ರಾಷ್ಟ್ರೀಯ

ಇದು ಗೋಮೂತ್ರದಿಂದ ತಯಾರಿಸಿದ ಪರಿಸರ ಸ್ನೇಹಿ ಪಟಾಕಿ!

Pinterest LinkedIn Tumblr


ಚಂಡೀಗಢ: ಪರಿಸರಕ್ಕೆ ಮಾರಕವಾಗುವ, ಮಾಲಿನ್ಯ ಹೆಚ್ಚಿಸುವ ಪಟಾಕಿಗಲಿಂದ ಬೇಸತ್ತಿದ್ದೀರಾ? ಹಾಗಿದ್ದರೆ ಭಾರತೀಯ ಮಾರುಕಟ್ಟೆಗೆ ಗೋ ಮೂತ್ರದಿಂದ ತಯಾರಿಸಿದ ಪರಿಸರ ಸ್ನೇಹಿ ಪಟಾಕಿ ಶೀಘ್ರದಲ್ಲಿಯೇ ಲಗ್ಗೆ ಇಡಲಿದೆ. ಈ ಪರಿಸರ ಸ್ನೇಹಿ ಪಟಾಕಿಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ.

ಸಾಮಾನ್ಯವಾಗಿ ಬಳಸುವ ಪಟಾಕಿಗಳು ಸಾಕಷ್ಟು ಹೊಗೆಯನ್ನು ಉಂಟುಮಾಡುವುದರಿಂದ ವಾಯು ಮಾಲಿನ್ಯವಾಗುತ್ತದೆ. ಅಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಗೆ ನಾಂದಿಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಾಧ್ಯಾಪಕ ಡಾ.ಸಮರ್ಥ್ ಘೋಷ್ ಅವರು ಪರಿಸರ ಸ್ನೇಹಿ ಪಟಾಕಿ ತಯಾರಿಸಲು ಸಂಶೋಧನೆಯನ್ನೇ ನಡೆಸಿದ್ದಾರೆ. ಇದು ಮಾಲಿನ್ಯ ರಹಿತ ಮತ್ತು ದೃಷ್ಟಿಗೆ ಒಳ್ಳೆಯದು ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, “ಈ ವಿಶೇಷ ಪಟಾಕಿ ತಯಾರಿಸಲು ರಾಸಾಯನಿಕವಾಗಿ ಗೋ ಮೂತ್ರವನ್ನು ಬಳಸಲಾಗಿದೆ. ಹೀಗಾಗಿ ವಾಯು ಮಾಲಿನ್ಯ ಆಗುವುದಿಲ್ಲ. ಇವು ಸಾಮಾನ್ಯ ಪಟಾಕಿಗಳಂತೆ ಸಿಡಿಯುವುದಿಲ್ಲ. ಈ ಪಟಾಕಿ ಹತ್ತಿಕೊಳ್ಳುವುದು ಅಥವಾ ಬಿಡುವುದು ಎಲ್ಲವೂ ನಿಮ್ಮ ಕೈಯಲಿದೆ. ನಿಮ್ಮ ಕೈಯಿಂದ ಟ್ರಿಗರ್ ಒತ್ತುವ ಮೂಲಕ ಮಾತ್ರ ಈ ಪಟಾಕಿಗಳನ್ನು ಸಿಡಿಸಲು ಸಾಧ್ಯ. ಅಲ್ಲದೆ, ಈ ಪಟಾಕಿಗಳ ತಯಾರಿಕಾ ವೆಚ್ಚ ಕೇವಲ ಎರಡು ರೂ.ಗಳು” ಎಂದಿದ್ದಾರೆ.

ಪರಿಸರ ಸ್ನೇಹಿ ಪಟಾಕಿಗಳನ್ನು ಕಾಚಾ ವಷ್ಟುಗಳನ್ನು ಬಳಸಿ ತಯಾರಿಸಲಾಗಿದೆ. ಈ ಪಟಾಕಿಗಳಿಗೆ ‘Fire Fly’ ಎಂದು ಹೆಸರಿಟ್ಟಿರುವ ಡಾ.ಘೋಷ್, ಈ ಪಟಾಕಿ ಸಿಡಿದ ಬಳಿಕ ಗಾಳಿಯಲ್ಲಿ ರಾಕೆಟ್ ರೀತಿ ಹಾರಿ ಹೋಗುತ್ತದೆ. ಈ ಬಗ್ಗೆ ಝೀ ಮೀಡಿಯಾಗೆ ಮಾಹಿತಿ ನೀಡಿರುವ ಡಾ.ಘೋಷ್ ಅವರು, ತಾವು ಆಟಿಕೆಗಳನ್ನು ಬಳಸಿ ಈ ಪಟಾಕಿಗಳನ್ನು ತಯಾರಿಸಿದ್ದು, ಸಾಮಾನ್ಯ ಪಟಾಕಿಗಿಂತ ಜೋರಾಗಿ ಸ್ಫೋಟಿಸುತ್ತವೆ ಎಂದಿದ್ದಾರೆ.

ಗೋಮೂತ್ರ ಬಳಸಿ ಪಟಾಕಿ ತಯಾರಿಸುವ ಬಗ್ಗೆ ಸುಮಾರು 2 ವರ್ಷಗಳ ಕಾಲ ಸಂಶೋಧನೆ ನಡೆಸಿದ ಡಾ.ಘೋಷ್ ಈಗಾಗಲೇ ಈ ಪಟಾಕಿಯ ಪ್ರಯೋಗ ಮಾಡಿದ್ದು, ಯಶಸ್ವಿಯಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಈ ಪರಿಸರ ಸ್ನೇಹಿ ಪಟಾಕಿ ಮಾರುಕಟ್ಟೆಗೆ ಬರಲಿದೆ.

Comments are closed.