ಕರ್ನಾಟಕ

ಟಿವಿಯಲ್ಲೂ ಇಷ್ಟೊಂದು ಗಾತ್ರದ ‘ಹೆಬ್ಬುಲಿ’ ನೋಡಿರಲ್ಲ..!

Pinterest LinkedIn Tumblr


ಚಾಮರಾಜನಗರ: ಬೆಳಿಂಬೆಳಗ್ಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಭಾರೀ ಗಾತ್ರದ ಹೆಬ್ಬುಲಿಯೊಂದು ಪ್ರತ್ಯಕ್ಷವಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪು ರಾಷ್ಟ್ರೀಯ ಉದ್ಯಾನವನದ ಮಧುಮಲೆ ಅರಣ್ಯ ವಲಯ ಪ್ರದೇಶದಲ್ಲಿ ಈ ಗಾತ್ರದ ಹುಲಿ ಕಾಣಿಸಿಕೊಂಡಿದ್ದು ಸಫಾರಿಗೆ ಹೋಗಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಸಫಾರಿಯಲ್ಲಿ ಈ ಗಾತ್ರದ ಹುಲಿ ಕಾಣಿಸಿಕೊಳ್ಳುವುದು ಅಪರೂಪ ಹಾಗಿಯೇ ಇಲ್ಲಿ ಇಂತಹ ಹೆಬ್ಬುಲಿಯನ್ನು ನೋಡಲು ತಿಂಗಳು ಗಟ್ಟಲೇ ಕಾಯಬೇಕು ಆದರೆ ಇಂದು ತೆರಳಿದ್ದ ಪ್ರವಾಸಿಗರಿಗೆ ಈ ಭಾಗ್ಯ ದೊರೆತಿದೆ.

ಭಾರೀ ಗಾತ್ರದ ವ್ಯಾಘ್ರನನ್ನು ಕಂಡು ಭಯಭೀತರಾಗಿದಲ್ಲದೇ ಅದನ್ನು ಕಂಡ ಕ್ಷಣವನ್ನು ಎಂಜಾಯ್​ ಮಾಡಿದ್ದಾರೆ. ಪ್ರವಾಸಿಗರಿಗೆ ಎಷ್ಟು ಭಯವಾಗಿದ ಎಂಬುದು ಅವರ ಕ್ಯಾಮೆರಾ ಹಿಡಿದು ಸೆರೆಹಿಡಿಯುವಾಗ ಅವರ ಕೈಗಳು ಕೂಡ ನಡುಗಿರುವ ಘಟನೆ ನಡೆದಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಣಾ ಅರಣ್ಯವಲಯವಾಗಿ ಕೂಡ ಆಗಿದ್ದು ಅತೀ ಹೆಚ್ಚು ಹುಲಿಗಳು ಇರುವ ಅರಣ್ಯ ವಲಯ ಎಂಬ ಹೆಸರಿದೆ.

Comments are closed.