ಮನೋರಂಜನೆ

ನಟಿ ತ್ರಿಷಾ – ನಟಿ ಚಾರ್ಮಿ ಕೌರ್ ಮದುವೆ ಪರಸ್ಪರ ಒಪ್ಪಿಗೆ ! ಈ ಬಗ್ಗೆ ನಟಿಯರಿಬ್ಬರು ಹೇಳಿದ್ದೇನು..?

Pinterest LinkedIn Tumblr

ವರ್ಷಗಳು ಉರುಳುತ್ತಿದ್ದರೂ ತನ್ನ ಸಹನಟಿ ತ್ರಿಷಾ ಕೃಷ್ಣನ್ ಬಗೆಗಿನ ಪ್ರೀತಿ ಮಾತ್ರ ಚಾರ್ಮಿ ಕೌರ್‌ಗೆ ಎಳ್ಳಷ್ಟೂ ಕಡಿಮೆಯಾಗಿಲ್ಲ. ಚಾರ್ಮಿ ಅದಾಗಲೆ ತ್ರಿಷಾರನ್ನು ಹಲವಾರು ಸಲ ಪ್ರಪೋಸ್ ಮಾಡಿದ್ದಾರೆ. “ನನ್ನನ್ನು ಮದುವೆಯಾಗುತ್ತೀಯಾ?” ಎಂದು ಕೇಳಿದ್ದಾರೆ. ವಿಶೇಷ ಎಂದರೆ ಇದಕ್ಕೆ ತ್ರಿಷಾ ಗ್ರೀನ್ ಸಿಗ್ನಲ್ ಸಹ ಕೊಟ್ಟಿರುವುದು.

2015, 2017ರಲ್ಲೂ ಚಾರ್ಮಿ ಇದೇ ರೀತಿ ಟ್ವೀಟ್ ಮಾಡಿದ್ದರು. ಆದರೆ ಇದೀಗ ಶನಿವಾರ ತ್ರಿಷಾ 36ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಚಾರ್ಮಿ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. “ಬೇಬಿ ಐ ಲವ್ ಯೂ ಟುಡೇ, ಫರೆವರ್. ನನ್ನ ಮೊಣಕಾಲ ಮೇಲೆ ಕುಳಿತು ನಿನ್ನ ಸಮ್ಮತಿಗಾಗಿ ನಿರೀಕ್ಷಿಸುತ್ತಿದ್ದೇನೆ. ನಾವು ಮದುವೆಯಾಗೋಣವೇ? ಈಗ ಕಾನೂನು ಪ್ರಕಾರ ಅವಕಾಶ ಇದೆ” ಎಂದು ಹ್ಯಾಪಿ ಬರ್ತ್‍ಡೇ ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಇದರ ಜತೆಗೆ ತ್ರಿಷಾ ತನ್ನನ್ನು ಚುಂಬಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ ಚಾರ್ಮಿ. ಇದಕ್ಕೆ ಪ್ರತಿಕ್ರಿಯಿಸಿರುವ ತ್ರಿಷಾ, “ಧನ್ಯವಾದಗಳು, ನಾನು ನೀನಗೆ ಎಂದೋ ಓಕೆ ಹೇಳಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಚಾರ್ಮಿ ಕಳೆದ ಕೆಲವು ವರ್ಷಗಳಿಂದ ನಟನೆಯಿಂದ ದೂರ ಸರಿದಿದ್ದಾರೆ. ಆಕೆ ಕೊನೆಯ ಬಾರಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದು 2015ರಲ್ಲಿ ಮಂತ್ರ, ಜ್ಯೋತಿಲಕ್ಷ್ಮಿ ಸಿನಿಮಾಗಳ ಮೂಲಕ. ಆ ಬಳಿಕ ನಿರ್ಮಾಪಕಿಯಾಗಿ ಬದಲಾದರು. ರೋಗ್, ಪೈಸಾ ವಸೂಲ್, ಮೆಹಬೂಬಾ ಚಿತ್ರಗಳನ್ನು ನಿರ್ಮಿಸಿದರು. ಸದ್ಯಕ್ಕೆ ಇಸ್ಮಾರ್ಟ್ ಶಂಕರ್, ರೊಮಾಂಟಿಕ್ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

Comments are closed.