ಮನೋರಂಜನೆ

ಅಮ್ಮನಿಗೆ ಕ್ಯಾನ್ಸರ್ ಎಂದರೂ ಅರ್ಥ ಆಗಲ್ವಾ ನಟಿ ನಿತ್ಯಾ ಮೆನನ್ ಅಳಲು ..!

Pinterest LinkedIn Tumblr


ಸೌಂದರ್ಯ ಮತ್ತು ಅಭಿನಯದಿಂದ ಸೌತ್ ಸಿನಿರಸಿಕರ ಮನಗೆದ್ದ ನಟಿ ನಿತ್ಯಾ ಮೆನನ್, ಮಲಯಾಳಂ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲೂ ನಿತ್ಯಾ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಆದರೆ ನಿತ್ಯಾ ಮೇಲೆ ಇದೀಗ ಮಾಲಿವುಡ್​ನಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದು, ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸಬೇಕು ಅಂತ ಆಗ್ರಹಿಸ್ತಿದ್ದಾರೆ. ಸಿನಿಮಾ ಶೂಟಿಂಗ್​ಗೆ ಬಾರದೇ ನಿತ್ಯಾ ತೊಂದರೆ ಕೊಡ್ತಿದ್ದಾರೆ, ಅವರಿಗೆ ಆ್ಯಟಿಟ್ಯೂಡ್ ಜಾಸ್ತಿ ಅಂತ ನಿರ್ಮಾಪಕ, ನಿರ್ದೇಶಕರು ಮಾಲಿವುಡ್ ಕಲಾವಿದರ ಸಂಘದ ಮೆಟ್ಟಿಲೇರಿದ್ದಾರೆ.

ನಮ್ಮ ತಾಯಿಗೆ ಕ್ಯಾನ್ಸರ್ ಇದೆ. ಅವರ ಆರೋಗ್ಯವನ್ನ ನೋಡಿಕೊಳ್ಳಬೇಕಾದ್ದು ನನ್ನ ಕರ್ತವ್ಯ. ಆಕೆಯ ಸ್ಥಿತಿ ಕಂಡು ನಾನು ಅತ್ತು ಅತ್ತು ಸುಸ್ತಾಗಿದ್ದೀನಿ. ಅದೇ ಕಾರಣಕ್ಕೆ ಸಿನಿಮಾ ಶೂಟಿಂಗ್​ ಬರೋದಕ್ಕೆ ಆಗ್ತಿಲ್ಲ ಅಂತ ನಿತ್ಯಾ ಪ್ರತಿಕ್ರಿಯಿಸಿದ್ದಾರೆ. ನಮ್ಮ ತಾಯಿಗೆ ಕ್ಯಾನ್ಸರ್​ ಅಂದ್ರೂ ನಿಮಗೆ ಅರ್ಥ ಆಗೋದಿಲ್ವಾ ಅಂತ ನಿತ್ಯಾ ಆವೇದನೆ ವ್ಯಕ್ತಪಡಸಿದ್ದಾರೆ.

ಸದ್ಯ ಈ ಬಗ್ಗೆ ಮಾಲಿವುಡ್ ಕಲಾವಿದರ ಸಂಘ ಯಾವ ನಿರ್ಣಯ ಕೈಗೊಳ್ಳುತ್ತೆ ಕಾದು ನೋಡ್ಬೇಕು.

Comments are closed.