ಕೊಚ್ಚಿ: ಶ್ರೀಲಂಕಾದಲ್ಲಿ ಐಎಸ್ಐಎಸ್ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಭಾರತ ಹಲವೆಡೆ ಕಟ್ಟೆಚ್ಚರ ವಹಿಸಿದೆ. ಇನ್ನು ರಾಷ್ಟ್ರೀಯ ತನಿಖಾ ದಳ ಸೋಮವಾರ ಐಎಸ್ಐಎಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಓರ್ವ ವ್ಯಕ್ತಿಯನ್ನ ಬಂಧಿಸಿದೆ. 29 ವರ್ಷದ ರಿಯಾಸ್ ಅಬೂಬಕರ್ ಎಂಬಾತನನ್ನ ಕೇರಳದ ಕಾಸರಗೋಡು ಬಳಿಯ ಪಲಕ್ಕಾಡ್ನಲ್ಲಿ ಬಂಧಿಸಿದ್ದು, ಈತ ಕೇರಳದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಇಂದು ಅಬೂಬಕರ್ ಅಲಿಯಾಸ್ ಅಬುದುಜಾನ್ನನ್ನ ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ. ಇನ್ನು ತನಿಖೆ ವೇಳೆ ಹಲವು ಆತಂಕಕಾರಿ ಅಂಶ ಬಾಯ್ಬಿಟ್ಟಿರುವ ಆರೋಪಿ ಬಳಿಯಿಂದ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆಯಂತೆ. ಶ್ರೀಲಂಕಾ ದಾಳಿಯ ರುವಾರಿಯಾಗಿದ್ದ ನ್ಯಾಷನಲ್ ತೌಹೀದ್ ಜಮಾತ್ ಸಂಘಟನೆಯ ನಾಯಕ ಝಾಕಿರ್ ನಾಯ್ಕ್ ಅಲಿಯಾಸ್ ಝಹ್ರಾನ್ ಹಷಿಮ್ ನೀಡುತ್ತಿದ್ದ ಆದೇಶ ಹಾಗೂ ಅವರ ವಿಡಿಯೋಗಳನ್ನ ನಾನು ಫಾಲೋ ಮಾಡ್ತಿದ್ದೆ ಅಂತ ತನಿಖೆ ವೇಳೆ ಬಾಯಿಬಿಟ್ಟಿದ್ದಾನಂತೆ. ಇಸ್ಲಾಮಿಕ್ ರಿಸರ್ಚ್ ಫೌಡೇಷನ್ನ ನಿರ್ಮಾತೃ ಝಾಕಿರ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ.
ರಾಷ್ಟ್ರೀಯ ತನಿಖಾ ದಳ ಭಾನುವಾರ ಕೇರಳದ ಕಾಸರಗೋಡಿನ ಎರಡು ಹಾಗೂ ಪಲಕ್ಕಾಡ್ನ ಒಂದು ಕಡೆ 2016ರಲ್ಲಿ ಐಎಸ್ಐಎಸ್ ಸಂಘಟನೆ ಜೊತೆ ಸಂಪರ್ಕ ಹೊಂದಿದವರ ಮನೆಯ ಮೇಲೆ ದಾಳಿ ನಡೆಸಿದೆ. ಇನ್ನು ಎನ್ಐಎ ವಶದಲ್ಲಿರುವ ರಿಯಾಸ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿರುವ ಅಬ್ದುಲ್ ರಷಿದ್ ಅಬ್ದಲ್ಲಾನೊಂದಿಗೆ ಸಂಪರ್ಕದಲ್ಲಿದ್ದೆ ಅಂತ ಒಪ್ಪಕೊಂಡಿದ್ದಾನೆ. ಅಲ್ಲದೆ ಆತನ ಆಡಿಯೋ ಕ್ಲಿಪ್ ಹಾಗೂ ವಿಡಿಯೋ ತುಣುಕುಗಳನ್ನ ನೋಡುತ್ತಿದ್ದೆ ಎಂದಿದ್ದಾನೆ. ಇನ್ನು ಭಾರತದಲ್ಲಿ ದಾಳಿ ನಡೆಸಲು ಪ್ರೇರೇಪಿಸುವಂತಹ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
Comments are closed.