ಕರಾವಳಿ

ನಾಟಕರಂಗದ ವಾಚಸ್ಪತಿ ಮಾಸ್ಟರ್ ಹಿರಣ್ಣಯ್ಯ : ಕಲ್ಕೂರ

Pinterest LinkedIn Tumblr

ಮಂಗಳೂರು : ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಮತ್ತುಕಲ್ಕೂರ ಪ್ರತಿಷ್ಠಾನದ ವತಿಯಿಂದ ದಿವಂಗತ ಮಾಸ್ಟರ್ ಹಿರಣ್ಣಯ್ಯ‌ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಲ್ಕೂರ ಪ್ರತಿಷ್ಠಾನದಕಚೇರಿಯಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ದಿವಂಗತ ಹಿರಣ್ಣಯ್ಯರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ‌ ಎಸ್. ಪ್ರದೀಪ ಕುಮಾರ ಕಲ್ಕೂರ ನಾಟಕರಂಗಕ್ಕೆ ಹೊಸ ತಿರುವು ನೀಡಿ ತನ್ನ ವಿಡಂಬನಾತ್ಮಕ ಮಾತಿನ ಸರಣಿಯಿಂದ ಪ್ರೇಕ್ಷಕರನ್ನು‌ ಅಯಸ್ಕಾಂತದಂತೆ ತನ್ನೆಡೆಗೆ ಸೆಳೆಯುತ್ತಿದ್ದ ಅಪ್ರತಿಮ ನಟಸಾರ್ವಭೌಮ, ವಾಚಸ್ಪತಿ ಮಾಸ್ಟರ್ ಹಿರಣ್ಣಯ್ಯ‌ ಅವರ ನಿಧನದಿಂದ ರಂಗಭೂಮಿಗೆ ಬಲು ದೊಡ್ಡ ನಷ್ಟ ಉಂಟಾಗಿದೆ‌ ಎಂದು‌ ನುಡಿದರು.

ರಂಗ ಭೂಮಿಯ ಹಿರಿಯಕಲಾವಿದರಾದವಿ.ಜಿ. ಪಾಲ್, ಸರೋಜಿನಿ ಶೆಟ್ಟಿ, ತಮ್ಮ ಲಕ್ಷ್ಮಣ, ಅಲ್ಲದೆಜಿ.ಕೆ. ಭಟ್ ಸೇರಾಜೆ, ನಿತ್ಯಾನಂದ ಕಾರಂತ್, ಮಹಾಬಲ ಶೆಟ್ಟಿ, ವಿಜಯಲಕ್ಷ್ಮಿ ಶೆಟ್ಟಿ, ಬಂದಗದ್ದೆ ನಾಗರಾಜ್, ಪೂರ್ಣಿಮಾ ಪೇಜಾವರ, ಜನಾರ್ದನ ಹಂದೆ, ದೇವಕಿ‌ಅಚ್ಚುತ, ನಂದಳಿಕೆ ಬಾಲಚಂದ್ರರಾವ್, ಎಂ.ಎಸ್. ಗುರುರಾಜ್, ಎನ್. ಎ. ಅರವಿಂದ ಮೊದಲಾದವರು ಪುಷ್ಪನಮನ ಸಲ್ಲಿಸುವ ಮೂಲಕ ಅಗಲಿದಕಲಾವಿದನಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.

Comments are closed.