ಮನೋರಂಜನೆ

ಸಮ್ಮರ್​​ ಕಾಸ್ಟ್ಯೂಂಗಳಲ್ಲಿ ಮಿಂಚಿದ ಯೂಟರ್ನ್ ಬೆಡಗಿ!!

Pinterest LinkedIn Tumblr


ಶ್ರದ್ಧಾ ಶ್ರೀನಾಥ್​​​ ಟಾಲಿವುಡ್​​ನಲ್ಲಿ ಈಗ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿರೋ ಮತ್ತೊಬ್ಬ ಕನ್ನಡದ ನಟಿ. ರಶ್ಮಿಕಾ ಮಂದಣ್ಣ ಬಿಟ್ರೆ ತೆಲುಗು ಚಿತ್ರರಂಗದಲ್ಲಿ ಈಗ ಶ್ರದ್ಧಾರದ್ದೇ ಟಾಕು.. ಈ ಮೂಗುತಿ ಸುಂದರಿಯನ್ನ ಅಲ್ಲಿನ ಜನ ಮನಸಾರೆ ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣ ಮೈ ಚಳಿ ಬಿಟ್ಟು ಮುತ್ತಿನ ಮತ್ತೇರಿಸಿದ್ದು. ಇಷ್ಟೆಲ್ಲಾ ಮಾಡಿರೋ ಶ್ರದ್ಧಾ ಈಗ ಹಾಟ್​ ಅವತಾರ ತಾಳಿದ್ದಾರೆ.. ಅದು ಯಾಕೆ..? ಯು ಟರ್ನ್​ ಹುಡ್ಗಿಯ ಹಾಟ್​ ಅವತಾರ ಹೇಗಿದೆ..? ಅಂತ ನೋಡ್ಬೇಕಾದ್ರೆ.. ಈ ಸ್ಟೋರಿನ ಫಾಲೋ ಮಾಡಿ..

ಶ್ರದ್ಧಾ ಶ್ರೀನಾಥ್​.. ಈ ಹೆಸ್ರು ಕನ್ನಡ ಚಿತ್ರರಂಗದ ಮಟ್ಟಿಗೆ ಪಾಪ್ಯೂಲರ್​.. ಶ್ರದ್ಧಾ ಅಂದ್ರೆ ಚಂದನವನ ಸಿನಿಮಾ ಪ್ರೇಕ್ಷಕ ಈಕೆ ಯುಟರ್ನ್​ ಬ್ಯೂಟಿ ತಾನೆ ಅಂತಾರೆ. ಯಾಕಂದ್ರೆ ಶ್ರದ್ಧಾ ಶ್ರೀನಾಥ್​ ಅಭಿನಯಿಸಿದ ಮೊದಲ ಚಿತ್ರ ಯುಟರ್ನ್​.. ಮೊದಲ ಸಿನಿಮಾದಿಂದಲೇ ಶ್ರದ್ಧಾ ಶ್ರೀನಾಥ್​ ಸ್ಯಾಂಡಲ್​ವುಡ್​​ನಲ್ಲಿ ದೊಡ್ಡ ಪ್ರಚಾರಕ್ಕೆ ಬಂದ್ರು. ಅದಕ್ಕೆ ಕಾರಣ ಈಕೆಯ ಬಳಿ ಇರೋ ಸಿಂಪಲ್​​ ಬ್ಯೂಟಿ..
.
ಗಂಡ್​ ಹೈಕ್ಳಿಗೆ ಶ್ರದ್ಧಾ ಶ್ರೀನಾಥ್​ ಇಷ್ಟ ಆಗೋಕೆ ಕಾರಣ ಈಕೆಯ ಮೂಗ ಮೇಲಿರೋ ಆ ಮೂಗುತಿ. ದುಂಡು ಮುಖದ ಗೋದಿ ಬಣ್ಣದ ಈ ಸುಂದರಿಗೆ ಮೂಗುತಿ ಇದ್ದರೇನೆ ಭೂಷಣ ಅನ್ನೋ ಹುಡುಗರ ಗ್ಯಾಂಗ್ ಇದೆ. ಹೀಗಾಗಿ ಈಕೆಯನ್ನ ಮೂಗುತಿ ಸುಂದರಿ ಅಂತಾನು ಕರಿತಾರೆ.. ಈ ಅನನ್ಯಾ ಟೀಚರ್ ಬಗ್ಗೆ ಇಷ್ಟೆಲ್ಲಾ ಹೇಳೊಕೆ ಕಾರಣ ಶ್ರದ್ಧಾ ಹೊಸ ಫೋಟೋ ಶೂಟ್​ ಮಾಡಿಸಿರೋದು…

ಈಗೆ ಸಮ್ಮರ್ ಟೈಂ.. ಈ ಸೀಸನ್​ಗೆ ಸೂಟ್​ ಆಗೋ ನಾನಾ ವಿನ್ಯಾಸಗಳ ಕಾಸ್ಟ್ಯೂಂನಲ್ಲಿ ಹೀರೋಯಿನ್ಸ್ ಮಿಂಚ್ತಾರೆ. ಹಾಗೆ ಶ್ರದ್ಧಾ ಕೂಡ ಈ ಸಮ್ಮರ್​ನಲ್ಲಿ ಹೊಸ ಫೋಟೋ ಶೂಟ್​ ಮಾಡಿಸಿ ಟ್ರೆಂಡಿಯಾಗಿ ಮಿಂಚಿದ್ದಾರೆ. ವೆಸ್ಟರ್ನ್​ ಲುಕ್​​ನಲ್ಲಿ ಯುಟರ್ನ್​ ಚೆಲುವೆ ಮೋಡಿ ಮಾಡಿದ್ದಾರೆ..

ಶ್ರದ್ಧಾ ಶ್ರೀನಾಥ್​ ಫೋಟೋ ಶೂಟ್​ ಮಾಡಿಸಿದ್ದ ಎಕ್ಸಾಂಪಲ್ಸ್ ತೀರಾ ಕಡಿಮೆ.. ಆದ್ರೆ ತೆಲುಗು ಇಂಡಸ್ಟ್ರಿಗೆ ಕಾಲಿಟ್ಮೇಲೆ ಮೂಗುತಿ ಸುಂದರಿ ಕಂಪ್ಲೀಟ್ ಮದಲಾಗಿದ್ದಾರೆ. ಮೈ ಚಳಿ ಬಿಟ್ಟು ನಾಣಿ ಜತೆ ಮೈ ಜುಮ್ ಅನ್ನೋ ಹಾಗೆ ತುಟಿಸರಸ ಆಡಿರೋ ಶ್ರದ್ಧಾ ಈಗ ಹಾಟ್ ಹಾಟ್ ಫೋಟೋ ಶುಟ್​ನಲ್ಲಿ ಮಿಂದೆದ್ದಿದದಾರೆ.. ಇದಕ್ಕೆ ಕಾರಣ ಟಾಲಿವುಡ್​ ಅಂಗಳದಲ್ಲಿ ಈಗ ಶ್ರದ್ಧಾಗೆ ಬರ್ತಿರೋ ಬಿಗ್ ಆಫರ್ಸ್​…

ಶ್ರದ್ಧಾ ಸಿನಿಮಾಗಳ ಆಯ್ಕೆ ತುಂಬಾ ವಿಭಿನ್ನ.. ಶ್ರದ್ಧಾ ಆವಾಗ್ಲು ನಾಯಕಿ ಪ್ರಧಾನ ಕಥೆಗಳನ್ನೇ ಹೆಚ್ಚು ಇಷ್ಟ ಪಡ್ತಿದ್ರು. ಅದ್ರಲ್ಲೂ ಹೆಚ್ಚು ಗ್ಲಾಮರ್​​​​ ಕಥೆಗಗಳಗೆ ಮಣೆ ಹಾಕ್ತಿರಲಿಲ್ಲ. ಆದ್ರೆ ಈಗ ಈ ಫೋಟೋ ಶೂಟ್​ ನೋಡ್ತಿದ್ರೆ ಶ್ರದ್ಧಾ ಸಿನಿಮಾಭಿರುಚಿ ಬದಲಾದಂತೆ ಕಾಣಡ್ತಿದೆ. ಯುಟರ್ನ್​ ಹುಡ್ಗಿ ಮತ್ತಷ್ಟು ಗ್ಲಾಮರ್ ಆಗಿ ಕಾಣ್ತಿದ್ದಾರೆ.

ಎನಿ ವೇ ಕನ್ನಡದ ನಾಯಕಿರು ಈಗ ನೆರೆಮನೆ ಟಾಲಿವುಡ್​​ನಲ್ಲಿ ದಂಡಯಾತ್ರೆ ಆರಂಭಿಸಿದ್ದಾರೆ. ಶ್ರದ್ಧಾ ತೆಲುಗಿನಲ್ಲಿ ನಟಿಸಿರೋ ಜರ್ಸಿ ಸಿನಿಮಾದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಈ ಸಿನಿಮಾದಲ್ಲಿ ಶ್ರದ್ಧಾರ ಲುಕ್​ ನೋಡಿ ಬಿಗ್​ ಸಿನಿಮಾಗಳು ಅನನ್ಯಾ ಟೀಚರ್​​ರನ್ನ ಹುಡುಕಿಕೊಂಡು ಬರ್ತಿವೆ.. ಹೀಗಾಗಿ ಶ್ರದ್ಧಾ ಈ ಫೋಟೋ ಶೂಟ್​ಅನ್ನ ಮಾಡಿಸಿದ್ದಾರೆ…

Comments are closed.