ಮನೋರಂಜನೆ

ಪಂಚಭೂತಗಳಲ್ಲಿ ಲೀನರಾದ ಮಾಸ್ಟರ್​ ಹಿರಣ್ಣಯ್ಯ

Pinterest LinkedIn Tumblr


ಬೆಂಗಳೂರು: ಹಿರಿಯ ರಂಗಕರ್ಮಿ ಮಾಸ್ಟರ್​ ಹಿರಣ್ಣಯ್ಯ ಅವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್​​​ ಆಸ್ಪತ್ರೆಯಲ್ಲಿ ತಮ್ಮ 85 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳ ರೀತಿಯಲ್ಲಿ ಬನಶಂಕರಿ ಚಿತಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನಡೆದಿದೆ. ಕಳಸಪುರದ ಶ್ರೀನಿವಾಸ ಶಾಸ್ತ್ರಿಗಳು ಅಂತ್ಯಕ್ರಿಯೆಯ ಪೂಜಾ ವಿಧಾನಗಳನ್ನು ನಡೆಸಿಕೊಟ್ಟಿದ್ದಾರೆ.

ನಾಟಕಗಳ ಮುಖೇನ ರಾಜಕೀಯ ವಿಡಂಬನೆಗೆ ಹೆಸರುವಾಸಿಯಾಗಿದ್ದ ಮಾಸ್ಟರ್ ಹಿರಣ್ಣಯ್ಯ ತುರ್ತು ಪರಿಸ್ಥಿತಿ ಕಾಲದಲ್ಲಿ ಹಲವಾರು ರಾಜಕಿಯ ಮುಖಂಡರನ್ನು ಇನ್ನಿಲ್ಲದಂತೆ ಕಾಡಿದ್ದರು. ನಾಟಕಗಳ ಜೊತೆಗೆ ಹಲವು ಚಿತ್ರಗಳಲ್ಲೂ ನಟಿಸಿದ್ದ ಅವರು, ‘ಲಂಚಾವತಾರ’ ನಾಟಕದ ಮೂಲಕ ರಾಜ್ಯದ ಮನೆಮಾತಾಗಿದ್ದರು. ಕನ್ನಡ ರಂಗಭೂಮಿಯ ಪ್ರತಿಭಾವಂತ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು

ಮಾಸ್ಟರ್ ಹಿರಣ್ಣಯ್ಯ ದೀರ್ಘಕಾಲದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಮೂರು ದಿನಗಳ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದಾರೆ.

Comments are closed.