವೆಯೂ ಅಭಿಮಾನಿಗಳನ್ನ ಎಂಟರ್​ಟೈನ್​ ಮಾಡೋದಕ್ಕೆ ವಿಭಿನ್ನ ಸಿನಿಮಾಗಳ ಮೂಲಕ ತೆರೆಗೆ ಬರ್ತಿರೋದು ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ..

Comments are closed.