ಕರ್ನಾಟಕ

ರಾಜ್ಯದ 6 ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳನ್ನ ಮುಚ್ಚುವಂತೆ ಆದೇಶ!

Pinterest LinkedIn Tumblr


ಧಾರವಾಡ: ಶಿಕ್ಷಣ ಕಾಶಿ ಎಂದೇ ಖ್ಯಾತಿ ಪಡೆದ ಧಾರವಾಡದಲ್ಲಿ ಬ್ರಿಟೀಷರ ಕಾಲದಲ್ಲಿ ತಲೆ ಎತ್ತಿದ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಬ್ರಿಟೀಷರ ಆಡಳಿತದ ಅವಧಿಯಲ್ಲಿ ಸರಿಸುಮಾರು 1985 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಇಲ್ಲಿಯವರೆಗೆ ಸಾವಿರಾರು ಶಿಕ್ಷಕಿಯರು ತರಬೇತಿ ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ, ಏಕಾಏಕಿ ರಾಜ್ಯ ಸರ್ಕಾರ ಇದೀಗ ಈ ಶಿಕ್ಷಕಿಯರ ತರಬೇತಿ ಕೇಂದ್ರವನ್ನು ಬಂದ್ ಮಾಡಲು ಆದೇಶ ಮಾಡಿದೆ. ಈ ಆದೇಶ ಹೊರಬೀಳುತ್ತಿದಂತೆ ಶಿಕ್ಷಣ ಪ್ರೇಮಿಗಳಲ್ಲಿ ಆತಂಕ ಹುಟ್ಟಿಸಿದೆ. ಇದೊಂದೇ ಅಲ್ಲ, ರಾಜ್ಯದ ಇತರ ಭಾಗದ ಇನ್ನೂ 5 ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ಮುಚ್ಚಲು ಸರ್ಕಾರ ಆದೇಶ ಹೊರಡಿಸಿದೆ.

ಮುಚ್ಚಲು ಆದೇಶಿಸಿರುವ ಸಂಸ್ಥೆಗಳು:

1) ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ, ಧಾರವಾಡ,

2) ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ, ಕಲಬುರ್ಗಿ
3) ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ, ಚಿತ್ರದುರ್ಗ
4) ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ, ಮೈಸೂರು
5) ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ, ರಾಯಚೂರು
6) ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ, ಚಿಕ್ಕನಹಳ್ಳಿ

ಈ ಆರು ತರಬೇತಿ ಸಂಸ್ಥೆಗಳನ್ನ ತಾತ್ಕಾಲಿಕ ಸ್ಥಗಿತಗೋಳಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಎಲ್ಲ ಸಂಸ್ಥೆಗಳನ್ನು ಮುಚ್ಚುವ ಸರ್ಕಾರ ನಡೆಗೆ ಧಾರವಾಡ ಶಿಕ್ಷಣ ಪ್ರೇಮಿಗಳು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಒಂದು ವಾರದಲ್ಲಿ ಸರ್ಕಾರ ನೀಡಿರುವ ಆದೇಶವನ್ನು ಹಿಂದೆ ಪಡೆಯಬೇಕು. ಪುನ: ತರಬೇತಿ ಕೇಂದ್ರವನ್ನು ಆರಂಭ ಮಾಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಜ್ಞಾವಂತರು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ಆದೇಶದ ಪ್ರತಿ

ಇನ್ನೂ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಗಳನ್ನು ಸಂಪರ್ಕಿಸಿದಾಗ ಅವರು ಹೇಳುವುದು ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಯಾರು ಆದೇಶವನ್ನು ಹೊರಡಿಸಿದ್ದಾರೋ ಅವರನ್ನು ಕೇಳಿಕೊಳ್ಳಿ’ ಎನ್ನುವ ಹಾರಿಕೆ ಉತ್ತರವನ್ನು ಕೊಡುತ್ತಾರೆ.

ರಾಜ್ಯದಲ್ಲಿನ 6 ಶಿಕ್ಷಣ ತರಬೇತಿ ಸಂಸ್ಥೆಗಳನ್ನು ಮುಚ್ಚುವ ಹುನ್ನಾರದ ಈ ನಡೆಯು ಧಾರವಾಡ ಜಿಲ್ಲೆಯ ಪಾಲಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಈ ನಿರ್ಧಾರದಿಂದ ರಾಜ್ಯ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು ಎನ್ನುವ ಆಗ್ರಹಗಳು ಕೂಡ ಧಾರವಾಡದಿಂದ ಕೇಳಿ ಬರುತ್ತಿವೆ. ಇದಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಸ್ಪಂದನೆ ಕೊಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Comments are closed.