ಮನೋರಂಜನೆ

ಕೆನಡಾ ಪೌರತ್ವದ ಕುರಿತು ಬಾಲಿವುಡ್ ನಟ ಅಕ್ಷಯ್​​ ಕುಮಾರ್ ಹೇಳಿದ್ದೇನು ಗೊತ್ತಾ?

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಈಗಾಗಲೇ ಮುಗಿದಿದೆ. ದೇಶಾದ್ಯಂತ ಏಪ್ರಿಲ್​​ 29 ರಂದು ನಡೆದ ನಾಲ್ಕನೇ ಹಂತದ ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಜನ ಮತದಾನ ಮಾಡಿದ್ದಾರೆ. ಹಾಗೆಯೇ ಮುಂಬೈನಲ್ಲಿ ಕೂಡ ಅನೇಕ ಬಾಲಿವುಡ್ ಸ್ಟಾರ್​​ಗಳು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ. ಆದರೆ, ನಟ ಅಕ್ಷಯ್​​ ಕುಮಾರ್​​ ಮಾತ್ರ ಮತದಾನ ಮಾಡದೇ ಹೋದದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಎಲ್ಲಾ ಬಾಲಿವುಡ್​​ ನಟರಂತೆ ಅಕ್ಷಯ್​​ ಕುಮಾರ್​​ ಮತದಾನ ಮಾಡಿರಲಿಲ್ಲ. ಇದಕ್ಕೆ ಕಾರಣ ಅಕ್ಷಯ್ ಕುಮಾರ್ ಭಾರತದ ಪೌರತ್ವ ಹೊಂದಿಲ್ಲ ಎನ್ನುವುದು. ಅಲ್ಲದೇ ಬಾಲಿವುಡ್​​ನ​​ ಈ ನಟ ಕೆನಡಾ ಪೌರತ್ವ ಹೊಂದಿದ್ದಾರೆ ಎಂಬುದು ವಿವಾದಕ್ಕೀಡಾದ ವಿಷಯ. ಈ ವಿಚಾರದ ಬಿಂದು ಅಕ್ಷಯ್​​ ಕುಮಾರ್ ಅವರೇ ಆದುದ್ದರಿಂದ ಇತ್ತಿಚೆಗೆ ತುಸು ಜೋರು ಸುದ್ದಿಯಲ್ಲಿದ್ದರು.

ತಮ್ಮ ಪೌರತ್ವದ ಬಗೆಗಿನ ಚರ್ಚೆಗೆ ತಲೆ ಹಾಕದೇ ಸುಮ್ಮನಿದ್ದ ಅಕ್ಷಯ್​​ ಕುಮಾರ್​​ ಈಗ ಮೌನ ಮುರಿದಿದ್ದಾರೆ. ಟ್ವೀಟ್​ ಮಾಡುವ ಮೂಲಕ ತಮ್ಮ ಕೆನಡಾ ಪೌರತ್ವದ ಬಗ್ಗೆ ಅಸಲಿ ಸತ್ಯವೇನು ಎಂದು ಬಿಚ್ಚಿಟ್ಟಿದ್ಧಾರೆ. “ಜನರು ನನ್ನ ಪೌರತ್ವದ ಬಗ್ಗೆ ಯಾಕೆ ಆಸಕ್ತಿ ಹೊಂದಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನನ್ನ ಬಗ್ಗೆ ಏಕೇ ಕೆಟ್ಟದಾಗಿ ಮಾತಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ನನ್ನ ಬಳಿ ಕೆನಡಾ ಪೌರತ್ವವಿದೆ ಎಂಬುದನ್ನು ನಾನು ಎಂದೂ ಅಲ್ಲಗಳೆದಿಲ್ಲ. ಕಳೆದ 7 ವರ್ಷಗಳಿಂದ ನಾನು ಕೆನಡಾಕ್ಕೆ ಹೋಗಿಲ್ಲ. ಭಾರತದಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದೇನೆ. ಜತೆಗೆ ತೆರಿಗೆ ಪಾವತಿಸಿ ನನ್ನ ಕರ್ತವ್ಯ ಪೂರೈಸಿದ್ದೇನೆ. ದೇಶದ ಮೇಲಿನ ಪ್ರೀತಿಯನ್ನು ಸಾಬೀತು ಮಾಡಬೇಕಾದ ಪರಿಸ್ಥಿತಿ ನನಗೆ ಎಂದೂ ಬಂದಿರಲಿಲ್ಲ ಎನ್ನುವ ಮೂಲಕ ಅಸಮಾಧಾ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಅನಗತ್ಯ ನನ್ನ ಪೌರತ್ವದ ಬಗ್ಗೆ ವಿವಾದ ಸೃಷ್ಟಿಸಲಾಗುತ್ತಿದೆ. ಇದು ನನಗೆ ಬೇಸರ ತರಿಸಿದೆ. ಪೌರತ್ವ ನನ್ನ ಖಾಸಗಿ ವಿಚಾರ. ಇದು ರಾಜಕೀಯ ಮಾಡಬೇಕಾದ ವಿಷಯವಲ್ಲ. ದೇಶದ ಒಳಿತಿಗಾಗಿ ನಾನು ಶ್ರಮಿಸುತ್ತಿದ್ದೇನೆ ಎಂದು ಚರ್ಚೆಗೆ ತೆರೆ ಎಳೆದಿದ್ದಾರೆ.

Comments are closed.