ಮನೋರಂಜನೆ

ಅಕ್ಷಯ‌ತೃತೀಯದಂದು ಮಗಳ ಪೋಟೋ ಬಿಡುಗಡೆ ‌ಮಾಡಿದ ರಾಕಿಂಗ್ ಜೋಡಿ!!

Pinterest LinkedIn Tumblr


ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಏನೇ ಮಾಡಿದರು ಸುದ್ದಿಯಾಗುತ್ತಲೇ ಇರುತ್ತೆ ಈ ಬಾರಿ ಯಶ್ ರಾಧಿಕಾ ಆಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ,ರಾಕಿಂಗ್​​​ ಸ್ಟಾರ್​​​​ ಯಶ್​ ಇದೇ ಮೊದಲ ಬಾರಿಗೆ ತಮ್ಮ ಪುತ್ರಿಯ ಫೋಟೋವನ್ನು ಟ್ವೀಟ್​ ಮಾಡಿದ್ದಾರೆ.

ಇನ್ನೂ ನನ್ನ ಮಗಳಿಗೆ ಹೆಸರಿಟ್ಟಿಲ್ಲ. ಸದ್ಯಕ್ಕೆ ಆಕೆಯನ್ನು ವೈಆರ್​​ ಅಂತಾ ಮುದ್ದಿನಿಂದ ಕರೆಯುತ್ತಿದ್ದೇವೆ. ನನ್ನ ಕಂದನಿಗೆ ನಿಮ್ಮ ಪ್ರೀತಿ ಪೂರ್ವಕ ಆಶೀರ್ವಾದವನ್ನು ನೀಡಿ ಎಂದು ಟ್ವೀಟ್​ನಲ್ಲೇ ಯಶ್​ ಕೋರಿದ್ದಾರೆ. ಯಶ್ ಮಗು ನೋಡೋಕೆ ತುಂಬಾ ಕ್ಯೂಟ್ ಆಗಿದೆ. ಪೋಟೋ ಪೋಸ್ಟ್ ಮಾಡಿದ ಹತ್ತು ನಿಮಿಷದಲ್ಲೇ 20 ಸಾವಿರ ವ್ಯೂವ್ಸ್​ ದಾಟಿದೆ. ಯಶ್ ಮತ್ತು ರಾಧಿಕಾ ಅಭಿಮಾನಿಗಳು ಫೋಟೋವನ್ನು ಲೈಕ್​ ಮಾಡಿ ಶುಭ ಕೋರುತ್ತಿದ್ದಾರೆ.

ಹೌದು ಯಶ್, ರಾಧಿಕಾ ಅವರ ಮಗಳನ್ನು ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು,ಆದರೆ ಇಷ್ಟು ದಿನ ಈ ದಂಪತಿ ತಮ್ಮ ಪುತ್ರಿಯ ಫೋಟೋವನ್ನು ಬಹಿರಂಗಪಡಿಸಿರಲಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಕೇವಲ ಮಗುವಿನ ಕೈ, ಕಾಲಿನ ಚಿತ್ರವನ್ನಷ್ಟೇ ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲವನ್ನು ಹಾಗೆಯೇ ಇರಿಸಿಕೊಂಡು ಬಂದಿದ್ದರು.

ತಮ್ಮ ಪುತ್ರಿಯಅಕ್ಷಯ‌ತೃತೀಯದಂದು ನಮ್ಮ ಅಮೂಲ್ಯ ಸಂಪತ್ತನ್ನು ನಿಮಗೆ ಮತ್ತು ಇಡೀ ಜಗತ್ತಿಗೆ ಪರಿಚಯಿಸುತ್ತೇವೆ ಎಂದು ಹೇಳಿದ್ದರು ಅದ್ರಂತೆಯೇ ಇಂದು ಯಶ್ ಮಗಳ ಫೋಟೋವನ್ನು ​ ಟ್ವೀಟ್​ ಮಾಡಿದ್ದಾರೆ.

Comments are closed.