ಮನೋರಂಜನೆ

ಚುನಾವಣೋತ್ತರ ಸಮೀಕ್ಷೆ: ನಟ ಪವನ್ ಕಲ್ಯಾಣ​​ ಕನಸು ಭಗ್ನ?

Pinterest LinkedIn Tumblr


ಹೈದರಾಬಾದ್​​: ಆಂಧ್ರದಲ್ಲಿ ಕಿಂಗ್​​ ಮೇಕರ್​​ ಆಗಲು ಹೊರಟ ಜನಸೇನಾ ಪಕ್ಷದ ಮುಖ್ಯಸ್ಥ ಪವನ್​​ ಕಲ್ಯಾಣ್​ ಅವರ ಕನಸು ಭಗ್ನವಾಗಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ವೈಎಸ್​ಆರ್​​ ಕಾಂಗ್ರೆಸ್​​ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಹಾಗೆಯೇ ಮತ್ತೊಮ್ಮೆ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವೂ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳುತ್ತಿವೆ. ಈ ಮೂಲಕ ಪವನ್​​ ಕಲ್ಯಾಣ್​​ ಕಿಂಗ್​​ ಮೇಕರ್​​ ಆಗಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಎಕ್ಸಿಟ್​​ ಪೋಲ್​​ ಸ್ಪಷ್ಟಪಡಿಸಿದೆ.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಪವನ್​​ ಕಲ್ಯಾಣ್​​ ನೇತೃತ್ವದ ಜನಸೇನಾ ಪಕ್ಷಕ್ಕೆ 1 ರಿಂದ 4 ಸೀಟುಗಳು ಬರುವ ಸಾಧ್ಯತೆಯಿದೆ. ಜತೆಗೆ ಶೇ.10ರಷ್ಟು ಮತ ಗಳಿಸಲಿದೆ ಎಂದು ಹೇಳಲಾಗುತ್ತಿದೆ. ಪವನ್​​ ಕಲ್ಯಾಣ್​​ ಮೊದಲ ಚುನಾವಣೆ ಆಗಿರುವುದರಿಂದ ಶೇ.10 ಮತಗಳಿಕೆ ಸ್ವಾಗತಾರ್ಹ ಎಂದು ಕೂಡ ಅಂದಾಜಿಸಲಾಗಿದೆ.

ಜನಸೇನಾ ಪಕ್ಷವೂ ಆಂಧ್ರದ 140 ವಿಧಾನಸಭಾ ಕ್ಷೇತ್ರ ಹಾಗೂ 18 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಏಪ್ರಿಲ್ 11ರಂದು ಏಕಕಾಲದಲ್ಲಿಯೇ 175 ಸದಸ್ಯರ ವಿಧಾನಸಭೆ ಹಾಗೂ 25 ಸದಸ್ಯರ ಲೋಕಸಭೆಗೆ ಚುನಾವಣೆ ನಡೆಸಲಾಗಿದೆ. ಇನ್ನೇನು 23ಕ್ಕೆ ಅಧಿಕೃತವಾಗಿ ಫಲಿತಾಂಶ ಹೊರ ಬೀಳಲಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ ಸಖ್ಯ ತೊರೆದ ಆಡಳಿತರೂಢ ಟಿಡಿಪಿ ವರ್ಚಸ್ಸು ಕುಸಿದಿದೆ. ಹಾಗಾಗಿ ಈ ಚುನಾವಣೆಯಲ್ಲಿ ಪ್ರಾಬಲ್ಯ ಕಳೆದುಕೊಂಡಿದ್ದು, ಟಿಡಿಪಿ ಅಧಿಕಾರಕ್ಕೆ ಬರುವುದು ಕಷ್ಟ ಎನ್ನಲಾಗುತ್ತಿದೆ. ಇಂಡಿಯಾ ಟುಡೇ ಸಮೀಕ್ಷೆಯಂತೂ ಟಿಡಿಪಿಗೆ 37-40, ವೈಎಸ್​ಆರ್ ಕಾಂಗ್ರೆಸ್​​ಗೆ 130-135 ಸ್ಥಾನ ಸಿಗಲಿದೆ ಎಂದು ಇಂಡಿಯಾ ಟುಡೇ ಸಮೀಕ್ಷೆ ಹೇಳಿದೆ.

ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡಲು ಬಿಜೆಪಿ ಹಿಂದೇಟು ಹಾಕಿದ ಕಾರಣಕ್ಕೆ ಎನ್​ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರ ಬಂದಿತ್ತು. ಈ ಬೆಳವಣಿಗೆ ನಂತರ ಟಿಡಿಪಿ ಎದುರಿಸಿದ ಮೊದಲ ಚುನಾವಣೆ ಇದಾಗಿದ್ದು, ಬಹಳ ಕುತೂಹಲ ಮೂಡಿಸಿದೆ. ಇಂಥ ಹಲವು ಸವಾಲುಗಳ ನಡುವೆಯೂ ನಾಯ್ಡು ಚುನಾವಣೆ ಎದುರಿಸಿದ್ದಾರೆ.

Comments are closed.