ಮನೋರಂಜನೆ

ಶ್ರೀಮುರುಳಿಯ ಉಗ್ರಂ ಚಿತ್ರಕ್ಕೆ ಸಹಾಯ ಮಾಡಿದ್ದ ನಟ ದರ್ಶನ್!

Pinterest LinkedIn Tumblr


ವೀಕೆಂಡ್​ ವಿಥ್​ ರಮೇಶ್ ಕಿರುತೆರೆ ಕಾರ್ಯಕ್ರಮದ ಸಾಧಕರ ಸೀಟ್​ ಅಲಂಕರಿಸಿದ್ದ ಶ್ರೀಮುರಳಿ ಉಗ್ರಂ ಸಿನಿಮಾದ ದಿನಗಳನ್ನು ನೆನೆಸಿಕೊಂಡಿದ್ದಾರೆ. ಇನ್ನು ಸಕ್ಸಸ್ ಸಾಧ್ಯವೇ ಇಲ್ಲ ಅಂತ ಸುಮ್ಮನಾಗಿಬಿಟ್ಟಿದ್ದ ಶ್ರೀಮುರಳಿ ಬಾಳಿಗೆ ಆಶಾಕಿರಣವಾಗಿದ್ದು ಉಗ್ರಂ ಸಿನಿಮಾವಂತೆ.

ಪ್ರಶಾಂತ್​ ನೀಲ್​​ ಉಗ್ರಂ ಸಿನಿಮಾ ಮಾಡೋಣ ಅಂದಾಗ ಸ್ವತ: ಶ್ರೀಮುರಳಿ ಬೇಡ ಅಂದು ಬಿಟ್ಟಿದ್ರಂತೆ. ತಂಗಿ ವಿದ್ಯಾ ಅವರಿಗೆ ಲೈನ್​ ಹಾಕ್ತಿದ್ದಾರೆ ಅನ್ನೋ ಕಾರಣಕ್ಕೆ ಅಂತ ಶ್ರೀಮುರಳಿ ಅವರನ್ನು ಹೊಡಿಬೇಕು ಅಂತ ಓಡಾಡುತ್ತಿದ್ದ ಪ್ರಶಾಂತ್​ ನೀಲ್, ನಂತರ ಉಗ್ರಂ ಸಿನಿಮಾವನ್ನು ವರದಕ್ಷಿಣೆಯಾಗಿ ಶ್ರೀಮುರಳಿಗೆ ಕೊಟ್ರಂತೆ.

ಉಗ್ರಂ ಸಿನಿಮಾ ಟ್ರೈಲರ್ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ದಿನಕರ್ ತೂಗುದೀಪ್ ಫಿದಾ ಆಗೋಗಿದ್ರು. ಅಂದೇ ಉಗ್ರಂ ಸಿನಿಮಾ ವಿತರಣೆ ಮಾಡೋಕೆ ಡಿಸೈಡ್ ಮಾಡಿದ್ರು. ಉಗ್ರಂ ಸಿನಿಮಾ ಪ್ರಮೋಷನ್ ಮತ್ತು ರಿಲೀಸ್​​ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡಿದ್ದನ್ನು ಶ್ರೀಮುರಳಿ ನೆನಪಿಸಿಕೊಂಡರು.. ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ ಉಗ್ರಂ ಚಿತ್ರವನ್ನು ಬಿಡುಗಡೆ ಮಾಡಿ ಸಕ್ಸಸ್ ಆಯ್ತು.

ಹೀಗೆ ಉಗ್ರಂ ಸಿನಿಮಾ ತಮ್ಮ ಸಿನಿಕರಿಯರ್​​ನಲ್ಲೇ ಸಿಕ್ಕಾಪಟ್ಟೆ ಸ್ಪೆಷಲ್ ಯಾಕೆ..? ಹೇಗೆ ಈ ಸಿನಿಮಾ ನಿರ್ಮಾಣವಾಯ್ತು ಸಕ್ಸಸ್ ಆಯ್ತು ಅನ್ನೋದನ್ನು ರೋರಿಂಗ್​ ಸ್ಟಾರ್ ಸಾಧಕರ ಸೀಟ್​ನಲ್ಲಿ ಕೂತು ಹಂಚಿಕೊಂಡಿದ್ದಾರೆ. ಪ್ರಶಾಂತ್​ ನೀಲ್​ ಮತ್ತು ಶ್ರೀಮುರಳಿ ಜೋಡಿ ಉಗ್ರಂ ವೀರಂ ಸಿನಿಮಾಗೂ ಪ್ಲಾನ್ ಮಾಡ್ತಿದೆ. ಇನ್ನೂ ಒನ್ಸ್​ ಅಗೇನ್​ ಉಗ್ರಂ ಮ್ಯಾಜಿಕ್ ರಿಪೀಟ್ ಮಾಡೋ ಹುಮ್ಮಸ್ಸಿನಲ್ಲಿದೆ.

Comments are closed.