ಕ್ರೀಡೆ

ಮೊದಲ ಬಾರಿಗೆ ಯುವತಿ ಕೈಯಲ್ಲಿ ಶೇವ್ ಮಾಡಿಸಿದ ಸಚಿನ್

Pinterest LinkedIn Tumblr

ಮುಂಬಯಿ: ಸಚಿನ್ ತೆಂಡೂಲ್ಕರ್ ಹಿಂದೆಂದೂ ಬೇರೆಯವರ ಕೈಯಲ್ಲಿ ಶೇವಿಂಗ್ ಮಾಡಿಸಿಲ್ಲವಂತೆ. ಇದೀಗ ಜೀವನದಲ್ಲಿ ಮೊದಲ ಬಾರಿಗೆ ಯುವತಿಯ ಕೈಯಲ್ಲಿ ಶೇವ್ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸ್ವತ: ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ಸಚಿನ್ ಈ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.

ನನಗಿದು ಮೊದಲ ಅನುಭವ. ನಿಮಗಿದರ ಬಗ್ಗೆ ಗೊತ್ತಿರಲಾರದು. ಆದರೆ ನಾನೆಂದು ಬೇರೆಯವರ ಕೈಯಲ್ಲಿ ಶೇವ್ ಮಾಡಿಸಿಲ್ಲ. ಆ ದಾಖಲೆಯಿಂದು ಮುರಿದು ಹೋಗಿದೆ ಎಂದು ಉಲ್ಲೇಖಿಸಿದ್ದಾರೆ.

ಜಿಲ್ಲೆಟ್ ಇಂಡಿಯಾದ ಸ್ಕಾಲರ್‌ಶಿಪ್‌ಗೆ ಭಾಜನವಾಗಿರುವ ಯುವತಿ ಕೈಯಲ್ಲಿ ಸಚಿನ್ ಶೇವಿಂಗ್ ಮಾಡಿಸಿದ್ದಾರೆ. ಅಲ್ಲದೆ ಖುದ್ದಾಗಿ ಸಚಿನ್ ಅವರೇ ಸ್ಕಾಲರ್‌ಶಿಪ್ ಪ್ರಮಾಣಪತ್ರವನ್ನು ಹಂಚಿದರು.

Comments are closed.