ರಾಷ್ಟ್ರೀಯ

ಸುಂದರ ಹೆಂಡತಿ ಇದ್ದರೆ ಎಷ್ಟೆಲ್ಲಾ ಆಪಾಯ..! ಆನಂದ್​ ಮಹಿಂದ್ರಾ ಟ್ವೀಟ್​​​ ಹಾಸ್ಯ

Pinterest LinkedIn Tumblr


ನವದೆಹಲಿ: ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ಮಹಿಂದ್ರಾ ಗ್ರೂಪ್​​ನ ಸಂಸ್ಥಾಪಕ ಆನಂದ್​ ಮಹಿಂದ್ರಾ ಕೂಡ ಪ್ರಮುಖರು. ತಮ್ಮ ದಿನನಿತ್ಯದ ಬಿಡುವಿಲ್ಲದ ವಹಿವಾಟುಗಳ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಾರೆ.

ಹಾಗೆಯೆ ಇವರು ಮಾಡಿರುವ ಪೋಸ್ಟ್​ ಒಂದು ಈಗ ಟ್ವಿಟರ್​ ಲೋಕದಲ್ಲಿ ಸದ್ದು ಮಾಡುತ್ತಿದ್ದು, ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ. 62 ವರ್ಷಗಳಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ತಾನು ಕಿವುಡ ಮತ್ತು ಮೂಗ ಎಂಬುದನ್ನ ಮರೆಮಾಚಿ ವಂಚಿಸಿರುವ ಬಗ್ಗೆ ಬಂದಿರುವ ಬರಹವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಮೇಲಿನ ಬರಹ ಓದಿ ನನಗೆ 5 ನಿಮಿಷ ನಗು ತಡೆಯಲಾಗಲಿಲ್ಲ. ನಾನು ನನ್ನ ಹೆಂಡತಿ ಬಳಿ ಕೇಳಿದೆ,

ಒಂದು ವೇಳೆ ನಾನು ಕೂಡ ಇದೆ ರೀತಿ ವಂಚಿಸಿದ್ದರೆ ಅಂತ. ಇದಕ್ಕಾಕೆ 5 ಸೆಕೆಂಡ್​ ಕೂಡ ವ್ಯರ್ಥ ಮಾಡದೆ ಹೌದಾ.? ಹಾಗಾದರೆ ನೀವು 5 ನಿಮಿಷಗಳವರೆಗೆ ನಿಮ್ಮ ಮೊಬೈಲ್​ನಲ್ಲಿ ಮಾತನಾಡದೆ ಇರುವಿರಾ.? ಅಂತ ಪ್ರಶ್ನಿಸಿದಳು. ಇದು ಸ್ಮಾರ್ಟ್​ ಹೆಂಡತಿಯಿಂದ ಉಂಟಾಗುವ ಅಪಾಯ ಅಂತ ಟ್ವೀಟ್​​ನಲ್ಲಿ ಬರೆದಿದ್ದಾರೆ. ಇದಕ್ಕೆ ಹಲವರು ಉತ್ತರಗಳನ್ನ ಕೊಟ್ಟಿದ್ದು, ಇದನ್ನು ಗಂಡ ಹೆಂಡತಿ ನಡುವಿನ ಅತ್ಯುತ್ತಮ ಜೋಕ್​ ಅಂತ ಹೇಳಿದ್ದಾರೆ.

Comments are closed.