ರಾಷ್ಟ್ರೀಯ

ರಾಜೀವ್ ಗಾಂಧಿಯ ಬದುಕು ಭ್ರಷ್ಟಾಚಾರಿ ನಂಬರ್1 ಎಂಬ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು : ರಾಹುಲ್ ಗೆ ಮೋದಿ ಟಾಂಗ್

Pinterest LinkedIn Tumblr

ಬಸ್ತಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಬದುಕು ಭ್ರಷ್ಟಾಚಾರಿ ನಂಬರ್1 ಎಂಬ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಅವರೇ 1980 ರಲ್ಲಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬೋಪೋರ್ಸ್ ಹಗರಣ ನಡೆದಿತ್ತು, ಸೈನ್ಯಕ್ಕೆ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸುವ ಸ್ವೀಡೀಶ್ ಮೂಲದ ಬೋಪೋರ್ಸ್ ಕಂಪನಿಯಿಂದ ರಾಜೀವ್ ಗಾಂಧಿ ದೊಡ್ಡ ಮೊತ್ತದ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದರು. ಈ ಮೂಲಕ ನಂಬರ್ 1 ಭ್ರಷ್ಟಾಚಾರಿ ಎಂಬ ಹಣೆ ಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಗಿತ್ತು ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷರಿಗೆ ಟಾಂಗ್ ಕೊಟ್ಟಿದ್ದಾರೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ತನ್ನ ಅಹಂಕಾರದಿಂದಲೇ ಕುಸಿಯುತ್ತಾರೆ, ಒಂದೆಡೆ ಸಮಾಜವಾದಿ ಪಕ್ಷದ ಮುಖಂಡರು ಕಾಂಗ್ರೆಸ್‌ ಜತೆಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ ಅದೇ ಸಮಾಜವಾದಿ ಪಕ್ಷದ ಜತೆ ಮಹಾ ಘಟಬಂಧನ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ, ಕಾಂಗ್ರೆಸ್‌ಗೆ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ ಹಲವು ಬಾರಿ ಬೆಂಬಲ ವಾಪಸ್‌ ಪಡೆದು ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಬಿಜೆಪಿ ಮಾತ್ರವೇ ದೇಶಕ್ಕೆ ಸ್ಥಿರ ಸರಕಾರ ನೀಡಬಲ್ಲದು ಎಂದು ಮೋದಿ ಹೇಳಿದ್ದಾರೆ.

Comments are closed.