ಮನೋರಂಜನೆ

ಪುತ್ರಿಯ ಮದುವೆಗೆ ತಲೆ, ಪ್ರೀತಿ ಖರ್ಚು ಮಾಡಿದ್ದೇನೆ: ನಟ ರವಿಚಂದ್ರನ್

Pinterest LinkedIn Tumblr


ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮಗಳ ಮದುವೆ ಸಂಭ್ರಮದಲ್ಲಿದ್ದಾರೆ. ಇದೇ 28 ಮತ್ತು 29 ರಂದು ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದೆ.

ಮದುವೆಯ ಬಗ್ಗೆ ಮಾತನಾಡಿದ ರವಿಚಂದ್ರನ್, ಸಿನಿಮಾ ಮಾಡಿದಂತೆಯೇ ಮದುವೆ ಕೂಡ ಇರಲಿದೆ. ಗಾಜಿನ ಸ್ಟೇಜ್ ಹಾಕಿಸಿದ್ದು, ಸಮಾರಂಭಕ್ಕೆ ಸಾಕಷ್ಟು ತಲೆ ಹಾಗೂ ಪ್ರೀತಿ ಖರ್ಚು ಮಾಡಿದ್ದೇನೆ. ಆದರೆ ದುಡ್ಡು ಖರ್ಚು ಮಾಡಿಲ್ಲ ಎಂದರು.

ಮಗಳ ಮದುವೆಗೆ ಬೆಲೆ ಕಟ್ಟಬೇಡಿ, ಆಹ್ವಾನ ಪತ್ರಿಕೆಗೆ ಖರ್ಚಾಗಿರುವುದು ನನ್ನ ತಲೆ ಅಷ್ಟೇ. ನಾನು ಪ್ರತಿ ಮದುವೆಗೆ ಹೋದಾಗ 2 ನಿಮಿಷ ಇರುತ್ತೇನೆ. ಅದಕ್ಕಾಗಿಯೇ ಮದುವೆಗೆ ಬರುವ ಎಲ್ಲರೂ ಆರಾಮಾವಾಗಿ ಇರಬೇಕು ಎಂದು ಉತ್ತಮ ವಾತಾವರಣವನ್ನು ಕ್ರೀಯೆಟ್ ಮಾಡಿದ್ದೇನೆ ಎಂದು ತಿಳಿಸಿದರು.

ಮದುವೆ ಸಮಾರಂಭದಲ್ಲಿ ನನ್ನ ಮಗಳು ಸೆಲೆಬ್ರಿಟಿ ಆಗಿರಬೇಕು ಎಂಬ ಆಸೆ ಇದೆ. ನಾನು ಕೇವಲ ತಂದೆಯಾಗಿದ್ದಾರೆ ಸಾಕು. ಮಗಳಿಗೆ ಉತ್ತಮ ಜೀವನ ರೂಪಿಸುವ ಜವಾಬ್ದಾರಿ ನನ್ನ ಮೇಲಿದ್ದು ಅದನ್ನು ಮಾಡುತ್ತಿದ್ದೇನೆ. ವಿಶೇಷ ಎಂದರೆ ಮೇ 30 ರಂದು ನನ್ನ ಹುಟ್ಟುಹಬ್ಬದ ಸಂಭ್ರಮ ಇದ್ದು, ಅಂದು ಮಗಳ ಮದುವೆ ಕಾರಣ ಬ್ಯುಸಿ ಇರುತ್ತೇನೆ. ಆದ್ದರಿಂದ ಅಭಿಮಾನಿಗಳು ಯಾರು ಮನೆ ಬಳಿ ಬರುವುದು ಬೇಡ ಎಂದು ರವಿಚಂದ್ರನ್ ಮನವಿ ಮಾಡಿಕೊಂಡರು..

ರವಿಚಂದ್ರನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದು, ಒಬ್ಬರು ಹೆಣ್ಣು ಮಗಳು ಇದ್ದಾರೆ. ಈಗ ಅವರ ಹಿರಿಯ ಮಗಳು ಗೀತಾಂಜಲಿ ಅವರು ಉದ್ಯಮಿ ಅಜಯ್ ಅವರನ್ನು ಕೈ ಹಿಡಿಯಲು ಸಿದ್ಧರಾಗಿದ್ದಾರೆ.

Comments are closed.